ಬಾಯಿ ಹುಣ್ಣಿಗೆ ಇಲ್ಲಿದೆ ಮದ್ದು

ಬಾಯಿ ಹುಣ್ಣು ತುಂಬಾ ನೋವುಂಟು ಮಾಡುವುದು ಮಾತ್ರವಲ್ಲದೆ, ಆಹಾರ ಸೇವನೆಗೂ ಇದು ಅವಕಾಶ ನೀಡುವುದಿಲ್ಲ. ಇದು ಕೆಲವೊಮ್ಮೆ ಹಲವಾರು ದಿನಗಳ ಕಾಲ ಬಾಯಿಯಲ್ಲಿ ನೋವುಂಟು ಮಾಡುತ್ತ ಲಿರುತ್ತದೆ. ಇಂತಹ ಸಮಯದಲ್ಲಿ ಇದನ್ನು ನಿವಾರಣೆ ಮಾಡಲು ನೀವು ತುಂಬಾ ಶ್ರಮ ಪಟ್ಟಿರಬಹುದು. ಇದಕ್ಕೆ ಕೆಲವೊಂದು ಮನೆಮದ್ದುಗಳನ್ನು ಬಳಸಿಕೊಂಡರೆ ಅದು ತುಂಬಾ ಪರಿಣಾಮಕಾರಿ ಆಗಿ ಬಾಯಿಯ ಹುಣ್ಣು ನಿವಾರಣೆ ಮಾಡುತ್ತದೆ.

ಬಾಯಿಯ ಒಳಭಾಗದಲ್ಲಿ ಇರುವ ಚರ್ಮದಲ್ಲಿ ಈ ಹುಣ್ಣು ಕಾಣಿಸಿಕೊಳ್ಳುವುದು. ಇದಕ್ಕೆ ಮುಖ್ಯವಾಗಿ ಹಲ್ಲಿನ ಪಟ್ಟಿಗಳು, ವಿಟಮಿನ್ ಕೊರತೆ, ನಿದ್ರೆ ಕೊರತೆ ಮತ್ತು ಒತ್ತಡವು ಪ್ರಮುಖ ಕಾರಣವಾಗಿರುವುದು. ಬಾಯಿ ಹುಣ್ಣಿಗೆ ಬಳಸಬಹುದಾದ ಕೆಲವು ಮನೆಮದ್ದುಗಳು ಈ ರೀತಿಯಾಗಿ ಇದೆ.

ಬಾಯಿ ಹುಣ್ಣಿಗೆ ಜೇನುತುಪ್ಪಜೇನುತುಪ್ಪವು ಬಾಯಿ ಹುಣ್ಣಿಗೆ ತುಂಬಾ ಪರಿಣಾಮಕಾರಿ. ಇದರಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಬಾಧಿತ ಜಾಗಕ್ಕೆ ಮೊಶ್ಚಿರೈಸರ್ ಒದಗಿಸುವುದು ಮತ್ತು ಒಣಗುವಂತೆ ತಡೆದು ಇದನ್ನು ನಿವಾರಣೆ ಮಾಡುವುದು. ಜೇನುತುಪ್ಪಕ್ಕೆ ಒಂದು ಚಿಟಿಕೆ ಅರಶಿನ ಹಾಕಿಕೊಂಡರೆ ಬಾಯಿ ಅಲ್ಸರ್ ನಿವಾರಣೆ ಮಾಡಬಹುದು.ನೀವು ದಿನದಲ್ಲಿ 3-4 ಸಲ ಹಚ್ಚಿದರೆ ಅದು ಫಲಿತಾಂಶ ನೀಡಲಿದೆ.

ತೆಂಗಿನ ಎಣ್ಣೆ


ಉರಿಯೂತ ಶಮನಕಾರಿ, ಶಿಲೀಂಧ್ರ ವಿರೋಧಿ ಮತ್ತು ವೈರಲ್ ವಿರೋಧಿ ಗುಣಗಳನ್ನು ಹೊಂದಿರುವ ತೆಂಗಿನ ಎಣ್ಣೆಯು ತುಂಬಾ ಪರಿಣಾಮಕಾರಿ ಆಗಿರುವುದು. ಇದು ನೋವಿಗೆ ತಕ್ಷಣವೇ ಶಮನ ನೀಡುವುದು. ಉತ್ತಮ ಫಲಿತಾಂಶ ಪಡೆಯಲು ನೀವು ಹಲವಾರ ಸಲ ಇದನ್ನು ಹಚ್ಚಿಕೊಳ್ಳಬೇಕು. ಘನ ತೆಂಗಿನ ಎಣ್ಣೆಯನ್ನು ಬಾಧಿತ ಜಾಗಕ್ಕೆ ಹಚ್ಚಿಬಿಡಿ. ಇದು ನೋವಿಗೆ ಶಮನ ನೀಡುವುದು.

ಅಲೋವೆರಾ ಜ್ಯೂಸ್


ಶಮನಕಾರಿ ಗುಣ ಹೊಂದಿರುವಂತಹ ಅಲೋವೆರಾ ಜ್ಯೂಸ್ ಬಾಯಿಯಲ್ಲಿ ಮೂಡುವಂತಹ ಹುಣ್ಣಿನಿಂದ ಶಮನ ನೀಡುವುದು ಮತ್ತು ಇದನ್ನು ನಿಯಮಿತವಾಗಿ ಬಳಸಿಕೊಳ್ಳಬೇಕು.ಇದು ಹುಣ್ಣನ್ನು ವೇಗವಾಗಿ ಗುಣಪಡಿಸುವುದು ಮತ್ತು ನೋವು ನಿವಾರಿಸುವುದು. ಅಲೋವೆರಾ ಜ್ಯೂಸ್ ನ್ನು ಬಾಯಿ ಮುಕ್ಕಳಿಸಿಕೊಂಡರೆ ಆಗ ಬಾಯಿ ಹುಣ್ಣಿನಿಂದ ಪರಿಹಾರ ಪಡೆಯಬಹುದು.ಅಲೋವೆರಾ ಜ್ಯೂಸ್ ಇಲ್ಲದೆ ಇದ್ದರೆ ಅದರ ಲೋಳೆ ಹಚ್ಚಿಕೊಳ್ಳಿ.

ಬಾಯಿಗೆ ಹುಣ್ಣಿಗೆ ಆಪಲ್ ಸೀಡರ್ ವಿನೇಗರ್


ಬಾಯಿ ಹುಣ್ಣಿಗೆ ಆಪಲ್ ಸೀಡರ್ ವಿನೇಗರ್ ತುಂಬಾ ಪರಿಣಾಮಕಾರಿ ಆಗಿ ಕೆಲಸ ಮಾಡುತ್ತದೆ. ಇದರಲ್ಲಿ ಇರುವಂತಹ ಆಮ್ಲೀಯ ಗುಣವು ಹುಣ್ಣು ಉಂಟು ಮಾಡುವಂತಹ ಬ್ಯಾಕ್ಟೀರಿಯಾವನ್ನು ಕೊಲ್ಲುವುದು. ವಿನೇಗರ್ ನಿಂದ ಬಾಯಿ ಮುಕ್ಕಳಿಸಿಕೊಳ್ಳಿ. ಇದು ನೋವಿನಿಂದ ಪರಿಹಾರ ನೀಡುವುದು ಮತ್ತು ಹುಣ್ಣನ್ನು ಬೇಗನೆ ಗುಣಪಡಿಸುವುದು.ಬಾಯಿ ಮುಕ್ಕಳಿಸುವ ಮೊದಲು ವಿನೇಗರ್ ಗೆ ನೀರು ಹಾಕಿ.

ಉಪ್ಪು ನೀರು


ಬಾಯಿಯ ಹಲವಾರು ಸಮಸ್ಯೆಗಳ ನಿವಾರಣೆಗೆ ಉಪ್ಪು ನೀರನ್ನು ಬಳಸಲಾಗುತ್ತದೆ. ಇದು ಹುಣ್ಣು ನಿವಾರಣೆಗೆ ತುಂಬಾ ಪರಿಣಾಮಕಾರಿ ಮತ್ತು ಬ್ಯಾಕ್ಟೀರಿಯಾ ಕಡಿಮೆ ಮಾಡುವುದು. ಉಸಿರಿನ ದುರ್ವಾಸನೆ ತಡೆಯುವಲ್ಲಿಯೂ ಇದು ತುಂಬಾ ಪರಿಣಾಮಕಾರಿ ಆಗಿ ಕೆಲಸ ಮಾಡುತ್ತದೆ.ದಿನದಲ್ಲಿ ಎರಡು ಸಲ ನೀವು ಇದರಿಂದ ಬಾಯಿ ಮುಕ್ಕಳಿಸಿದರೆ ಪರಿಣಾಮಕಾರಿ.ಬಾಯಿ ಹುಣ್ಣಿಗೆ ಟೂಥ್ ಪೇಸ್ಟ್


ಟೂಥ್ ಪೇಸ್ಟ್ ನಲ್ಲಿ ಸೂಕ್ಷ್ಮಾಣು ವಿರೋಧಿ ಗುಣಗಳು ಇವೆ ಮತ್ತು ಇದು ಹುಣ್ಣು ಉಂಟು ಮಾಡುವಂತಹ ಬ್ಯಾಕ್ಟೀರಿಯಾ ನಿವಾರಣೆ ಮಾಡುವುದು. ಬಾಧಿತ ಜಾಗಕ್ಕೆ ಟೂಥ್ ಪೇಸ್ಟ್ ಹಚ್ಚಿಕೊಳ್ಳಿ. ಇದು ಆ ಭಾಗವನ್ನು ತಂಪಾಗಿಸುವುದು.ದಿನದಲ್ಲಿ ಒಂದು ಸಲ ನೀವು ಬಾಯಿಗೆ ಟೂಥ್ ಪೇಸ್ಟ್ ಹಚ್ಚಿಕೊಳ್ಳಿ.

ಬಾಯಿ ಹುಣ್ಣಿಗೆ ಬೆಳ್ಳುಳ್ಳಿ


ಸೂಕ್ಷ್ಮಾಣು ವಿರೋಧಿ ಗುಣ ಹೊಂದಿರುವಂತಹ ಬೆಳ್ಳುಳ್ಳಿಯು ನೋವುಂಟು ಮಾಡುವಂತಹ ಬಾಯಿಯ ಹುಣ್ಣನ್ನು ಪರಿಣಾಮಕಾರಿ ಆಗಿ ನಿವಾರಣೆ ಮಾಡುವುದು. ಇದರಲ್ಲಿ ಅಲಿಸಿನ್ ಎನ್ನುವಂತಹ ಅಂಶವಿದ್ದು, ಇದು ನೋವನ್ನು ನಿವಾರಣೆ ಮಾಡಿ, ಹುಣ್ಣಿನ ಗಾತ್ರವನ್ನು ಕೂಡ ಕಡಿಮೆ ಮಾಡುವುದು. ದಿನದಲ್ಲಿ ಎರಡು ಸಲ ಬೆಳ್ಳುಳ್ಳಿಯನ್ನು ಉಜ್ಜಿಕೊಂಡರೆ ಆಗ ಹುಣ್ಣು ಪರಿಣಾಮಕಾರಿ ಆಗಿ ನಿವಾರಣೆ ಆಗುತ್ತದೆ. 

Mouth ulcers are not only very painful, but they do not allow food intake. It can be painful in the mouth for several days. You may be too tired to alleviate it at this time. Using some home remedies can be very effective in relieving oral ulcers.

The ulcer appears on the skin of the inside of the mouth. This is mainly due to dental caries, vitamin deficiency, lack of sleep, and stress. Here are some home remedies that can be used for mouth ulcers.

Honey for mouth ulcers

Honey is very effective for mouth ulcers. The moisturizer provides anti-bacterial properties to the affected area and prevents it from drying out. The oral ulcers can be alleviated by applying a pinch of honey to the honey.

Coconut oil

Coconut oil has anti-inflammatory, anti-fungal, and anti-viral properties. This is to ease the pain immediately. To get the best results, you need to put it on several times. Apply solid coconut oil to the affected area. It is to relieve pain.

Aloe vera juice

Aloe vera juice, which has anti-inflammatory properties, can be relieved by mouth ulcers and should be used regularly.

It can cure ulcers and relieve pain. Aloe vera juice can be relieved by mouth ulcers. If there is no Aloe vera juice, apply a slime.

Apple Cedar Vinegar for mouth ulcers

Apple Cedar Vinegar works great for mouth ulcers. Its acidic properties kill bacteria that cause ulcers. Dip mouth with vinegar. This will relieve the pain and heal the ulcer.

Saltwater

Saltwater is used to alleviate many problems of the mouth. It is very effective in relieving ulcers and reducing bacteria. It can also be effective in preventing bad breath.

Toothpaste for mouth ulcers

Toothpaste has anti-microbial properties and is effective in relieving bacteria that can cause ulcers. Apply toothpaste to the affected area. This is to cool the area. Once in a day, apply toothpaste to your mouth.

Garlic for mouth ulcers

Garlic, which has anti-microbial properties, is effective in relieving painful mouth ulcers. It contains Allicin, which helps relieve the pain and reduce the size of the ulcer. Rubbing garlic twice a day will relieve the ulcer.

error: Content is protected !!