Gruha Jyoti Yojana: ಗೃಹ ಜ್ಯೋತಿ ಕರೆಂಟ್ ಬಳಸುತ್ತಿದ್ದವರ ಮನೇಲಿ AC ಇದ್ದರೆ ಹೊಸ ಸೂಚನೆ
How to Reduce Air Conditioner Power Consumption – ಹಿಂದೆಂದೂ ಕೇಳಿರದಂತಹ ನೋಡಿರದಂತಹ ಭಾರತದ ನಿವಾಸಿಗಳು ಹಾಗೂ ಪ್ರಮುಖವಾಗಿ ಕರ್ನಾಟಕದಲ್ಲಿ ರಣಬಿಸಿಲು ಎಲ್ಲರನ್ನೂ ಸಾಕಷ್ಟು ಕಾಡುತ್ತಿದ್ದು ಹಲವೆಡೆ ಮಳೆ ಆದರೂ ಸಹಿತ ಇಂತಹ ಬಿರು ಬಿಸಿಲು ಎಲ್ಲರನ್ನೂ ಫ್ಯಾನ್ ಹಾಗೂ ಎಸಿಗಳತ್ತ ಮೊರೆ ಹೋಗುವ ಪರಿಸ್ಥಿತಿ ಉಂಟಾಗಿದೆ. ಒಂದೆಡೆಯಿಂದ ಇನ್ನೊಂದೆಡೆಗೆ ಪ್ರತಿದಿನ ಕೆಲಸಕ್ಕೆ ಹೋಗುವ ಜನತೆ ಹಾಗೂ ಫುಟ್ಪಾತ್ ಗಳಲ್ಲಿ ಕೆಲಸ ಮಾಡುವ ಬಡ ಜನರು ಈ ಬಿರಿಬಿಸಿಲಿನ ಶೆಕೆಯಿಂದ ಬೇಸತ್ತಿದ್ದಾರೆ ಅಷ್ಟೇ ಅಲ್ಲದೆ ಸಾಕಷ್ಟು ಜನರು ಫ್ಯಾನ್ ಹಾಗೂ ಎಸಿ ಗಳಿಲ್ಲದೆ ಯಾವ ಕೆಲಸವೂ ನಡೆಯದು ಎಂಬಂತಾಗಿದೆ.
ಇನ್ನು ಈ ಸಮಯದಲ್ಲಿ ಎಸಿಯನ್ನು ಬಳಕೆ ಮಾಡುತ್ತಿದ್ದರೆ ವಿದ್ಯುತ್ ಬಿಲ್ ಕೂಡ ಹೆಚ್ಚಾಗಿ ಬರುತ್ತದೆ ಎನ್ನುವುದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾಗುತ್ತದೆ.
ಇಂತಹ ಒಂದು ಸಂದರ್ಭದಲ್ಲಿ ಎಸಿ ಬಳಸದಿದ್ದರೆ ಶೆಕೆಯಿಂದ ಜನರು ತತ್ತರಿಸಿ ಹೋಗುತ್ತಾರೆ ಹಾಗಂತ ಬಳಸಿದರೆ ವಿದ್ಯುತ್ ಬಿಲ್ ಕೂಡ ಜಾಸ್ತಿ ಬರುತ್ತದೆ ಎಂಬ ಚಿಂತೆ ಗ್ರಾಹಕರದ್ದು, ಇಂತಹ ಒಂದು ಪರಿಸ್ಥಿತಿಯಲ್ಲಿ ಎಸಿ ಹಾಗೂ ಫ್ಯಾನ್ಗಳನ್ನು ಬಳಸಿ ಕೂಡ ಕಡಿಮೆ ಕರೆಂಟ್ ಬಿಲ್ ಹೇಗೆ ಪಡೆಯುವುದು ಎಂಬ ಉಪಾಯವನ್ನು ನಾವು ಈಗ ತಿಳಿದುಕೊಳ್ಳೋಣ, ಈಗಾಗಲೇ ನೀವುಗಳು ಗೃಹ ಜ್ಯೋತಿ (Gruha Jyoti)ವಿದ್ಯುತ್ ಬಳಕೆ ಮಾಡುತ್ತಿದ್ದರು ಕೂಡ ಕಡಿಮೆ ಯೂನಿಟ್ (Unit) ಖರ್ಚಾಗುವಂತಹ ಕೆಲವು ಟಿಪ್ಸ್ ಗಳನ್ನು ವಿದ್ಯುತ್ ಇಲಾಖೆ ಬಳಕೆದಾರರಿಗೆ ತಿಳಿಸಿದೆ.
1 ಸಾಮಾನ್ಯವಾಗಿ ಎಸಿ ಬಳಕೆದಾರರು ಕಡಿಮೆ ಟೆಂಪರೇಚರ್ ನಲ್ಲಿ ಎಸಿಯನ್ನು ಬಳಸಿದರೆ ನಮ್ಮ ರೂಮುಗಳು ಬಹಳ ಹೊತ್ತು ತಂಪಾಗಿರುತ್ತದೆ ಹಾಗೂ ಬೇಗ ತಂಪಾಗುತ್ತದೆ ಎಂಬ ಕಾರಣಕ್ಕೆ 18 19 ಕ್ಕೆ ಸೆಟ್ ಮಾಡುತ್ತಾರೆ.
ಆದರೆ ಇದು ಸುಳ್ಳು ಮಾಹಿತಿ ಏಕೆಂದರೆ ಬ್ಯೂರೋ ಆಫ್ ಎನರ್ಜಿ (Bureau of Energy Efficiency) ಪ್ರಕಾರ 24 ಡಿಗ್ರಿಯಲ್ಲಿ ನಿಮ್ಮ ಎಸಿ ಟೆಂಪರೇಚರನ್ನು ಸೆಟ್ ಮಾಡಿದರೆ ಅದು ನಿಮ್ಮ ಕೋಣೆಯಲ್ಲಿ ಕೂಲಿಂಗ್ ಅನ್ನು ಕೂಡ ಹೆಚ್ಚಿಸುತ್ತದೆ ಹಾಗೂ ಹೆಚ್ಚಾಗಿ ಎಸಿ ಇಂದ ವಿದ್ಯುತ್ ಕೂಡ ತೆಗೆದುಕೊಳ್ಳದೆ ಕಡಿಮೆ ವಿದ್ಯುತ್ ಬಿಲ್ (Current Bill) ಬರಲು ಕಾರಣವಾಗುತ್ತದೆ. ಹೆಚ್ಚು ಕಡಿಮೆ 10 ಪ್ರತಿಶತ ವಿದ್ಯುತ್ ನೀವುಗಳು ಉಳಿತಾಯ ಮಾಡಬಹುದು ಹೀಗಾಗಿ 18 ಡಿಗ್ರಿಯಲ್ಲಿ ನಿಮ್ಮ ಎಸಿ ಬಳಸುವುದಕ್ಕಿಂತ 24 ಡಿಗ್ರಿಯಲ್ಲಿ ಇಟ್ಟರೆ ನಿಮ್ಮ ವಿದ್ಯುತ್ ನಲ್ಲಿ ಸಾಕಷ್ಟು ಉಳಿತಾಯ ನೀವು ಮಾಡಬಹುದು ಹಾಗೂ ಬೇಸಿಗೆಯಲ್ಲಿ ಆನಂದದ ಸಮಯವನ್ನು ಬಹಳ ಹೊತ್ತು ಕಳೆಯಬಹುದು.
2 ಹೊಸದಾಗಿ ಏಸಿಗಳನ್ನು (AC) ಖರೀದಿಸಲು ಯೋಚಿಸುತ್ತಿರುವ ಗ್ರಾಹಕರು ಈ ಒಂದು ವಿಷಯವನ್ನು ತಲೆಯಲ್ಲಿ ಇಟ್ಟುಕೊಂಡು ನಿಮ್ಮ ಎಸಿಯನ್ನು ಖರೀದಿ ಮಾಡಿದರೆ ನಿಮ್ಮ ವಿದ್ಯುತ್ ಕೂಡ ಬಹಳಷ್ಟು ಉಳಿಸಬಹುದು ಹಾಗೂ ಕಡಿಮೆ ಖರ್ಚಿನಲ್ಲಿ ಎಸಿ ಆನಂದವನ್ನು ಪ್ರತಿದಿನ ಪಡೆಯಬಹುದು.
ನೀವುಗಳು ಏಸಿ ಖರೀದಿಗಾಗಿ ಅಂಗಡಿಗಳಿಗೆ ಅಂಗಡಿಗೆ ಹೋದಾಗ ಅಲ್ಲಿ ಫೈವ್ ಸ್ಟಾರ್ ರೇಟಿಂಗ್ (5 Star Rating ) ಇರುವಂತಹ ಎಸಿ ಗಳನ್ನೇ ಖರೀದಿ ಮಾಡಿ ಏಕೆಂದರೆ ಅದು ಕಡಿಮೆ ವಿದ್ಯುತ್ ತೆಗೆದುಕೊಂಡು ಗ್ರಾಹಕರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡುವಂತಹ ತಂತ್ರಜ್ಞಾನ ಹೊಂದಿರುತ್ತದೆ. ಹಾಗಾಗಿ ಖರೀದಿಸುವ ವೇಳೆ ಫೈವ್ ಸ್ಟಾರ್ ರೇಟಿಂಗ್ ಇರುವಂತಹ ಎಸಿ ಗಳನ್ನೇ ಖರೀದಿಸಿ ಇದರ ಲಾಭವನ್ನು ಹೆಚ್ಚಾಗಿ ಪಡೆಯಿರಿ.
3 ಈಗಾಗಲೇ ನೀವು ಎಸಿ ಬಳಕೆದಾರರಾಗಿದ್ದರೆ ನಿಮ್ಮ ರಿಮೋಟ್ ಕಂಟ್ರೋಲ್ (AC Remote) ನಲ್ಲಿ ಟೈಮರ್ ಸೆಟ್ (Timer) ಮಾಡುವ ಆಪ್ಷನ್ ಕೂಡ ಇರಬಹುದು, ಒಂದು ವೇಳೆ ಟೈಮರ್ ಚೆಕ್ ಮಾಡುವ ಆಪ್ಷನ್ ನಿಮ್ಮ ರಿಮೋಟ್ ನಲ್ಲಿ ಲಭ್ಯವಿದ್ದರೆ ಅದನ್ನು ಬಳಸಿ ಆಟೋಮೆಟಿಕ್ ಆಗಿ ನಿಮ್ಮ ಎಸಿ ಒಂದು ಸಮಯದಿಂದ ಮತ್ತೊಂದು ಸಮಯದವರೆಗೆ ಟೈಮ್ ಸೆಟ್ ಮಾಡುವ ಮೂಲಕ ನೀವು ವಿದ್ಯುತ್ ಉಳಿಸಬಹುದು, ಅಂದರೆ ನೀವು ಕೆಲವೇ ಗಂಟೆಗಳು ಎಸಿ ಬಳಸುವ ಇಚ್ಛೆ ಹೊಂದಿದ್ದರೆ ಆ ಒಂದು ಪ್ರತ್ಯೇಕ ಸಮಯಕ್ಕೆ ಟೈಮರ್ ಸೆಟ್ ಮಾಡಿದ್ದಲ್ಲಿ ನೀವು ಸೆಟ್ ಮಾಡಿರುವಂತಹ ಸಮಯಕ್ಕೆ ಅದು ಆರಂಭವಾಗುತ್ತದೆ ಹಾಗೂ ನೀವು ಸೆಟ್ ಮಾಡಿರುವಂತಹ ಸಮಯಕ್ಕೆ ಅದು ಆಫ್ ಆಗುತ್ತದೆ ಇದರಿಂದ ಬೇಡದೆ ಇರುವ ಸಮಯದಲ್ಲಿ ಎಸಿ ಬಳಕೆ ನಿಲ್ಲಿಸಿ ನಿಮ್ಮ ವಿದ್ಯುತ್ ಸೇವ್ ಮಾಡುವುದರ ಮೂಲಕ ನಿಮ್ಮ ಹಣ ಕೂಡ ಉಳಿತಾಯವಾಗುವುದರಲ್ಲಿ ಸಂಶಯವಿಲ್ಲ,
4 ಎಸಿ ಬಳಸುವಾಗ ಕೆಲವು ವಿಷಯಗಳು ನಾವು ತಲೆಯಲ್ಲಿ ಇಟ್ಟುಕೊಂಡು ಎಸಿ ಬಳಸುವುದು ಅತ್ಯಗತ್ಯ, ನಾವು ಎಸಿ ಆನ್ ಮಾಡಿದಾಗ ಮೊದಲು ನಮ್ಮ ಕಿಟಕಿಗಳನ್ನು ಒಮ್ಮೆ ಪರಿಶೀಲಿಸಬೇಕು ಯಾಕೆಂದರೆ ನೀವು ಎಸಿ ಆನ್ ಮಾಡಿದಾಗ ಎಲ್ಲ ಕಿಟಕಿಗಳು ಹಾಗೂ ಬಾಗಿಲುಗಳು ಮುಚ್ಚಿರಬೇಕು ಯಾವುದೇ ಒಂದು ಸಣ್ಣ ಗ್ಯಾಪ್ ಕೂಡ ಇರದ ಹಾಗೆ ಅದನ್ನು ಕ್ಲೋಸ್ ಮಾಡಿದರೆ ನೀವು ನಿಮ್ಮ ಎಸಿ ಬಹಳ ಹೊತ್ತು ನಿಮ್ಮ ರೂಮ್ನಲ್ಲಿಯೇ ಇರುತ್ತದೆ ಹಾಗೂ ಇದರಿಂದ ಕಡಿಮೆ ವಿದ್ಯುತ್ ಬಳಕೆಯಾಗುತ್ತದೆ, ಇದರಿಂದ ನಿಮ್ಮ ಕರೆಂಟ್ ಬಿಲ್ ಕೂಡ ಕಡಿಮೆ ಬರುತ್ತದೆ,
ಹೀಗಾಗಿ ನಾವು ಹೇಳಿರುವಂತಹ ಈ ನಾಲ್ಕು ಅಂಶಗಳನ್ನು ನೀವು ತಲೆಯಲ್ಲಿ ಇಟ್ಟುಕೊಂಡು ಎಸಿ ಬಳಸಿದ್ದೆ ಆದಲ್ಲಿ ಯಾವುದೇ ರೀತಿಯಾಗಿ ಅನಗತ್ಯವಾಗಿ ಕರೆಂಟ್ ಬಿಲ್ ಬರುವುದಿಲ್ಲ ಹಾಗೂ ಇದರಿಂದ ಸಾಕಷ್ಟು ಯೂನಿಟ್ ಗಳನ್ನು ಕಡಿಮೆಗೊಳಿಸಿ ನಿಮ್ಮ ವಿದ್ಯುತ್ ಬಿಲ್ ಕೂಡ ಖಂಡಿತವಾಗಿಯೂ ಕಡಿಮೆ ಬಂದೇ ಬರುತ್ತದೆ.
ಜಿಲ್ಲಾವಾರು ಉದ್ಯೋಗಗಳು |