6432 ಹುದ್ದೆಗಳ ಬೃಹತ್ ನೇಮಕಾತಿ 2022

ಪ್ರೊಬೇಷನರಿ ಆಫೀಸರ್ ಮತ್ತು ಮ್ಯಾನೇಜ್ಮೆಂಟ್ ಟ್ರೈನಿ (ಎಂಟಿ) ಪೋಸ್ಟ್‌ಗಳನ್ನು, 2023-24ನೇ ಸಾಲಿಗೆ, ನೇಮಕ

IBPS PO / MT Exam Notification 2022: ಇನ್‌ಸ್ಟಿಟ್ಯೂಟ್ ಆಫ್‌ ಬ್ಯಾಂಕಿಂಗ್ ಪರ್ಸೊನೆಲ್ ಸೆಲೆಕ್ಷನ್‌ (ಐಬಿಪಿಎಸ್) ಪ್ರೊಬೇಷನರಿ ಆಫೀಸರ್ ಮತ್ತು ಮ್ಯಾನೇಜ್ಮೆಂಟ್ ಟ್ರೈನಿ (ಎಂಟಿ) ಪೋಸ್ಟ್‌ಗಳನ್ನು, 2023-24ನೇ ಸಾಲಿಗೆ, ನೇಮಕ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಬ್ಯಾಂಕ್‌ಗಳಲ್ಲಿ ಭರ್ತಿ ಮಾಡುವ ಸಲುವಾಗಿ ಇದೀಗ ಪರೀಕ್ಷೆ ಅಧಿಸೂಚನೆ ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.

ಇಲಾಖೆ ಹೆಸರು: ಇನ್‌ಸ್ಟಿಟ್ಯೂಟ್ ಆಫ್‌ ಬ್ಯಾಂಕಿಂಗ್ ಪರ್ಸೊನೆಲ್ ಸೆಲೆಕ್ಷನ್‌ (ಐಬಿಪಿಎಸ್)
ಹುದ್ದೆಗಳ ಹೆಸರು: ಪ್ರೊಬೇಷನರಿ ಆಫೀಸರ್ / ಮ್ಯಾನೇಜ್ಮೆಂಟ್ ಟ್ರೈನಿ
ಒಟ್ಟು ಹುದ್ದೆಗಳು  6432
ಅರ್ಜಿ ಸಲ್ಲಿಸುವ ಬಗೆ  ಆನ್ಲೈನ್ 

ವಿದ್ಯಾರ್ಹತೆ:
ಇನ್‌ಸ್ಟಿಟ್ಯೂಟ್ ಆಫ್‌ ಬ್ಯಾಂಕಿಂಗ್ ಪರ್ಸೊನೆಲ್ ಸೆಲೆಕ್ಷನ್‌ (ಐಬಿಪಿಎಸ್) ನೇಮಕಾತಿ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಪದವಿ ( ಡಿಗ್ರಿ ) ಮುಗಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ವಯೋಮಿತಿ:
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ 20 ವರ್ಷ ವಯಸ್ಸಾಗಿರಬೇಕು. ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು.
ವಯೋಮಿತಿ ಸಡಿಲಿಕೆ ವರ್ಗಾವಾರು ಈ ಕೆಳಗಿನಂತಿದೆ.
ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ.
ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ.
PWD ಅಭ್ಯರ್ಥಿಗಳಿಗೆ 10 ವರ್ಷ.
ಮಾಜಿ ಸೈನಿಕ ಅಭ್ಯರ್ಥಿಗಳಿಗೆ 5 ವರ್ಷ.

ಅರ್ಜಿ ಶುಲ್ಕ:
ಸಾಮಾನ್ಯ ಅಭ್ಯರ್ಥಿಗಳಿಗೆ ರೂ.850.
ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.850.
ಎಸ್ಸಿ / ಎಸ್ಟಿ / ಅಂಗವಿಕಲ ಅಭ್ಯರ್ಥಿಗಳಿಗೆ ರೂ.175.
ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ ಡೆಬಿಟ್‌ ಕಾರ್ಡ್‌, ಕ್ರೆಡಿಟ್ ಕಾರ್ಡ್‌, ಇಂಟರ್ನೆಟ್‌ ಬ್ಯಾಂಕಿಂಗ್, ಕ್ಯಾಶ್‌ ಕಾರ್ಡ್‌ ಇತರೆ ಮಾರ್ಗಗಳಲ್ಲಿ ಪಾವತಿಸಬಹುದು.

ಪರೀಕ್ಷೆ ಭಾಷೆ
ಕನ್ನಡ ಸೇರಿದಂತೆ 13 ಭಾಷೆಗಳಲ್ಲಿ ಐಬಿಪಿಎಸ್‌ ಬ್ಯಾಂಕಿಂಗ್ ಹುದ್ದೆಗಳ ಪರೀಕ್ಷೆ ನಡೆಸಲಾಗುತ್ತದೆ. ಕರ್ನಾಟಕದ ಅಭ್ಯರ್ಥಿಗಳು ಕನ್ನಡ, ಕೊಂಕಣಿ, ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ಯಾವುದಾದರೂ ಒಂದರಲ್ಲಿ ಪರೀಕ್ಷೆ ಬರೆಯಬಹುದು. ಅರ್ಜಿ ಸಲ್ಲಿಸುವಾಗಲೇ ಪರೀಕ್ಷೆ ಭಾಷೆ ಆಯ್ಕೆ ಮಾಡಿಮಾಡಿಕೊಳ್ಳಬಹುದು.

ಪರೀಕ್ಷೆ ವಿಧಾನ
ಐಬಿಪಿಎಸ್‌ ಪಿಒ / ಎಂಟಿ ಹುದ್ದೆಗಳಿಗೆ ಈ ಕೆಳಗಿನ ಮಾದರಿಯ ಮೂರು ಹಂತದ ಪರೀಕ್ಷೆ ನಡೆಸಲಾಗುತ್ತದೆ.
ಆನ್‌ಲೈನ್‌ ಪ್ರಿಲಿಮಿನರಿ ಪರೀಕ್ಷೆ – ಟೈಯರ್ -1
ಆನ್‌ಲೈನ್‌ ಮೇನ್ಸ್ ಪರೀಕ್ಷೆ – ಟೈಯರ್ – 2

ಪ್ರಮುಖ ದಿನಾಂಕಗಳು
ಆನ್‌ಲೈನ್‌ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 02-08-2022
ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 22-08-2022
ಪರೀಕ್ಷೆ ಪೂರ್ವಭಾವಿ ತರಬೇತಿಗೆ ಪ್ರವೇಶ ಪತ್ರ ಬಿಡುಗಡೆ: ಸೆಪ್ಟೆಂಬರ್ / ಅಕ್ಟೋಬರ್ 2022
ಪರೀಕ್ಷೆ ಪೂರ್ವ ತರಬೇತಿ ನಡೆಸುವ ಅವಧಿ : ಸೆಪ್ಟೆಂಬರ್ / ಅಕ್ಟೋಬರ್ 2022
ಪೂರ್ವ ಭಾವಿ ಪರೀಕ್ಷೆಗೆ ಕರೆ ಪತ್ರ ಬಿಡುಗಡೆ : ಅಕ್ಟೋಬರ್ 2022
ಪ್ರಿಲಿಮ್ಸ್ ಆನ್‌ಲೈನ್‌ ಪರೀಕ್ಷೆ : ಅಕ್ಟೋಬರ್ 2022

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ  02-08-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  22-08-2022
   
ಪ್ರಮುಖ ಲಿಂಕುಗಳು 
ವೆಬ್ಸೈಟ್  ಇಲ್ಲಿ ಕ್ಲಿಕ್ ಮಾಡಿ 
ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ 
ಅರ್ಜಿ ಲಿಂಕ್  ಇಲ್ಲಿ ಕ್ಲಿಕ್ ಮಾಡಿ 

error: Content is protected !!