WhatsApp Telegram Group

ಐಬಿಪಿಎಸ್ ಬೃಹತ್ ನೇಮಕಾತಿ 2021ಅಧಿಸೂಚನೆ ಪ್ರಕಟ, 10,676 ಖಾಲಿ ಹುದ್ದೆಗಳು

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿದ್ದ ಅಭ್ಯರ್ಥಿಗಳಿಗೆ ಭರ್ಜರಿ ನ್ಯೂಸ್‌ ಒಂದು ಇದೀಗ ಹೊರಬಂದಿದೆ. IBPS ಬೃಹತ್‌ ಹುದ್ದೆಗಳ ನೇಮಕಾತಿಗಾಗಿ ಇದೀಗ ಅಧಿಸೂಚನೆಯನ್ನು ಹೊರಡಿಸಿದೆ. ದೇಶದಾದ್ಯಂತ ಇರುವ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಲ್ಲಿನ ಆಫೀಸರ್ ಮತ್ತು ಆಫೀಸರ್ ಅಸಿಸ್ಟಂಟ್‌ (ಮಲ್ಟಿಪರ್ಪೋಸ್‌) ಒಟ್ಟು 10,676 ಹುದ್ದೆಗಳ ಭರ್ತಿಗಾಗಿ ಬಿಡುಗಡೆ ಮಾಡಿರುವ ನೋಟಿಫಿಕೇಶನ್‌ ಇದಾಗಿದೆ.

ಹುದ್ದೆಗಳ ವಿವರ
ಆಫೀಸ್ ಅಸಿಸ್ಟಂಟ್ (ಮಲ್ಟಿಪರ್ಪೋಸ್ ) – 5096
ಆಫೀಸರ್ ಸ್ಕೇಲ್‌-1 – 4119
ಆಫೀಸರ್ ಸ್ಕೇಲ್‌-2 (ಅಗ್ರಿಕಲ್ಚರ್ ಆಫೀಸರ್) – 25
ಆಫೀಸರ್ ಸ್ಕೇಲ್‌-2 (ಮಾರ್ಕೆಟಿಂಗ್ ಮ್ಯಾನೇಜರ್) – 43
ಆಫೀಸರ್ ಸ್ಕೇಲ್‌-2(ಟ್ರೆಸರಿ ಮ್ಯಾನೇಜರ್)- 10
ಆಫೀಸರ್ ಸ್ಕೇಲ್‌-2 (Law) – 27
ಆಫೀಸರ್ ಸ್ಕೇಲ್‌-2 (CA) – 32
ಆಫೀಸರ್ ಸ್ಕೇಲ್‌-2 (IT)- 59
ಆಫೀಸರ್ ಸ್ಕೇಲ್‌-2 (ಜೆನೆರಲ್ ಬ್ಯಾಂಕಿಂಗ್ ಆಫೀಸರ್) – 905
ಆಫೀಸರ್ ಸ್ಕೇಲ್‌-3 – 151

ವಿದ್ಯಾರ್ಹತೆ: ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಹುದ್ದೆಗೆ ಸಂಬಂಧಿಸಿದ ವಿಷಯದಲ್ಲಿ ಡಿಗ್ರಿ ಪಾಸ್ ಮಾಡಿರಬೇಕು. ಜತೆಗೆ ಕೆಲವೊಂದು ಹುದ್ದೆಗೆ ಎಂಬಿಎ, ಸಿಎ ಪಾಸ್‌ ಮಾಡಿರಬೇಕು.

In Article ad

ವಯೋಮಿತಿ
ಆಫೀಸರ್ ಸ್ಕೇಲ್ – III ಕನಿಷ್ಠ 21-ಗರಿಷ್ಠ40
ಆಫೀಸರ್ ಸ್ಕೇಲ್ – II ಕನಿಷ್ಠ 21-ಗರಿಷ್ಠ32
ಆಫೀಸರ್ ಸ್ಕೇಲ್ – I ಕನಿಷ್ಠ 18-ಗರಿಷ್ಠ30
ಆಫೀಸರ್ ಅಸಿಸ್ಟಂಟ್‌ (ಮಲ್ಟಿಪರ್ಪೋಸ್‌) ಕನಿಷ್ಠ18-ಗರಿಷ್ಠ28

ವಯೋಸಡಿಲಿಕೆ
OBC ಅಭ್ಯರ್ಥಿಗಳಿಗೆ: 3 ವರ್ಷಗಳು
SC, ST ಅಭ್ಯರ್ಥಿಗಳಿಗೆ: 5 ವರ್ಷಗಳು
PWD ಅಭ್ಯರ್ಥಿಗಳಿಗೆ: 10 ವರ್ಷಗಳು

ಆಯ್ಕೆ ಪ್ರಕ್ರಿಯೆ
ಆನ್‌ಲೈನ್‌ ಪರೀಕ್ಷೆ (ಪ್ರಿಲಿಮಿನರಿ, ಮುಖ್ಯ ಪರೀಕ್ಷೆ) ಜತೆಗೆ, ಸಂದರ್ಶನವನ್ನು ನಡೆಸಿ ಆಯ್ಕೆ ಮಾಡಲಾಗುತ್ತದೆ.

In Article ad

ಐಬಿಪಿಎಸ್ ಆರ್‌ಆರ್‌ಬಿ ಹುದ್ದೆಗಳ ನೇಮಕಾತಿಗೆ ಜೂನ್ 8 ರಿಂದ ಅರ್ಜಿ ಸ್ವೀಕಾರ ಆರಂಭವಾಗಲಿದ್ದು, ಜೂನ್ 28 ರವರೆಗೆ ಅರ್ಜಿ ಸಲ್ಲಿಸಬಹುದು. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ತಿಳಿದು, ವೆಬ್‌ಸೈಟ್‌ https://www.ibps.in/ ಗೆ ಭೇಟಿ ನೀಡಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು

ಅರ್ಜಿ ಶುಲ್ಕ: ಎಸ್‌ಸಿ / ಎಸ್‌ಟಿ / PWD ಅಭ್ಯರ್ಥಿಗಳಿಗೆ ರೂ.175, ಇತರೆ ಅಭ್ಯರ್ಥಿಗಳಿಗೆ ರೂ.850.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 08-06-2021
ಅಪ್ಲಿಕೇಶನ್‌ ಸಲ್ಲಿಸಲು ಕೊನೆ ದಿನಾಂಕ : 28-06-2021
ಪೂರ್ವಭಾವಿ ಪರೀಕ್ಷೆ ದಿನಾಂಕ: 2021 ರ ಆಗಸ್ಟ್‌
ಮುಖ್ಯ ಪರೀಕ್ಷೆ ದಿನಾಂಕ : ಸೆಪ್ಟೆಂಬರ್ / ಅಕ್ಟೋಬರ್ 2021

In Article ad
Website 
Notification 

 

ಜಿಲ್ಲಾವಾರು ಉದ್ಯೋಗ ಮಾಹಿತಿ

close button