ಹೈದರಾಬಾದ್ ಮೂಲದ ಪ್ರತಿಭಾವಂತ ಇಂಜಿನಿಯರಿಂಗ್ ವಿದ್ಯಾರ್ಥಿನಿ ದೀಪ್ತಿಗೆ ಕ್ಯಾಂಪಸ್ ಇಂಟರ್ವ್ಯೂವ್ನಲ್ಲಿ ಜಾಕ್ಪಾಟ್ ಹೊಡೆದಿದೆ. ಗೌರವಾನ್ವಿತ ಕಂಪನಿಯಲ್ಲಿ ವಾರ್ಷಿಕ 2 ಕೋಟಿ ರೂಪಾಯಿಯ ಭಾರೀ ಸಂಬಳದ ಕೆಲಸವನ್ನು ದೀಪ್ತಿ ಗಿಟ್ಟಿಸಿಕೊಂಡಿದ್ದಾರೆ.’ಹೌದು, ದೀಪ್ತಿ ಅವರು ಅಮೆರಿಕದ ಸೀಟಲ್ನಲ್ಲಿರುವ ಮೈಕ್ರೋಸಾಫ್ಟ್ ಮುಖ್ಯಕಚೇರಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಆಯ್ಕೆಯಾಗಿದ್ದಾರೆ. ವಾರ್ಷಿಕವಾಗಿ ಅವರಿಗೆ 2 ಕೋಟಿ ರೂ. ಸಂಬಳ ನಿಗಧಿಯಾಗಿದೆ. ಫ್ಲೊರಿಡಾ ವಿಶ್ವವಿದ್ಯಾಲಯದಲ್ಲಿ ಎಂಎಸ್ (ಕಂಪ್ಯೂಟರ್ಸ್) ಪೂರ್ಣಗೊಳಿಸಿರುವ ದೀಪ್ತಿ, ಮೇ 2ರಂದು ನಡೆದ ಕ್ಯಾಂಪಸ್ ಇಂಟರ್ವ್ಯೂವ್ನಲ್ಲಿ ಆಯ್ಕೆಯಾಗಿದ್ದಾರೆ.ಇದೇ ತಿಂಗಳಿನಿಂದ ದೀಪ್ತಿ ತನ್ನ ಕೆಲಸ ಆರಂಭಿಸಲಿದ್ದಾರೆ.ದೀಪ್ತಿ ಅವರ ತಂದೆ ಡಾ. ವೆಂಕಣ್ಣ ಅವರು ಹೈದರಾಬಾದ್ ಪೊಲೀಸ್ ಆಯುಕ್ತ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬಿಟೆಕ್ ಮುಗಿದ ಬಳಿಕ ಜೆಪಿ ಮೊರ್ಗಾನ್ ಕಂಪನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿದ ದೀಪ್ತಿ, ಆ ಬಳಿಕ ಎಂಎಸ್ ಮಾಡಲು ಅಮೆರಿಕಗೆ ತೆರಳಿದರು.ಫ್ಲೋರಿಡಾ ವಿಶ್ವವಿದ್ಯಾಲಯದಲ್ಲಿ ಆಯ್ಕೆಯಾದ 300ರಲ್ಲಿ ದೀಪ್ತಿ ಅವರು ಅತಿ ಹೆಚ್ಚು ವಾರ್ಷಿಕ ವೇತನವನ್ನು ಪಡೆದಿದ್ದಾರೆ.