426 ಕಿರಿಯ ಪವರ್‌ಮ್ಯಾನ್‌ ನೇಮಕಾತಿ ಸಂಬಂಧ ತಾತ್ಕಾಲಿಕ ಆಯ್ಕೆಪಟ್ಟಿ ಮತ್ತು ಕಟ್‌ಆಫ್‌ ಅಂಕಗಳನ್ನು ಬಿಡುಗಡೆ

Telegram Group

 

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಡಿಯ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ 2019ನೇ ಸಾಲಿನ ಕಿರಿಯ ಪವರ್‌ಮ್ಯಾನ್‌ ಹುದ್ದೆಗಳ ನೇಮಕ ಸಂಬಂಧ, ತಾತ್ಕಾಲಿಕ ಆಯ್ಕೆಪಟ್ಟಿ ಮತ್ತು ಕಟ್‌ಆಫ್‌ ಅಂಕಗಳನ್ನು ಬಿಡುಗಡೆ ಮಾಡಲಾಗಿದೆ.

CESC 426 (126 ಬ್ಯಾಕ್‌ಲಾಗ್‌ ಹುದ್ದೆಗಳು) ಜೂನಿಯರ್ ಪವರ್‌ಮ್ಯಾನ್‌ ಹುದ್ದೆಗಳಿಗೆ ಈ ಮೊದಲೇ ಅಂದರೆ 2019 ರ ಫೆಬ್ರುವರಿ 25 ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ನಿಗಧಿತ ವಿದ್ಯಾರ್ಹತೆಯಲ್ಲಿ (ಎಸ್‌ಎಸ್‌ಎಲ್‌ಸಿ/10th) ಗಳಿಸಿರುವ ಅಂಕಗಳ ಅರ್ಹತೆಯ ಆಧಾರದ ಮೇಲೆ ದಿನಾಂಕ 21-10-2019 ರಿಂದ 25-10-2019 ಮತ್ತು 30-06-2020 ರಲ್ಲಿ ನಡೆದ ಸಹನಾ ಶಕ್ತಿ ಪರೀಕ್ಷೆಯಲ್ಲಿ ಕಿರಿಯ ಪವರ್‌ಮ್ಯಾನ್‌ ಹುದ್ದೆಗಳಿಗೆ ಅರ್ಹರಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಕಟ್‌ಆಫ್‌ ಅಂಕಗಳೊಂದಿಗೆ ಬಿಡುಗಡೆ ಮಾಡಲಾಗಿದೆ.

ಪ್ರಸ್ತುತ ಬಿಡುಗಡೆ ಮಾಡಲಾದ ಸದರಿ ತಾತ್ಕಾಲಿಕ ಆಯ್ಕೆಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ, ಸಹಿಷ್ಣುತಾ ಪರೀಕ್ಷೆಯಲ್ಲಿ ಅರ್ಹತೆ ಪಡೆದವರು ಮಾತ್ರ ಸರಿಯಾದ ವಿವರ ಮತ್ತು ದಾಖಲಾತಿಗಳೊಂದಿಗೆ ತಮ್ಮ ಹೆಸರು ಮತ್ತು ಅರ್ಜಿ ಸಂಖ್ಯೆಯನ್ನು ನಮೂದಿಸಿ ಈ ಕೆಳಗಿನ ವಿಳಾಸಕ್ಕೆ ಆಕ್ಷೇಪಣೆ ಸಲ್ಲಿಸಬಹುದು.

 

 

ಕೊನೆ ದಿನಾಂಕದ ನಂತರ ಸಲ್ಲಿಸಲಾಗುವ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ. 2019ನೇ ಸಾಲಿನ CESCOM ಕಿರಿಯ ಪವರ್‌ ಮ್ಯಾನ್ ಹುದ್ದೆಗಳ ನೇಮಕಾತಿಯ ತಾತ್ಕಾಲಿಕ ಆಯ್ಕೆಪಟ್ಟಿ ಹಾಗೂ ಕಟ್ ಆಫ್‌ ಅಂಕಗಳನ್ನು ಚೆಕ್‌ ಮಾಡಲು ಕೆಳಗಿನ ಡೈರೆಕ್ಟ್‌ ಲಿಂಕ್‌ಗಳನ್ನು ಬಳಸಿ.

ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಅಭ್ಯರ್ಥಿಗಳ ಹೆಸರು, ತಂದೆ ಹೆಸರು, ಅರ್ಜಿ ಸಂಖ್ಯೆ, ಆಯ್ಕೆಯಾದ ಪ್ರವರ್ಗ, ಗರಿಷ್ಠ ಅಂಕ, ಗಳಿಸಿದ ಅಂಕ, ಶೇಕಡವಾರು ಅಂಕಗಳ ಮಾಹಿತಿಗಳನ್ನು ನೀಡಲಾಗಿದೆ.

ಅಭ್ಯರ್ಥಿಗಳು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಅಧಿಕೃತ ವೆಬ್‌ಸೈಟ್‌ https://cescmysore.karnataka.gov.in/ ಗೆ ಭೇಟಿ ನೀಡಿ ಚೆಕ್‌ ಮಾಡಬಹುದು.

ಆಕ್ಷೇಪಣೆ ಸಲ್ಲಿಸಬೇಕಾದ ಇ-ಮೇಲ್‌ ವಿಳಾಸ: recruitment2019@cescmysore.org
ಆಕ್ಷೇಪಣೆ ಸಲ್ಲಿಸಲು ಕೊನೆ ದಿನಾಂಕ: 20-11-2021

Telegram Group
error: Content is protected !!