ಬಿಬಿಎಂಪಿ ಇಂದ ನೇರ ನೇಮಕಾತಿ ಅಧಿಸೂಚನೆ 2022 : BBMP Recruitment 2022 walk in interview

ಬಿಬಿಎಂಪಿ ನೇರ ನೇಮಕಾತಿಗೆ ಅಧಿಸೂಚನೆ ಪ್ರಕಟವಾಗಿದೆ.

 

ಆರ್‌ಆರ್ ನಗರ ವ್ಯಾಪ್ತಿಯಲ್ಲಿ ಪುನರಾರಂಭಿಸುತ್ತಿರುವ ಜೆ ಪಿ ಪಾರ್ಕ್ ಡಯಾಲಿಸಿಸ್ ಕೇಂದ್ರದಲ್ಲಿ ಈ ಕೆಳಗಿನ ವಿವಿಧ ಹುದ್ದೆಗಳ ಭರ್ತಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೇಮಕ ಪ್ರಕಟಣೆ ಹೊರಡಿಸಿದೆ.  ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ,

ಇಲಾಖೆ ಹೆಸರು:ಬಿಬಿಎಂಪಿ 
ಹುದ್ದೆಗಳ ಹೆಸರು:ವಿವಿಧ ಹುದ್ದೆಗಳು 
ಒಟ್ಟು ಹುದ್ದೆಗಳು 22

 

ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ ವೇತನ
ನೆಫ್ರೋಲಾಜಿಸ್ಟ್‌ 1
Rs.1,20,000
ಶೈಕ್ಷಣಿಕ ವಿದ್ಯಾರ್ಹತೆ: ಎಂಬಿಬಿಎಸ್‌, ಎಂಡಿ ಜತೆಗೆ ಒಂದು ವರ್ಷ ಕಾರ್ಯಾನುಭವ.

ಮೆಡಿಕಲ್ ಆಫೀಸರ್ 2
ವೇತನ ರೂ.45,000.
ಶೈಕ್ಷಣಿಕ ವಿದ್ಯಾರ್ಹತೆ: ಎಂಬಿಬಿಎಸ್ ಜತೆಗೆ 2 ವರ್ಷ ಕಾರ್ಯಾನುಭವ.

ಮ್ಯಾನೇಜರ್ 1
ವೇತನ ರೂ.30,000.
ಶೈಕ್ಷಣಿಕ ವಿದ್ಯಾರ್ಹತೆ: ಬಿಬಿಎಂ / ಎಂಬಿಎ 1 ವರ್ಷ ಕಾರ್ಯಾನುಭವ.

ಡಯಾಲಿಸಿಸ್ ಟೆಕ್ನೀಷಿಯನ್ 10
ವೇತನ ರೂ.20,000 – 30,000.
ಶೈಕ್ಷಣಿಕ ವಿದ್ಯಾರ್ಹತೆ: ಪಿಯುಸಿ ಜತೆಗೆ ಡಯಾಲಿಸಿಸ್ ಸರ್ಟಿಫಿಕೇಶನ್, 1 ವರ್ಷ ಕಾರ್ಯಾನುಭವ, ಸೀನಿಯರ್ ಟೆಕ್ನೀಷಿಯನ್‌ಗೆ 3-4 ವರ್ಷ ಕಾರ್ಯಾನುಭವ.

 

 

ಡಯಟೀಷಿಯನ್ 2
ವೇತನ ರೂ.30,000
ಶೈಕ್ಷಣಿಕ ವಿದ್ಯಾರ್ಹತೆ: ಎಂಎಸ್ಸಿ ನ್ಯೂಟ್ರಿಷನ್ ಜತೆಗೆ 2-3 ವರ್ಷ ಕಾರ್ಯಾನುಭವ.

ಹಾಸ್ಪಿಟಲ್ ಅಟೆಂಡಂಟ್ 6
ವೇತನ ರೂ.12,500.
ಶೈಕ್ಷಣಿಕ ವಿದ್ಯಾರ್ಹತೆ: 10ನೇ ತರಗತಿ ಪಾಸ್.

ವಯೋಮಿತಿ 
– ಕನಿಷ್ಠ 18 ವರ್ಷ ವಯಸ್ಸು ಆಗಿರಬೇಕು. ಗರಿಷ್ಠ 50 ವರ್ಷ ವಯೋಮಿತಿ ಮೀರಿರಬಾರದು.
– ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಜ್ಞಾನದ ಅವಶ್ಯಕತೆ ಕಡ್ಡಾಯವಾಗಿರುತ್ತದೆ.

ಆರ್‌ಆರ್‌ ನಗರ ಆರೋಗ್ಯಾಧಿಕಾರಿಗಳ ಕಛೇರಿಗೆ ಬೆಳಗ್ಗೆ 11-00 ರಿಂದ ಸಂಜೆ 04-00 ರ ವರೆಗೂ ಅರ್ಜಿ ಮತ್ತು ಮೂಲ ದಾಖಲಾತಿಗಳೊಂದಿಗೆ ವಾಕ್‌ ಇನ್ ಇಂಟರ್‌ವ್ಯೂಗೆ ಭಾಗವಹಿಸಲು ಸೂಚಿಸಲಾಗಿದೆ. ಆಯ್ಕೆಗೊಂಡ ಅಭ್ಯರ್ಥಿಯನ್ನು 01 ವರ್ಷದ ಅವಧಿಗೆ ಸಂಪೂರ್ಣ ಗುತ್ತಿಗೆ ಆಧಾರದ ಒಡಂಬಡಿಕೆ ಮಾಡಿಕೊಂಡು ನೇಮಕಾತಿ ಮಾಡಿಕೊಳ್ಳಲು ಕ್ರಮವಹಿಸಲಾಗುವುದು.

ಸಂದರ್ಶನ ಸ್ಥಳ : ಆರೋಗ್ಯಾಧಿಕಾರಿರವರ ಕಛೇರಿ, ರಾಜರಾಜೇಶ್ವರಿ ನಗರ ವಲಯ, ಐಡಿಯಲ್ ಹೋಮ್ಸ್‌ ಬಡಾವಣೆ, ರಾಜರಾಜೇಶ್ವರಿ ನಗರ, ಬೆಂಗಳೂರು-560098.

 

 

ಪ್ರಮುಖ ದಿನಾಂಕಗಳು
ಸಂದರ್ಶನ ದಿನಾಂಕ : 28-02-2022 ರ ಬೆಳಿಗ್ಗೆ 11-00 ಗಂಟೆಗೆ.

 

ನೋಟಿಫಿಕೇಶನ್ 
error: Content is protected !!