ಉಚಿತ ಕಂಪ್ಯೂಟರ್ ಹಾಗೂ ಎಲ್ಲರ ಖಾತೆಗೆ ರೂ 500, 1 ಲಕ್ಷ ಸಹಾಯ ಧನ

ರಾಜ್ಯದ ಜನರಿಗೆ ಸಾಕಷ್ಟು ಗುಡ್  ನ್ಯೂಸ್ ಕೊಟ್ಟ ಸರ್ಕಾರ, ವಿವಿಧ ಯೋಜನೆಗಳಿಗೆ ಸರ್ಕಾರ ಚಾಲನೆ 

ಉದ್ಯೋಗ ಬಿಂದು ಓದುಗರಿಗೆ ನಮಸ್ಕಾರಗಳು ಇವತ್ತಿನ ಈ ಲೇಖನದಲ್ಲಿ ನಾವು ತಿಳಿಸುವ ಮಾಹಿತಿ. ಕರ್ನಾಟಕ ರಾಜ್ಯದ ಮಹಿಳೆಯರಿಗೆ ವಿವಿಧ ಯೋಜನೆಗಳು ಸರ್ಕಾರದಿಂದ ಜಾರಿಯಾಗಿವೆ.

ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ರಾಜ್ಯದಾದ್ಯಂತ ಇರುವ ಎಲ್ಲ ಬಡ ಮಹಿಳೆಯರಿಗೆ ಹೊಸ ಹೊಸ ಯೋಜನೆಗಳನ್ನು ಜಾರಿ ಮಾಡಿದ್ದಾರೆ, ರಾಜ್ಯದ ಬಡ ಮಹಿಳೆಯರು ಈ ಎಲ್ಲಾ ಸೌಲಭ್ಯಗಳನ್ನು ಮಹಿಳೆಯರು ಪಡೆದುಕೊಳ್ಳಬಹುದಾಗಿದೆ, ಬನ್ನಿ ಈ ಲೇಖನದಲ್ಲಿ ಯಾವ ಎಲ್ಲಾ ಯೋಜನೆಗಳು ಮಹಿಳೆಯರಿಗಾಗಿ ಜಾರಿ ಮಾಡಲಾಗಿದೆ ಎಂಬ ಸಂಪೂರ್ಣ ಮಾಹಿತಿ ತಿಳಿದುಕೊಂಡು ಬರೋಣ!

ಸ್ತ್ರೀ ಸಾಮರ್ಥ್ಯ ನಮೋ ಸ್ತ್ರೀ ಎಂಬ ಯೋಜನೆಯು ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿಯವರು ಲೋಕಾರ್ಪಣೆ ಮಾಡಿದರು, ಪ್ರಿಲ್ ತಿಂಗಳಿನಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಸ್ವಸಹಾಯ ಗುಂಪು ಕಾರ್ಯ ಚಟುವಟಿಕೆಗಳಿಗೆ ಬಸವರಾಜ್ ಬೊಮ್ಮಾಯಿಯವರು ಚಾಲನೆ ನೀಡಿದರು.

ಈ ಯೋಜನೆಯಡಿ 500 ಕೋಟಿ ರೂಪಾಯಿ ಹಣವನ್ನು ಐವತ್ತು ಸಾವಿರ ಸ್ವಸಹಾಯ ಸಂಘಗಳಿಗೆ ತಲಾ ಒಂದು ತಲವೊಂದು ಲಕ್ಷದಂತೆ ನೀಡುವ ಗುರಿ ಸರ್ಕಾರ ಹೊಂದಿದೆ ಎಂದು ತಿಳಿಸಲಾಗಿದೆ. ಈಗ ಮೊದಲ ಹಂತದ 100 ಕೋಟಿಯಲ್ಲಿ 9890 ಮಹಿಳಾ ಸ್ವಸಹಾಯ ಗುಂಪುಗಳಿಗೆ ತಲಾ ಒಂದು ಲಕ್ಷ ರೂಪಾಯಿ ಹಣವನ್ನು ಕೊಡಲಾಗಿದೆ,

ಸ್ತ್ರೀ ಸಾಮರ್ಥ್ಯ ನಮೋಸ್ತ್ರಿ ಯೋಜನೆ ಅಡಿ ಮುಖ್ಯವಾಗಿ ಪ್ರತಿ ಜಿಲ್ಲೆಯಲ್ಲಿ ಮೂರು ಉದ್ಯಮ ಘಟಕಗಳು ಹಾಗೂ 15 ಉತ್ಪನ್ನಗಳ ತಯಾರಿಕಾ ಘಟಕಗಳನ್ನು ಸ್ಥಾಪಿಸಲು 50,000 ಫಲಾನುಭವಿ ಸಂಘಗಳನ್ನು ಗುರುತಿಸಲಾಗಿದೆ, ಶುದ್ಧಗಾನದ ಎಣ್ಣೆ ಫ್ಲೋರ್ ಕ್ಲೀನರ್ ಉಪ್ಪಿನಕಾಯಿ ಹಣ್ಣಿನ ಜಾಮ್ ಬಾಳೆಹಣ್ಣು ಅಥವಾ ಹಲಸಿನ ಹಣ್ಣಿನ ಚಿಪ್ಸ್ ಜೋಳದ ರೊಟ್ಟಿ ಹಾಗೂ ಹಪ್ಪಳ ಹಾಗೂ ಮಣ್ಣಿನ ವಸ್ತುಗಳು ಗೃಹ ಉಪಯೋಗಿ ಹಾಗೂ ಗೃಹ ಅಲಂಕಾರ ವಸ್ತುಗಳು ರಾಗಿ ಬಿಸ್ ಕತ್ತುಗಳು ಇತ್ಯಾದಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಯೋಜನೆ ಸರ್ಕಾರ ಹೊಂದಿದೆ.

ಯೋಜನೆ ಅಡಿ ತರಬೇತಿ ಕಾರ್ಯಕ್ರಮ ಕೈಗೊಳಲು ತಾಂತ್ರಿಕ ಸಂಸ್ಥೆಗಳನ್ನು ಗುರುತಿಸಲಾಗಿದೆ, ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಅವರು ಎಂಟು ತರಬೇತಿಗಳಿಗೆ ಆನ್ಲೈನ್ ಮೂಲಕ ಚಾಲನೆ ನೀಡಿದರು, ಒಟ್ಟು ಐವತ್ತು ಸಾವಿರ ಮಹಿಳೆಯರಿಗೆ ವಿವಿಧ ತರಬೇತಿಗಳನ್ನು ನೀಡಿ ಉದ್ಯಮ ಕೈಗೊಳ್ಳಲು ಬೆಂಬಲಿಸಲಾಗುವುದು.

ಎರಡನೇ ಹಂತದಲ್ಲಿ ಬ್ಯಾಂಕುಗಳಿಂದ ಸಾಲ ಸೌಲಭ್ಯ ಒದಗಿಸಲಾಗುತ್ತದೆ, ಒಟ್ಟು 3500 ಫಲಾನುಭವಿಗಳಿಗೆ ಸಾಲ ಮಂಜೂರ್ ಆಗಿದ್ದು ಬೊಮ್ಮಾಯಿಯವರು ಸಂಕೇತಿಕವಾಗಿ ಮೂರು ಫಲಾನುಭವಿಗಳಿಗೆ ಸಾಲ ಮಂಜೂರಾತಿ ಪ್ರಮಾಣ ಪತ್ರವನ್ನು ನೀಡಿದರು.

ಯೋಜನೆ ಅಡಿ ರಾಜ್ಯದ ಎಲ್ಲಾ ಬಿಪಿಎಲ್ಎಫ್ ಗಳಿಗೆ ಕಂಪ್ಯೂಟರ್ ವಿತರಿಸುವ ಉದ್ದೇಶವಿದ್ದು ಮುಖ್ಯಮಂತ್ರಿಯವರು ಇದೆ ವೇಳೆ ಬಿಪಿಎಲ್ಎಫ್ ಗಳಿಗೆ ಸಂಕೇತಿಕವಾಗಿ ಕಂಪ್ಯೂಟರ್ ವಿತರಣೆ ಮಾಡಿದರು,

ಪ್ರಸಕ್ತ ಸಾಲಿನಲ್ಲಿ 45,000 ಮಹಿಳಾ ಸ್ವಸಹಾಯ ಗುಂಪುಗಳಿಗೆ 1800 ಕೋಟಿ ರೂಪಾಯಿಗಳಷ್ಟು ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ಗುರುತಿಸುವ ಗುರಿ ಇದೆ ಎಂದು ಬಸವರಾಜ್ ಬೊಮ್ಮಾಯಿವರು ತಿಳಿಸಿದರು.

ವಿವಿಧ ಯೋಜನೆಗಳು 
1 ಗೃಹಿಣಿ ಶಕ್ತಿ ಯೋಜನೆ ಅಡಿ ದೂರ ಹಿತ ರೈತ ಮಹಿಳೆಯರಿಗಾಗಿ ಮಾಸಿಕ ರೂಪಾಯಿ 500 ನೀಡಲಾಗುವುದು

2 ರೂ.1,00,000 ಮಹಿಳೆಯರಿಗೆ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿಗಳನ್ನು ನೀಡಲಾಗುವುದು
3 ಮಹಿಳೆಯರ ಅಪೌಷ್ಟಿಕತೆಯನ್ನು ತಡೆಯಲು ಪ್ರತಿ ಅಂಗನವಾಡಿ ಕೇಂದ್ರಗಳಲ್ಲೂ ಬಿಸಿಯೂಟ ನೀಡಲಾಗುವುದು
4 ವಿದ್ಯಾರ್ಥಿನಿಯರಿಗೆ 350 ಕೋಟಿ ರೂಪಾಯಿ ವೆಚ್ಚದಲ್ಲಿ ಉಚಿತ ಬಸ್ ಪಾಸ್ ಒದಗಿಸಿಕೊಡಲಾಗುವುದು
5 ಒಟ್ಟು 8 ಲಕ್ಷ ಹೆಣ್ಣು ಮಕ್ಕಳಿಗೆ ಶಿಕ್ಷಣಕ್ಕೆ ಅನುಕೂಲವಾಗಲಿದೆ

ಕಟ್ಟಡ ಮತ್ತು ಇತರೆ ನಿರ್ಮಾಣದ ಕಾರ್ಮಿಕರಿಗೆ ಅನುಕೂಲ ಮಾಡಿಕೊಡಲು ನಗರ ಪ್ರದೇಶದಲ್ಲಿ ನಾಲ್ಕು ಶಿಶು ಪಾಲನಾ ಕೇಂದ್ರ ಕಾರ್ಯ ಆರಂಭಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು.

error: Content is protected !!