ರಾಜ್ಯದ ಜನತೆಗೆ ಉಚಿತ ಮನೆ ಸೌಲಭ್ಯ – ಗುಡ್ ನ್ಯೂಸ್

ದೇಶದಲ್ಲೇ ಮೊದಲು: ಕೂಲಿ ಕಾರ್ಮಿಕರಿಗೆ ರಾಜ್ಯ ಸರ್ಕಾರದಿಂದ ವಸತಿ ಸಮುಚ್ಚಯ ನಿರ್ಮಾಣ!

ಉದ್ಯೋಗ ಬಿಂದು ಓದುಗರಿಗೆ ನಮಸ್ಕಾರಗಳು ತಿಳಿಸುತ್ತಾ ಇವತ್ತಿನ ಲೇಖನ ಮನೆ ಇಲ್ಲದವರಿಗೆ ಉಚಿತ ಮನೆ ಸೌಲಭ್ಯ ಸರ್ಕಾರದ ಕಡೆಯಿಂದ. ಬನ್ನಿ ಇದರ ಕುರಿತು ಸಂಪೂರ್ಣ ಮಾಹಿತಿ ಇದೀಗ ನಾವು ತಿಳಿದುಕೊಂಡು ಬರೋಣ.

Labour card – ಲೇಬರ್ ಕಾರ್ಡ್ ಅಥವಾ ಕಾರ್ಮಿಕರ ಕಾರ್ಡ್ ಹೊಂದಿರುವಂತಹ ರಾಜ್ಯದ ಜನತೆಗೆ ಇದೀಗ ಸರ್ಕಾರದ ವತಿಯಿಂದ ಕಾರ್ಮಿಕರಿಗೆ ಶ್ರಮಿಕ ನಿವಾಸ್ ಎಂಬ ಹೊಸ ಯೋಜನೆ ಜಾರಿಗೆ ಬಂದಿದ್ದು ಇದರಿಂದ ಲೇಬರ್ ಕಾರ್ಡ್ ಹೊಂದಿರುವಂತಹ ಜನರು ಇದೀಗ ಸರ್ಕಾರದ ಕಡೆಯಿಂದ ಉಚಿತ ಮನೆ ಪಡೆದುಕೊಳ್ಳುವ ಸೌಲಭ್ಯ ಜಾರಿಗೆ ಬಂದಿದೆ.

ಕಾರ್ಮಿಕರಿಗೆ ಶ್ರಮಿಕ್ ನಿವಾಸ್
ಕಾರ್ಮಿಕರು ಉಳಿದುಕೊಳ್ಳಲು ಮಂಡಳಿ ಮೂಲಕ ವಸತಿ ಸಮುಚ್ಚಯ
ಕ್ಷಮಿಕ್ ನಿವಾಸ್ ಯೋಜನೆ ಅಡಿ ದೇಶದಲ್ಲೇ ಮೊದಲ ಬಾರಿಗೆ ಕಾರ್ಮಿಕರಿಗೆ ಸೂರು
ವಸತಿ ಸಮುಚ್ಚಯಗಳಲ್ಲಿ ಮೂಲಸೌಕರ್ಯಕ್ಕೆ ಆದ್ಯತೆ
ವಲಸಿಗ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯ ಆಶ್ರಮ

ದೊಡ್ಡಬಳ್ಳಾಪುರ ತಾಲೂಕಿನ ಕೈಗಾರಿಕಾ ವಲಯದ ಬದನ ಹಳ್ಳಿಯಲ್ಲಿ ಶ್ರಮಿಕ್ ನಿವಾಸ್ ಯೋಜನೆ ಅಡಿ ಶ್ರಮಿಕ್ ವರ್ಗಕ್ಕೆ ವಸತಿ ನೀಡುವ ಸಲುವಾಗಿ ನಿರ್ಮಿಸಲಾಗುತ್ತಿರುವ ವಸತಿ ಸಮುಚ್ಚಯ ಉದ್ಘಾಟನೆಗೆ ಸಜ್ಜಾಗುತ್ತಿದೆ

ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ವಲಸೆ ಕಾರ್ಮಿಕರಿಗೆ ಉಚಿತ ವಸತಿ ವ್ಯವಸ್ಥೆ
ದೇಶದಲ್ಲಿ ಇದೇ ಮೊದಲ ಬಾರಿಗೆ ರಾಜ್ಯಾದ್ಯಂತ ಕೈಗಾರಿಕಾ ಪ್ರದೇಶಗಳಲ್ಲಿ ಕೆಲಸ ಮಾಡುವ ಕಟ್ಟಡ ಕಾರ್ಮಿಕರಿಗೆ, ವಿಶೇಷವಾಗಿ ವಲಸೆ ಕಾರ್ಮಿಕರಿಗೆ ರಾಜ್ಯ ಸರ್ಕಾರ ವಸತಿ ಸಮುಚ್ಚಯಗಳನ್ನು ನಿರ್ಮಾಣ ಮಾಡಿ, ನೆರವಿಗೆ ಮುಂದಾಗಿದೆ.

ಈ ವಸತಿ ಸಮುಚ್ಚಯವು ರಸ್ತೆ ಬದಿಗಳಲ್ಲಿ ಟೆಂಟ್ ಗಳನ್ನು ಹಾಕಿಕೊಂಡು ಜೀವನ ನಡೆಸುವ ಕೂಲಿ ಕಾರ್ಮಿಕರಿಗೆ ಗೌರವಯುತವಾಗಿ ಜೀವನ ನಡೆಸಲು ಸಹಾಯ ಮಾಡುತ್ತದೆ. ಕಟ್ಟಡ ಕಾಮಗಾರಿಗಳು ಪೂರ್ಣಗೊಳ್ಳುವವರೆಗೂ ಕಾರ್ಮಿಕರು ಅಲ್ಲಿ ಜೀವನ ನಡೆಸಬಹುದು ಎಂದು ಕಾರ್ಮಿಕ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.

ಕಾರ್ಮಿಕ ಇಲಾಖೆಯು ಈಗಾಗಲೇ ದೊಡ್ಡಬಳ್ಳಾಪುರ ತಾಲೂಕಿನ ಬ್ಯಾಡನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ 19 ಕೋಟಿ ರೂಪಾಯಿ ವೆಚ್ಚದಲ್ಲಿ ಶ್ರಮಿಕ ನಿವಾಸ, ವಸತಿ ಸಂಕೀರ್ಣವನ್ನು ನಿರ್ಮಾಣ ಮಾಡಿದೆ ಎಂದು ತಿಳಿದುಬಂದಿದೆ. Labour card

ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಮನೆಗಳನ್ನು ನಿರ್ಮಿಸಲಾಗುವುದು ಮತ್ತು ಇಲಾಖೆಯು ವಿದ್ಯುತ್ ಸರಬರಾಜು ಮತ್ತು ಇತರ ಮೂಲ ಸೌಕರ್ಯಗಳನ್ನು ಒದಗಿಸುತ್ತದೆ. ಮಂಡಳಿಯ ಗುರುತಿನ ಚೀಟಿ ಹೊಂದಿರುವವರು ಈ ಸೇವೆಯನ್ನು ಪಡೆಯಬಹುದು. ಇದರಿಂದ ಕೂಲಿ ಕಾರ್ಮಿಕರಿಗೆ ತಂಗಲು ಸ್ಥಳಾವಕಾಶದ ಸಮಸ್ಯೆಗಳು ಕಡಿಮೆಯಾಗಲಿವೆ ಎಂದು ತಿಳಿಸಿದರು.

error: Content is protected !!