ಕ್ಲರ್ಕ್ ಹಾಗೂ ಪಿಯೋನ್ ಹುದ್ದೆಗಳು : ಎಸೆಸೆಲ್ಸಿ , ಪದವಿ ಮುಗಿಸಿದವರಿಗೆ

 

Aided Educational Institution Employees’ Co-operative Society: ಶಿವಮೊಗ್ಗದ ಅನುದಾನಿತ ಶಿಕ್ಷಣ ಸಂಸ್ಥೆ ನೌಕರರ ಸಹಕಾರ ಸಂಘ ನಿಯಮಿತ ಖಾಲಿ ಇರುವ ವಿವಿಧ ಹುದ್ದೆಗೆ ಅಧಿಸೂಚನೆ ಹೊರಡಿಸಲಾಗಿದೆ. ಸಹಕಾರ ಸಂಘದಲ್ಲಿ ನಗದು ಗುಮಾಸ್ತ ಮತ್ತು ಸೇವಕ ಹುದ್ದೆಗಳು ಖಾಲಿ ಇದ್ದು, ಇವುಗಳ ಭರ್ತಿಗೆ ಅರ್ಜಿ ಅಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.

ಇಲಾಖೆ ಹೆಸರು: ಶಿವಮೊಗ್ಗದ ಅನುದಾನಿತ ಶಿಕ್ಷಣ ಸಂಸ್ಥೆ ನೌಕರರ ಸಹಕಾರ ಸಂಘ ನಿಯಮಿತ
ಹುದ್ದೆಗಳ ಹೆಸರು: ನಗದು ಗುಮಾಸ್ತ, ಸೇವಕರು
ಒಟ್ಟು ಹುದ್ದೆಗಳು  ನಿಗದಿಪಡಿಸಿಲ್ಲ
ಅರ್ಜಿ ಸಲ್ಲಿಸುವ ಬಗೆ  ಆಫ್​ಲೈನ್​

ವಿದ್ಯಾರ್ಹತೆ:
ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ನಗದು ಗುಮಾಸ್ತರು ಹುದ್ದೆಗಳಿಗೆ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.
ಮತ್ತು ಸೇವಕರು ಹುದ್ದೆಗಳಿಗೆ ಅಭ್ಯರ್ಥಿಗಳು  ಎಸ್​ಎಸ್​ಎಲ್​ಸಿ ಪಾಸ್​ ಆಗಿರಬೇಕು

ವಯೋಮಿತಿ:
ಈ ಅಧಿಸೂಚನೆ ಅನ್ವಯ ಅಭ್ಯರ್ಥಿಯ ವಯಸ್ಸು ಕನಿಷ್ಠ 18 ವರ್ಷ ಆಗಿದ್ದು ಮತ್ತು ಗರಿಷ್ಠ 40 ವರ್ಷ ವಯಸ್ಸು ಅಭ್ಯರ್ಥಿಗಳಿಗೆ ಮೀರಿರಬಾರದು.

ವೇತನಶ್ರೇಣಿ:
ಈ ನೇಮಕಾತಿ ಅಧಿಸೂಚನೆಯ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.11000/- ದಿಂದ ರೂ.31000/- ವರೆಗೆ ವೇತನ ನಿಗದಿಪಡಿಸಲಾಗಿದೆ.

ಅರ್ಜಿ ಶುಲ್ಕ:
ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ರೂ 500 ಅರ್ಜಿ ಶುಲ್ಕ ಪಾವತಿಸಬೇಕು 
ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಅನುದಾನಿತ ಶಿಕ್ಷಣ ಸಂಸ್ಥೆ ನೌಕರರ ಸಹಕಾರ ಸಂಘ ನಿಯಮಿತಿ, ಶಿವಮೊಗ್ಗ ಇವರ ಹೆಸರಿನಲ್ಲಿ ಡಿಡಿಯನ್ನು ಸಲ್ಲಿಸತಕ್ಕದ್ದು.

ಆಯ್ಕೆ ವಿಧಾನ:
ಇನ್ನು ಅರ್ಜಿ ಸಲ್ಲಿಸುವಂತ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಸಿ ಆಯ್ಕೆಮಾಡಿಕೊಳ್ಳಲಾಗುತ್ತದೆ.

ಅರ್ಜಿ ಸಲ್ಲಿಕೆ ವಿಳಾಸ:
ಅನುದಾನಿತ ಶಿಕ್ಷಣ ಸಂಸ್ಥೆ ನೌಕರರ ಸಹಕಾರ ಸಂಘ ನಿ, ಸಹಕಾರ ಶ್ರೀ, 3ನೇ ತಿರುವು, ದುರ್ಗಿಗುಡಿ, ಶಿವಮೊಗ್ಗ- 577201.

ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು 08182-224858 ನಂಬರ್​ಗೆ ಕರೆ ಮಾಡಬಹುದು. ಅಥವಾ anudanithasmg1983@gmail.com ಈ ಮೇಲ್​ ವಿಳಾಸದಲ್ಲಿ ವಿಚಾರಿಸಬಹುದಾಗಿದೆ.


ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ  16 ಜುಲೈ 2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  4 ಆಗಸ್ಟ್​​ 2022
   
ಪ್ರಮುಖ ಲಿಂಕುಗಳು 
ಹೆಚ್ಚಿನ ಮಾಹಿತಿಗಾಗಿ  08182-224858
ಹೆಚ್ಚಿನ ಮಾಹಿತಿಗಾಗಿ  anudanithasmg1983@gmail.com
error: Content is protected !!