WhatsApp Telegram Group

ಗುಡ್ ನ್ಯೂಸ್ ಗೃಹಲಕ್ಷ್ಮಿ ಯೋಜನೆ 2023 – ಅರ್ಜಿ ಸಲ್ಲಿಸುವ ಸುಲಭ ವಿಧಾನ

ನಮಸ್ಕಾರ ಗೆಳೆಯರೇ ನೀವು ಕೂಡ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಯೋಚಿಸುತ್ತಿದ್ದರೆ ಈಗ ನೀವು ಚಿಂತೆ ಮಾಡುವ ಅಗತ್ಯವಿಲ್ಲ ಈ ನಮ್ಮ ಲೇಖನದಲ್ಲಿ ಸಂಪೂರ್ಣವಾದ ವಿವರ ಆನ್ ಲೈನ್ ಅರ್ಜಿ ಯಾವ ತರಹ ಹಾಕುವುದು ಹಾಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ಮಾನದಂಡಗಳು ಹಾಗೆ ಇತರೆ ಮಾಹಿತಿಗಳನ್ನು ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು.

ರಾಜ್ಯದ ಮಹಿಳೆಯರ ಒಳಿತಿಗಾಗಿ ಹಾಗೂ ಸಬಲೀಕರಣಕ್ಕಾಗಿ ಗೃಹಲಕ್ಷ್ಮಿ ಯೋಜನೆಯ ಜಾರಿಗೆ ತರಲು ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಸರ್ಕಾರ ನಿರ್ಧರಿಸಿದ್ದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆಯು ಈಗಾಗಲೇ ಪ್ರಾರಂಭವಾಗಿದ್ದು ದಿನಾಂಕ 19-7 2023 ಅಪ್ಲಿಕೇಶನ್ ಫಾರಂ ಆನ್ಲೈನ್ ಮೂಲಕ ಆರಂಭವಾಗಲಿದೆ.

ಯೋಜನೆಯ ಹೆಸರು  ಗೃಹಲಕ್ಷ್ಮಿ ಯೋಜನೆ
ಯೋಜನೆಯ ಮುಖ್ಯ ಉದ್ದೇಶ 
ರಾಜ್ಯದ ಮಹಿಳೆಯರ ಸಬಲೀಕರಣಕ್ಕಾಗಿ
ಯಾವ ವ್ಯಕ್ತಿ ಅರ್ಹ 
ಕುಟುಂಬದ ಯಜಮಾನಿ
ಸಹಾಯಧನ ಮೊತ್ತ 
ತಿಂಗಳಿಗೆ 2000 ರೂಗಳು
ಅರ್ಜಿ ಸಲ್ಲಿಕೆ ಆರಂಭ ದಿನ  ಜುಲೈ 19 2023

In Article ad

ಗೃಹಲಕ್ಷ್ಮಿ ಯೋಜನೆಯ ಮುಖ್ಯ ಉದ್ದೇಶಗಳು
ಈ ಯೋಜನೆಯ ಫಲಾನುಭವಿಗಳಾದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರವು ಈ ಯೋಜನೆ ಹಮ್ಮಿಕೊಂಡಿದ್ದು, ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಈ ಎರಡು ಸಾವಿರ ರೂಪಾಯಿಗಳು ಕುಟುಂಬದ ನಿರ್ವಹಣೆಯಲ್ಲಿ ಸಾಕಷ್ಟು ಸಹಾಯವಾಗಲಿದ್ದು ಮನೆಯ ಯಜಮಾನಿಯು ಆರ್ಥಿಕವಾಗಿ ಸುಧಾರಣೆ ಕಂಡರೆ ಕುಟುಂಬದ ನಿರ್ವಹಣೆಯೂ ಉತ್ತಮ ಗುಣಮಟ್ಟದಲ್ಲಿರುತ್ತದೆ, ಆದ್ದರಿಂದ ಕುಟುಂಬದ ಯಜಮಾನಿ ಪ್ರತಿ ತಿಂಗಳು 2000 ನೀಡುವ ಈ ಯೋಜನೆ ಸರ್ಕಾರವು ಜಾರಿ ಮಾಡಿದೆ.

ಗೃಹಲಕ್ಷ್ಮಿ ಯೋಜನೆಗೆ ಅರ್ಹವ್ಯಕ್ತಿಗಳು ಯಾರು
ಕರ್ನಾಟಕ ಆಹಾರ ಇಲಾಖೆ ವಿತರಿಸುವ ಅಂತ್ಯೋದಯ, ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ಕರೆಯಲ್ಪಡುವ ಮಹಿಳೆಯರಿಗೆ ಈ ಯೋಜನೆ ಅರ್ಹ ಫಲಾನುಭವಿಗಳಾಗಿರುತ್ತಾರೆ.

ಗೃಹಲಕ್ಷ್ಮಿ ಯೋಜನೆಗೆ ಯಾರು ಅರ್ಹರಾಗಿರುವುದಿಲ್ಲ
1 ಈ ಕೆಳಗೆ ಕೊಟ್ಟಿರುವ ಮಾನದಂಡಗಳನ್ನು ಅರ್ಜಿದಾರರು ಆಗಿದ್ದಲ್ಲಿ ಅಂತಹ ಅರ್ಜಿದಾರರಿಗೆ ಈ ಯೋಜನೆಯು ಲಭ್ಯವಿರುವುದಿಲ್ಲ.
2 ಕುಟುಂಬದ ಯಜಮಾನಿ ಅಥವಾ ಯಜಮಾನ ಅಂದರೆ ಯಜಮಾನೀಯ ಗಂಡ ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ ಈ ಯೋಜನೆ ಅಂತ ಅಭ್ಯರ್ಥಿಗಳಿಗೆ ಲಭ್ಯವಿರುವುದಿಲ್ಲ.

In Article ad

ಕುಟುಂಬದ ಯಜಮಾನಿ ಅಥವಾ ಯಜಮಾನ ಜಿ ಎಸ್ ಟಿ ರಿಟರ್ನ್ಸ್ ಸಲ್ಲಿಸುವವರಾಗಿದ್ದಲ್ಲಿ ಈ ಯೋಜನೆ ಅಂತಹ ಅರ್ಜಿದಾರರಿಗೆ ಲಭ್ಯವಿರುವುದಿಲ್ಲ ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳು
– ರೇಷನ್ ಕಾರ್ಡ್
– ಆಧಾರ್ ಕಾರ್ಡ್
– ಬ್ಯಾಂಕ್ ಖಾತೆ ವಿವರ
– ಫಲಾನುಭವಿಯ ಭಾವಚಿತ್ರ

ಬೇಕಾಗಿರುವ ವಿವರಗಳು
ರೇಷನ್ ಕಾರ್ಡ್ ಸಂಖ್ಯೆ
ಆಧಾರ್ ಕಾರ್ಡ್ ಸಂಖ್ಯೆ
ಮೊಬೈಲ್ ನಂಬರ್
ಬ್ಯಾಂಕ್ ಖಾತೆ ಸಂಖ್ಯೆ
IFSC ಕೋಡ್
ಪತಿಯ ಆಧಾರ ಸಂಖ್ಯೆ
ಪತಿಯ ಮೊಬೈಲ್ ಸಂಖ್ಯೆ

ಸಾಕಷ್ಟು ದಿನಗಳಿಂದ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಸಲು ಕಾಯುತ್ತಿರುವ ಅರ್ಜಿದಾರರಿಗೆ ಶುಭ ಸುದ್ದಿ.

In Article ad

ಈಗಾಗಲೇ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭಗೊಂಡಿದ್ದು ಅರ್ಜಿಯನ್ನು ಹೇಗೆ ಭರ್ತಿ ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗೆ ಸುಲಭ ವಿಧಾನಗಳ ಮೂಲಕ ನಾವು ತಿಳಿಸಿದ್ದೇವೆ ಹಾಗಾಗಿ ಅರ್ಹ ಅರ್ಜಿದಾರರು ಸಂಪೂರ್ಣ ಮಾಹಿತಿಯನ್ನು ಓದಿ ನಂತರ ಅರ್ಜಿಗಳನ್ನು ಸಲ್ಲಿಸಿ.

1 ಮೊದಲಿಗೆ ಅರ್ಜಿದಾರರು ಕೆಳಗೆ ನೀಡಿರುವ ಸೇವಾ ಸಿಂಧು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕಾಗುತ್ತದೆ.
2 ನಂತರ ಸೇವಾ ಸಿಂಧು ಅಕೌಂಟಿಗೆ ಲಾಗಿನ್ ಮಾಡಬೇಕಾಗುತ್ತದೆ
3 ನಂತರ ಅಲ್ಲಿ apply for services ಅಂತ ಇರುವ ಆಪ್ಷನ್ ಮೇಲೆ ಅರ್ಜಿದಾರರು ಕ್ಲಿಕ್ ಮಾಡಿ ನಂತರ view all available services ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
4 ಇದಾದ ನಂತರ gruh Lakshmi Yojana pre-approved ಎಂದು ಇರುತ್ತದೆ ನೀವು ಅದರ ಮೇಲೆ ಕ್ಲಿಕ್ ಮಾಡಿ.
5 ನಂತರ ಮತ್ತೊಂದು ಪುಟದಲ್ಲಿ ಗೃಹಲಕ್ಷ್ಮೀ ಅಪ್ಲಿಕೇಶನ್ ಓಪನ್ ಆಗುತ್ತದೆ ಅಲ್ಲಿ ಭರ್ತಿ ಮಾಡಬೇಕಾದ ಪ್ರಮುಖ ಮಾಹಿತಿ ನಿಮ್ಮಲ್ಲಿ ಇರಬೇಕಾಗುತ್ತದೆ.
6 ಮೊದಲನೆಯ ಭಾಗದಲ್ಲಿ ವೈಯಕ್ತಿಕ ವಿವರಗಳು ಎಂದು ಇರುತ್ತದೆ ಅಲ್ಲಿ ಪಡಿತರ ಸಂಖ್ಯೆ ಅರ್ಜಿದಾರರ ಹೆಸರು ವರ್ಗ (ಪರಿಶಿಷ್ಟ ಜಾತಿಯೇ ಪರಿಶಿಷ್ಟ ಪಂಗಡ ಓಬಿಸಿ ಅಲ್ಪಸಂಖ್ಯಾತ ಇತರೆ ) ಎಂದು ಇರುತ್ತದೆ ಅದರಲ್ಲಿ ನಿಮ್ಮ ಪಂಗಡ ಅಂದರೆ ಕೆಟಗರಿಯನ್ನು ಆಯ್ಕೆ ಮಾಡಿಕೊಳ್ಳಿ ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
7ಎರಡನೇ ಭಾಗದಲ್ಲಿ ಬ್ಯಾಂಕ್ ಖಾತೆಯ ವಿವರ ಎಂದಿರುತ್ತದೆ ಅಲ್ಲಿ ಅರ್ಜಿದಾರರಿಗೆ ಎರಡು ಆಯ್ಕೆಗಳು ಇರುತ್ತವೆ. ಮೊದಲನೆಯದನ್ನು ಆಯ್ಕೆ ಮಾಡಿದರೆ ಫಲಾನುಭವಿಯ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ದುಡ್ಡು ಪ್ರತಿ ತಿಂಗಳು ಜಮಾ ಆಗುತ್ತದೆ.

8 ಮೂರನೇ ಭಾಗದಲ್ಲಿ ಸ್ವಯಂ ಘೋಷಣೆ ಎಂದು ಇರುತ್ತದೆ ಅಲ್ಲಿ ಹೌದು ಅಥವಾ ಇಲ್ಲ ಎಂಬ ಆಯ್ಕೆಗಳಿವೆ.
– ನಾನು ಮತ್ತು ನನ್ನ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದೇವೆ. ಹೌದು ಅಥವಾ ಇಲ್ಲ
– ನಾನು ಮತ್ತು ನನ್ನ ಪತಿ ಜಿಎಸ್‌ಟಿ ಫೈಲ್ ಸಲ್ಲಿಸುತ್ತೇವೆ ಹೌದು ಅಥವಾ ಇಲ್ಲ

In Article ad

ನಾನು ಒದಗಿಸುತ್ತಿರುವ ಎಲ್ಲಾ ವಿವರಗಳನ್ನು ನನ್ನ ತಿಳುವಳಿಕೆಯಂತೆ ಸಮರ್ಪಕವಾಗಿವೆ ನನ್ನ ಕುಟುಂಬ ಅಥವಾ ಮನೆಯಲ್ಲಿ ನಾನೇ ಮನೆ ಒಡತಿ ಆಗಿರುತ್ತೇನೆ ನಾನು ಒದಗಿಸಿರುವ ಮಾಹಿತಿಯು ಯಾವುದೇ ಕಾಲದಲ್ಲಿ ಸುಳ್ಳಂದು ಕಂಡುಬಂದರೆ ಕಾನೂನಿನಾತ್ಮಕ ಕ್ರಮಕ್ಕೆ ಒಳಗಾಗಲು ಹಾಗೂ ನಾನು ಪಡೆದ ಗೃಹಲಕ್ಷ್ಮಿ ಯೋಜನೆ, ಸೌಲಭ್ಯವನ್ನು ಸರ್ಕಾರಕ್ಕೆ ಮರುಪಾವತಿಸಲು ಬಂದಳಾಗಿರುತ್ತೇನೆ ಎಂದು ಈ ಮೂಲಕ ದೃಢೀಕರಿಸುತ್ತೇನೆ. I agree ಎನ್ನುವುದನ್ನು ಸೆಲೆಕ್ಟ್ ಮಾಡಿ

9 ಆಧಾರ್ ದೃಢೀಕರಣ ವಿಭಾಗ ಆಧಾರ್ ದೃಢೀಕರಣಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ ಎಂದು ಇರುವ ಬಟನ್ ಮೇಲೆ ಕ್ಲಿಕ್ ಮಾಡಿ ಆಧಾರ್ ಲಿಂಕ್ ಇರುವ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ. ಓಟಿಪಿಯನ್ನು ಅಲ್ಲಿ ನಮೂದಿಸಿ ವೇರಿಫೈ ಮಾಡಿ

ಗೃಹಲಕ್ಷ್ಮಿ ಆನ್ಲೈನ್ ಅರ್ಜಿ ಲಿಂಕ್ 

In Article ad

ಜಿಲ್ಲಾವಾರು ಉದ್ಯೋಗ ಮಾಹಿತಿ

close button