ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಹೊಸ ನೇಮಕಾತಿ 2021


ಬಾಗಲಕೋಟೆ ಜಿಲ್ಲೆಯ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಮೇಘಾ ಸರ್ವಿಸಸ್ ಪ್ರೈವೇಟ್ ಲಿ ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ 09 ಆಡಳಿತ ಸಹಾಯಕ ಹಾಗೂ 01 ತಾಲ್ಲೂಕು ಆಯ್ ಇ ಸಿ (IEC) ಸಂಯೋಜಕ ಅರ್ಜಿಗಳನ್ನು ಜಿಲ್ಲಾ ಪಂಚಾಯತ್ ಕಾರ್ಯಾಲಯ ಬಾಗಲಕೋಟೆಯಿಂದ ಪಡೆದು ಭರ್ತಿ ಮಾಡಿ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಶ್ರೀ ಅಜಯ್ ಸೂಳಿಕೇರಿ ಸಂಯೋಜಕರು (9611489293) ಇವರಿಗೆ ದಿನಾಂಕ :15/09/2021 ರ ಸಾಯಂಕಾಲ : 05-30 ರೊಳಗೆ ಸಲ್ಲಿಸತಕ್ಕದ್ದು.

ಒಟ್ಟು ಹುದ್ದೆಗಳು: 10
ಉದ್ಯೋಗ ಸ್ಥಳ: ಬಾಗಲಕೋಟೆ

ವಿದ್ಯಾರ್ಹತೆ:
ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಮಾನ್ಯತೆ ಹೊಂದಿರುವ ವಿಶ್ವವಿದ್ಯಾಲಯ/ಬೋರ್ಡ್ ಯಿಂದ ಹುದ್ದೆಗಳಿಗೆ ಸಂಬಂಧಿಸಿದಂತೆ ವಾಣಿಜ್ಯ ವಿಭಾಗದಲ್ಲಿ ಪದವಿಯನ್ನು, ಸಂಪರ್ಕ ವಿಷಯದಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಮತ್ತು ಕಂಪ್ಯೂಟರ್ ಜ್ಞಾನವನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

 

 

 

ವೇತನಶ್ರೇಣಿ:
ಹುದ್ದೆಗಳಿಗನುಗುಣವಾಗಿ ಅಭ್ಯರ್ಥಿಗಳು ವೇತನ ಶ್ರೇಣಿ ಪಡೆಯಲು ಅರ್ಹರಿರುತ್ತಾರೆ.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 31 ಆಗಸ್ಟ್ 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15 ಸೆಪ್ಟೆಂಬರ್ 2021

Notification 

 

 

error: Content is protected !!