ಕರ್ನಾಟಕ ರಾಜ್ಯ ಅಬಕಾರಿ ಇಲಾಖೆಯಿಂದ ಶೀಘ್ರದಲ್ಲೇ ದೊಡ್ಡ ನೇಮಕಾತಿಗೆ ಚಾಲನೆ


ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಕುರಿತಾದ ಮಾಹಿತಿಗಳನ್ನು ಮಾನ್ಯ ಅಬಕಾರಿ ಸಚಿವರು ಇತ್ತೀಚಿಗೆ ಬಿಡುಗಡೆ ಮಾಡಿದ್ದಾರೆ. ಅಬಕಾರಿ ಇಲಾಖೆಯಲ್ಲಿ ಒಟ್ಟು ಖಾಲಿ ಹುದ್ದೆಗಳ ಸಂಖ್ಯೆ 1755. ಹುದ್ದೆವಾರು ಖಾಲಿ ವಿವರ ಈ ಕೆಳಗಿನಂತೆ ತಿಳಿಸಲಾಗಿದೆ.

ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ
ಅಬಕಾರಿ ನಿರೀಕ್ಷಕರು 60
ಅಬಕಾರಿ ಉಪ ನಿರೀಕ್ಷಕರು 353
ಅಬಕಾರಿ ಮುಖ್ಯಪೇದೆ 165
ಅಬಕಾರಿ ಪೇದೆ 573
ಪ್ರಥಮ ದರ್ಜೆ ಸಹಾಯಕರು 136
ದ್ವಿತೀಯ ದರ್ಜೆ ಸಹಾಯರು 137

ಗ್ರೂಪ್‌ ‘ಎ’ ಹುದ್ದೆಗಳ ಪೈಕಿ 60 ಪೋಸ್ಟ್‌ಗಳು, ಗ್ರೂಪ್‌ ‘ಬಿ’ ನ 28 ಪೋಸ್ಟ್‌ಗಳು, ಗ್ರೂಪ್‌ ‘ಸಿ’ ನ 1633 ಪೋಸ್ಟ್‌ಗಳು, ಗ್ರೂಪ್‌ ‘ಡಿ’ ನ 34 ಪೋಸ್ಟ್‌ಗಳು ಖಾಲಿ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಯಾವಾಗ ಭರ್ತಿ ಮಾಡಲಾಗುತ್ತದೆ ಎಂಬುದಕ್ಕೆ ಉತ್ತರ ಸಿಕ್ಕಿಲ್ಲ.

ಶೀಘ್ರದಲ್ಲೇ ಇದರ ಅಧಿಕೃತ ಅಧಿಸೂಚನೆ ಬಿಡುಗಡೆ ಬಿಡುಗಡೆಯಾಗಿ ನೇಮಕಾತಿಯು ಕೂಡ ಶೀಘ್ರದಲ್ಲೇ ಆರಂಭವಾಗಲಿದೆ, ಎಲ್ಲ ಉದ್ಯೋಗಾಕಾಂಷಿಗಳು ತಮ್ಮ ಸ್ಪರ್ಧಾತ್ಮಕ ಪರೀಕ್ಷಾ ತಯಾರಿ ಈಗಿನಿಂದಲೇ ಚುರುಕುಗೊಳಿಸಿ, ಪರೀಕ್ಷೆಯಲ್ಲಿ ಉತ್ತಮ ಅಂಕ ಜಯಿಸಿ.

ಶೀಘ್ರದಲ್ಲೇ ನೇಮಕಾತಿ ಆರಂಭ

 

error: Content is protected !!