ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಒಂದಾದ ಬ್ಯಾಂಕ್ ಆಫ್ ಮಹಾರಾಷ್ಟ್ರ ಇಲ್ಲಿ ಖಾಲಿ ಇರುವ ವಿವಿಧ ಅಧಿಕಾರಿ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ ಅಗ್ರಿಕಲ್ಚರ್ ಫೀಲ್ಡ್ ಆಫೀಸರ್ -100 ಲಾ ಆಫೀಸರ್ -10 ಸೆಕ್ಯೂರಿಟಿ ಆಫೀಸರ್ -10 ಎಚ್ ಆರ್/ ಪರ್ಸನಲ್ ಆಫೀಸರ್ -10 ಡಿಬಿಎ – 03 ವಿಂಡೋಸ್ ಆಡ್ಮಿನಿಸ್ಟ್ರೇಟರ್- 12 ಪ್ರಾಡಕ್ಟ್ ಸಪೋರ್ಟ್ ಇಂಜಿನಿಯರ್- 03 ಸೇರಿದಂತೆ ವಿವಿಧ ಹುದ್ದೆಗಳು |
ಒಟ್ಟು ಹುದ್ದೆಗಳು:190
ಉದ್ಯೋಗ ಸ್ಥಳ:ಭಾರತದಾದ್ಯಂತ
ವಿದ್ಯಾರ್ಹತೆ:
– ಅಗ್ರಿಕಲ್ಚರ್ ಫೀಲ್ಡ್ ಆಫೀಸರ್ ಹುದ್ದೆಗೆ ಪದವಿ,
– ಲಾ ಆಫೀಸರ್ ಹುದ್ದೆಗೆ ಕಾನೂನು ವಿಷಯದಲ್ಲಿ ಪದವಿ,
– ಸೆಕ್ಯೂರಿಟಿ ಆಫೀಸರ್ ಹುದ್ದೆಗೆ ಪದವಿ,
– ಎಚ್ ಆರ್ ಪರ್ಸನಲ್ ಆಫೀಸರ್ ಹುದ್ದೆಗಳಿಗೆ ಪದವಿ ಅಥವಾ ಸ್ನಾತಕೋತ್ತರ ಪದವಿ.
ಅರ್ಜಿ ಶುಲ್ಕ
– ಸಾಮಾನ್ಯ ವರ್ಗದವರಿಗೆ 1118 ರೂ.
– ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ/ ಮಹಿಳೆಯರು ಮತ್ತು ಮಾಜಿ ಯೋಧರಿಗೆ 118 ರೂ.,
– ಅಂಗವಿಕಲರಿಗೆ ಯಾವುದೇ ಶುಲ್ಕವಿಲ್ಲ.
ವಯೋಮಿತಿ:
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 20 ವರ್ಷ ಹಾಗೂ ಗರಿಷ್ಠ 35 ವರ್ಷಗಳ (ಒಬಿಸಿ ಅಭ್ಯರ್ಥಿಗಳಿಗೆ 3, ಎಸ್ಸಿ/ಎಸ್ ಟಿ ಅಭ್ಯರ್ಥಿಗಳಿಗೆ 5, ಅಂಗವಿಕಲರಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ).
ಅರ್ಜಿ ಸಲ್ಲಿಸುವ ವಿಧಾನ : ಆನ್ಲೈನ್ ಮೂಲಕ ಮಾತ್ರ
ಆಯ್ಕೆ ಪ್ರಕ್ರಿಯೆ:
ನೇಮಕಾತಿ ಪ್ರಕ್ರಿಯೆ : ಆನ್ ಲೈನ್ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 11 ಸೆಪ್ಟೆಂಬರ್ 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19 ಸೆಪ್ಟೆಂಬರ್ 2021
Notification |
Apply Online |