ಕೊರೊನ ರೋಗಕ್ಕೆ ಇಲ್ಲಿದೆ ರಾಮ ಬಾಣದಂತ ಕಷಾಯ

ಕೊರೊನಾ ರೋಗಿಗಳಿಗೆ ಮಾತ್ರೆ – ಔಷಧಿ ಜೊತೆ ಕಷಾಯ ಸೇವನೆ ಮಾಡಲು ಸಲಹೆ ನೀಡಲಾಗ್ತಿದೆ. ಕೊರೊನಾ ಮಾತ್ರವಲ್ಲ ಋತು ಬದಲಾದಾಗ ಕಾಣಿಸಿಕೊಳ್ಳುವ ಶೀತ, ನೆಗಡಿ, ಜ್ವರ, ಎದೆ ನೋವಿಗೆ ಕೆಲವು ಕಷಾಯಗಳು ಸಹಕಾರಿ.ಕಷಾಯ ಕುಡಿಯುವ ಮೂಲಕ ಈ ಎಲ್ಲ ರೋಗದಿಂದ ಮುಕ್ತಿ ಪಡೆಯಬಹುದು, ರೋಗದ ವಿರುದ್ಧ ಹೋರಾಡಲು ನಮಗೆ ರೋಗ ನಿರೋಧಕ ಶಕ್ತಿ ಹೆಚ್ಚಿರಬೇಕು. ರೋಗ ನಿರೋಧಕ ಶಕ್ತಿ ಮಾತ್ರೆಗಳಿಗಿಂತ ನೈಸರ್ಗಿಕವಾಗಿ ಬಂದಲ್ಲಿ ಹೆಚ್ಚು ಪ್ರಯೋಜನಕಾರಿ.

ತುಳಸಿ ಕಷಾಯ : ಈ ಕಷಾಯ ತಯಾರಿಸಲು 100 ಗ್ರಾಂ ತುಳಸಿ, 10 ಗ್ರಾಂ ದಾಲ್ಚಿನ್ನಿ, 10 ಗ್ರಾಂ ಬೇವಿನ ಎಲೆ, 50 ಗ್ರಾಂ ಸೋಂಪು, 15 ಗ್ರಾಂ ಸಣ್ಣ ಏಲಕ್ಕಿ ಮತ್ತು 10 ಗ್ರಾಂ ಕರಿಮೆಣಸಿನ ಅವಶ್ಯಕತೆಯಿದೆ. ಈ ಎಲ್ಲಾ ವಸ್ತುಗಳನ್ನು ಪುಡಿಮಾಡಿ, ಒಂದು ಪಾತ್ರೆಯಲ್ಲಿ ಎರಡು ಕಪ್ ನೀರು ಹಾಕಿ ಬಿಸಿ ಮಾಡಿ, ಇದು ಕುದಿಯಲು ಬಂದಾಗ ಅರ್ಧ ಚಮಚ ಈ ಮಿಶ್ರಣವನ್ನು ಹಾಕಿ, ಸ್ವಲ್ಪ ಸಮಯದವರೆಗೆ ಕುದಿಯಲು ಬಿಡಿ. ನಂತ್ರ ಫಿಲ್ಟರ್ ಮಾಡಿ ಬಿಸಿಯಿರುವಾಗ ಕುಡಿಯಿರಿ.

ಲವಂಗ, ತುಳಸಿ,ಕಾಳು ಮೆಣಸು,ಶುಂಠಿ ಕಷಾಯ : ನೆಗಡಿ, ಎದೆ ನೋವನ್ನು ಕಡಿಮೆ ಮಾಡಲು ಈ ಕಷಾಯ ಸೇವನೆ ಉತ್ತಮ, ಲವಂಗ, ತುಳಸಿ, ಶುಂಠಿ ಮತ್ತು ಕರಿಮೆಣಸಿನ ಕಷಾಯವು ನೆಗಡಿಗೆ ಪ್ರಯೋಜನಕಾರಿಯಾಗಿದೆ. ಈ ಕಷಾಯವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಶುಂಠಿ ರಸವು ಗಂಟಲು ನೋವನ್ನು ಕಡಿಮೆ ಮಾಡುತ್ತದೆ. ಲವಂಗ, ತುಳಸಿ, ಶುಂಠಿ ಮತ್ತು ಕರಿಮೆಣಸಿನ ಕಷಾಯ ತಯಾರಿಸಲು, ಎರಡು ಕಪ್ ನೀರು, 7-8 ತುಳಸಿ ಎಲೆಗಳು, 5 ಕರಿಮೆಣಸು, 5 ಲವಂಗ ಮತ್ತು ಒಂದು ಚಮಚ ತುರಿದ ಶುಂಠಿಯನ್ನು ಒಂದು ಪಾತ್ರೆಗೆ ಹಾಕಿ ಮಧ್ಯಮ ಉರಿಯಲ್ಲಿ 8-10 ನಿಮಿಷ ಕುದಿಸಿ. ಅದನ್ನು ಫಿಲ್ಟರ್ ಮಾಡಿ ಬೆಚ್ಚಗಿರುವಾಗ ಕುದಿಸಿ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಕುಡಿಯುವುದರಿಂದ ನೆಗಡಿ ಕಡಿಮೆಯಾಗುತ್ತದೆ.

ಏಲಕ್ಕಿ, ಜೇನು ತುಪ್ಪದ ಕಷಾಯ : ಉಸಿರಾಟದ ತೊಂದರೆ ಕೊರೊನಾದ ಆರಂಭಿಕ ಲಕ್ಷಣ. ಕೊರೊನಾದಿಂದ ಮಾತ್ರ ಉಸಿರಾಟದ ಸಮಸ್ಯೆ ಕಾಡಬೇಕೆಂದೇನಿಲ್ಲ, ಉಸಿರಾಟದ ಸಮಸ್ಯೆ ಕಾಡುವವರು ಏಲಕ್ಕಿ ಜೇನು ತುಪ್ಪದ ಕಷಾಯ ಕುಡಿಯಬೇಕು. ಒಂದು ಚಮಚ ಏಲಕ್ಕಿ ಪುಡಿಯನ್ನು ಎರಡು ಕಪ್ ನೀರಿಗೆ ಹಾಕಿ ಕನಿಷ್ಠ 10 ನಿಮಿಷ ಕುದಿಸಿ. ನಂತರ ಫಿಲ್ಟರ್ ಮಾಡಿ ಸ್ವಲ್ಪ ತಣ್ಣಗಾದ್ಮೇಲೆ ಜೇನುತುಪ್ಪವನ್ನು ಸೇರಿಸಿ ಕುಡಿಯಿರಿ.

ಲವಂಗ, ತುಳಸಿ, ಕಪ್ಪು ಉಪ್ಪಿನ ಕಷಾಯ : ಲವಂಗ-ತುಳಸಿ ಮತ್ತು ಕಪ್ಪು ಉಪ್ಪಿನ ಕಷಾಯವು ಕೀಲು ನೋವಿಗೆ ಪರಿಹಾರ ನೀಡುತ್ತದೆ, ಈ ರೀತಿಯ ಕಷಾಯ ತಯಾರಿಸಲು, ಎರಡು ಗ್ಲಾಸ್ ನೀರನ್ನು ಪಾತ್ರೆಗೆ ಹಾಕಿ ಅದಕ್ಕೆ 8-10 ತುಳಸಿ ಎಲೆಗಳು, 5 ಲವಂಗ ಸೇರಿಸಿ ಚೆನ್ನಾಗಿ ಕುದಿಸಿ, ನೀರು ಅರ್ಧವಾದ್ಮೇಲೆ ಜರಡಿ ಹಿಡಿದು ರುಚಿಗೆ ತಕ್ಕಂತೆ ಕಪ್ಪು ಉಪ್ಪು ಸೇರಿಸಿ ಕುಡಿಯಿರಿ.

ವೈರಲ್ ಜ್ವರ ಕಡಿಮೆ ಮಾಡುವ ಕಷಾಯ : ಬದಲಾಗುತ್ತಿರುವ ಹವಾಮಾನದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ವೈರಲ್ ಜ್ವರದಂತಹ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ಅನೇಕರ ಭಯಕ್ಕೆ ಕಾರಣವಾಗಿದೆ, ವೈರಲ್ ಫಿವರ್ ನಿಂದ ಬಳಲುತ್ತಿರುವವರು ಕಷಾಯ ಕುಡಿದು ಜ್ವರ ಕಡಿಮೆ ಮಾಡಿಕೊಳ್ಳಬಹುದು. ಇದನ್ನು ತಯಾರಿಸಲು ಒಂದು ಏಲಕ್ಕಿ, ದಾಲ್ಚಿನಿ ತುಂಡು, 5 ಕರಿಮೆಣಸು, 3 ಲವಂಗ, ಅರ್ಧ ಚಮಚ ಅಜ್ವೈನ್ ಮತ್ತು ಒಂದು ಚಿಟಕಿ ಅರಿಶಿ ಬೇಕು. ಒಂದು ಪಾತ್ರೆಯಲ್ಲಿ ಒಂದೂವರೆ ಲೋಟ ನೀರು ಹಾಕಿ ಅದರಲ್ಲಿ ಅರಿಶಿನ ಬಿಟ್ಟು ಎಲ್ಲ ವಸ್ತುಗಳನ್ನು ಹಾಕಿ, ನೀರು ಅರ್ಧಕ್ಕೆ ಬಂದ್ಮೇಲೆ ಇದಕ್ಕೆ ಒಂದು ಚಿಟಿಕೆ ಅರಿಶಿನ ಸೇರಿಸಿ ಮತ್ತು ಅದನ್ನು ಕುಡಿಯಿರಿ ಈ ಎಲ್ಲಾ ವಸ್ತುಗಳು ದೇಹದ ಶಾಖವನ್ನು ಹೆಚ್ಚಿಸುತ್ತವೆ. ಹಾಗಾಗಿ ಇದನ್ನು ಸೇವಿಸಿದ ನಂತ್ರ ಆಹಾರದ ಬಗ್ಗೆ ಗಮನ ನೀಡಬೇಕು, ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿದರೆ ಬೇಧಿ ಶುರುವಾಗುವ ಸಾಧ್ಯತೆಯಿದೆ. ಯಾವುದೇ ಕಷಾಯ ಸೇವನೆ ಮೊದಲು ವೈದ್ಯರ ಸಲಹೆ ತೆಗೆದುಕೊಳ್ಳುವುದು ಉತ್ತಮ.

error: Content is protected !!