ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

ಮನೆ ಇಲ್ಲದವರಿಗೆ ಉಚಿತ ಮನೆ – ಈಗಲೇ ಅರ್ಜಿ ಸಲ್ಲಿಸಿ

ಮುಖ್ಯಮಂತ್ರಿಗಳ ಒಂದು ಲಕ್ಷ ವಸತಿ ಯೋಜನೆ

Karnataka Cm One Lakh Housing Scheme Online Application – ಕರ್ನಾಟಕ ರಾಜ್ಯ ಸರ್ಕಾರ ವಸತಿ ಬಡವರಿಗೆ ಮನೆ ಒದಗಿಸುವ ನಿಟ್ಟಿನಲ್ಲಿ ಸಾಕಷ್ಟು ಯೋಜನೆಗಳನ್ನು ಜಾರಿ ಮಾಡಿದೆ. ಈ ಪೈಕಿ ‘ಮುಖ್ಯಮಂತ್ರಿ ಒಂದು ಲಕ್ಷ ವಸತಿ ಯೋಜನೆ’ ಪ್ರಮುಖವಾದುದು. ಈ ಯೋಜನೆಯ ಫಲಾನುಭವಿಗಳ ಪಟ್ಟಿ, ಅರ್ಜಿ ಸಲ್ಲಿಕೆ ವಿಧಾನ ಅಥವಾ ಅರ್ಜಿಯ ಸ್ಟೇಟಸ್ ಚೆಕ್‌ ಮಾಡುವುದು ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. ಇಷ್ಟೇ ಅಲ್ಲ ರಾಜ್ಯದಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆ, ಆಶ್ರಯ ಕರ್ನಾಟಕ, ಅವಾಸ ಯೋಜನೆಯಂತಹ ಪ್ರಮುಖ ಯೋಜನೆಗಳಡಿ ಬಡಜನರರಿಗೆ ವಸತಿ ಒದಗಿಸಲಾಗಿದೆ.

ಫಲಾನುಭವಿಗಳ ಅರ್ಹತೆ ಏನು?
ಕರ್ನಾಟಕದ ನಾಗರಿಕರಿಗೆ ಮಾತ್ರ ಯೋಜನೆ ಅನ್ವಯವಾಗುತ್ತದೆ.
ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳು ಅರ್ಹರಾಗಿರುತ್ತಾರೆ.
ಕುಟುಂಬಗಳ ವಾರ್ಷಿಕ ಆದಾಯ ರೂ. 87,000 ರೂಪಾಯಿಗಳಿಗಿಂತ ಕಡಿಮೆ ಇರಬೇಕು.
ಅರ್ಜಿ ಸಲ್ಲಿಸುವವರು ಬೆಂಗಳೂರಿನಲ್ಲಿ ಕನಿಷ್ಟ ಐದು ಅಥವಾ ಅದಕ್ಕಿಂತ ಹೆಚ್ಚು ವರ್ಷಗಳಿಂದ ವಾಸವಾಗಿರಬೇಕು.
ಅರ್ಜಿ ಸಲ್ಲಿಸುವ ವ್ಯಕ್ತಿ ಸ್ವಂತ ಮನೆ ಹೊಂದಿರಬಾರದು.
ಅರ್ಜಿದಾರ ಬೇರೆ ಯಾವುದೇ ಯೋಜನೆಗಳಡಿ ಪ್ರಯೋಜನ ಪಡೆದಿರಬಾರದು.

ಅಗತ್ಯವಿರುವ ದಾಖಲಾತಿ
ಆದಾಯ ಪ್ರಮಾಣ ಪತ್ರ
ಆಧಾರ್ ಕಾರ್ಡ್
ವಾಸಸ್ಥಳ ಪ್ರಮಾಣ ಪತ್ರ (ಐದು ವರ್ಷಗಳಿಂದ ವಾಸವಾಗಿರುವ ಕುರಿತು)

ಯೋಜನೆಯ ಮುಖ್ಯ ಉದ್ದೇಶ ಏನು?
ಈ ಯೋಜನೆಯ ಮುಖ್ಯ ಉದ್ದೇಶ ಅಗ್ಗದ ದರದಲ್ಲಿ ಒಂದು ಲಕ್ಷ ಮನೆಗಳನ್ನು ಬಿಪಿಎಲ್ ಕುಟುಂಬಗಳಿಗೆ ಒದಗಿಸುವುದು. ಬೆಂಗಳೂರಿನಲ್ಲಿ (ಬೆಂಗಳೂರು ಪೂರ್ವ, ಬೆಂಗಳೂರು ಪಶ್ಚಿಮ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ) ನಿವೇಶನಗಳನ್ನು ನಿರ್ಮಿಸುವುದು. Housing Scheme Online

ಮುಖ್ಯಮಂತ್ರಿ ಒಂದು ಲಕ್ಷ ವಸತಿ ಯೋಜನೆಯನ್ನು ರಾಜೀವ್ ಗಾಂಧಿ ರೂರಲ್ ಹೌಸಿಂಗ್ ಕಾರ್ಪೋರೇಷನ್ ಲಿಮಿಟೆಡ್ ಸಂಸ್ಥೆ ಅನುಷ್ಠಾನಕ್ಕೆ ತಂದಿದೆ. ‘ಮುಖ್ಯಮಂತ್ರಿ ಒಂದು ಲಕ್ಷ ವಸತಿ ಯೋಜನೆ’ಯ ಫಲಾನುಭವಿಗಳ ಪಟ್ಟಿಯನ್ನು ಸರ್ಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ashraya.karnataka.gov.in ತಿಳಿಯಬಹುದು.

ಈ ಯೋಜನೆಗೆ  ಯೋಜನೆಗೆ ಅರ್ಜಿ ಸಲ್ಲಿಕೆ ಹೇಗೆ?
ರಾಜ್ಯ ಸರ್ಕಾರದ ಮುಖ್ಯಮಂತ್ರಿ 1 ಲಕ್ಷ ವಸತಿ ಯೋಜನೆಯ ಫಲಾನುಭವಿಯಾಗಲು ಬಯಸುವವರು ಅಧಿಕೃತ ವೆಬ್‌ಸೈಟ್‌ (ashraya.karnataka.gov.in) ಮೂಲಕ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ (rajiv gandhi rural housing corporation limited) ಅರ್ಜಿ ಸಲ್ಲಿಕೆಗೆ ಹೆಚ್ಚಿನ ಮಾಹಿತಿ, ಮಾರ್ಗದರ್ಶಿಯನ್ನು ಒದಗಿಸುತ್ತದೆ. ಅರ್ಜಿದಾರರು ನೋಂದಣಿ ಮಾಡಿ ಲಾಗಿನ್ ಆಗಬೇಕು. ನಂತರ ಅರ್ಜಿಯನ್ನು ತುಂಬಿ ಅಗತ್ಯ ದಾಖಲಾತಿಗಳೊಂದಿಗೆ ಅಪ್ಲೋಡ್ ಮಾಡಬೆಕಾಗುತ್ತದೆ.

ಆನ್ಲೈನ್ ಸ್ಟೇಟಸ್ ಚೆಕ್ ಮಾಡೋದು ಹೇಗೆ?
ಮುಖ್ಯಮಂತ್ರಿ 1 ಲಕ್ಷ ವಸತಿ ಯೋಜನೆ ಬೆಂಗಳೂರು, ಇದರ ಆನ್ಲೈನ್ ಸ್ಟೇಟಸ್ ಚೆಕ್ ಮಾಡಲು ಈ ಹಂತಗಳನ್ನು ಅನುಸರಿಸಿ.
ಹಂತ 1: https://ashraya.karnataka.gov.in/Static/BeneficiaryStatusNew.aspx ಈ ಲಿಂಕ್‌ ಕ್ಲಿಕ್ ಮಾಡುವ ಮೂಲಕ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ಪುಟ ತೆರೆಯಿರಿ
ಹಂತ 2 : ನಿಮ್ಮ ಜಿಲ್ಲೆ ಹಾಗು ಫಲಾನುಭವಿ ಕೋಡ್ ನಮೂದಿಸಿ.
ಹಂತ 3 : ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.

f

JOBS BY QUALIFICATION

close button