ಕೊರೊನಾ ವೈರಸ್ (ಕೋವಿಡ್-19) ಅನ್ನು ನಿಯಂತ್ರಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಡಿಯಲ್ಲಿ, ಎಪಿಡೆಮಿಯೋಲಜಿಸ್ಟ್ ಹುದ್ದೆಗೆ 06 ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ವಾಕ್ ಇನ್ ಪ್ರಕ್ರಿಯೆ ಮೂಲಕ ಮೆರಿಟ್ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹುದ್ದೆ ಹೆಸರು: ಎಪಿಡೆಮಿಯೋಲಾಜಿಸ್ಟ್
ಹುದ್ದೆಗಳ ಸಂಖ್ಯೆ: 05
ಸಂದರ್ಶನ ದಿನಾಂಕ: 30-08-2021
ಸಂದರ್ಶನ ವಿಳಾಸ ನೌಕರರ ಭವನ, ಬಿಬಿಎಂಪಿ, ಕೇಂದ್ರ ಕಛೇರಿ.
ಸಂದರ್ಶನ ಸಮಯ: 10-00 AM ನಿಂದ 04-00 PM
ಮಾಸಿಕ ಸಂಭಾವನೆ: ರೂ.50,000.
ವಿದ್ಯಾರ್ಹತೆ: ಎಂಬಿಬಿಎಸ್ / ಎಂಎಸ್ಸಿ ಕೋರ್ಸ್ ಪಾಸ್ ಮಾಡಿರಬೇಕು.
ಅರ್ಹತಾ ಮಾನದಂಡಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಕನಿಷ್ಠ 18 ವರ್ಷಗಳು ತುಂಬಿರಬೇಕು ಹಾಗೂ ಈ ಕೆಳಗೆ ನಮೂದಿಸಿರುವ ವಯೋಮಿತಿಯನ್ನು ಮೀರಿರಬಾರದು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 38 ವರ್ಷ, ಎಸ್‌ಸಿ / ಎಸ್‌ಟಿ / ವರ್ಗ-1 – 40 ವರ್ಷ ಗರಿಷ್ಠ ವಯೋಮಿತಿ ಮೀರಿರಬಾರದು.
ಸದರಿ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಮೇಲೆ ತಿಳಿಸಲಾದ ದಿನಾಂಕಗಳಂದು, ನಿಗದಿಪಡಿಸಿದ ಸ್ಥಳಕ್ಕೆ ಅಗತ್ಯ ದಾಖಲೆಗಳೊಂದಿಗೆ ಹಾಜರಾಗಬೇಕು.
ದೂರವಾಣಿ ಸಂಖ್ಯೆ : 080-22110445
ಬೆಂಗಳೂರು ಮಹಾನಗರ ಪಾಲಿಕೆಯ ವೆಬ್‌ಸೈಟ್: www.bbmp.gov.in