ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

ಜಿಲ್ಲಾ ಸಹಕಾರ ಹಾಲು ಒಕ್ಕೂಟದಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಅಹ್ವಾನ 2021 : KMF VIMUL Recruitment 2021

 

ಬಾಗಲಕೋಟೆ  ಮತ್ತು ವಿಜಯಪುರ  ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ಕುರಿತಾಗಿ ಸಂಪೂರ್ಣ ವಿವರ ಈ ಕೆಳಗಿನಂತಿದೆ. ಅರ್ಹ ಅಭ್ಯರ್ಥಿಗಳು ಕೆಳಗೆ ಕೊಟ್ಟಿರುವ ಅಧಿಸೂಚನೆ ಲಿಂಕ್ ಮೇಲೆ ಕ್ಲಿಕ್ ಮಾಡಿ ಅದನ್ನು ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ,

KMF VIMUL Recruitment 2021 – Apply Online for 39 Manager, Assistant Posts 

1) ಸಹಾಯಕ ವ್ಯವಸ್ಥಾಪಕರು (ಎಹೆಚ್/ಎಐ) –
03 ಹುದ್ದೆಗಳು

ವಿದ್ಯಾರ್ಹತೆ: ಬಿ.ವಿ.ಎಸ್ಸಿ ಪದವಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು. ಕಹಾಮ ಮತ್ತು ಇದರ ಹಾಲು ಒಕ್ಕೂಟಗಳಲ್ಲಿ ಪಶು ವೈದ್ಯಕೀಯ ಸಮಾಲೋಚಕರಾಗಿ ಕನಿಷ್ಠ 3 ವರ್ಷ ಸೇವೆ ಸಲ್ಲಿಸಿದವರಿಗೆ ಆದ್ಯತೆ ನೀಡಲಾಗುವುದು.

2) ಸಹಾಯಕ ವ್ಯವಸ್ಥಾಪಕರು (ಎಫ್ & ಎಫ್) –
02 ಹುದ್ದೆಗಳು

ವಿದ್ಯಾರ್ಹತೆ:  ಬಿ.ಎಸ್ಸಿ (ಕೃಷಿ) ಪದವಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು. ಕಹಾಮ ಮತ್ತು ಇದರ ಹಾಲು ಒಕ್ಕೂಟಗಳಲ್ಲಿ ಕನಿಷ್ಠ 4 ವರ್ಷ ಸಮಾಲೋಚಕರಾಗಿ ಸೇವೆ ಸಲ್ಲಿಸಿದವರಾಗಿರಬೇಕು.

3) ಸಿಸ್ಟಂ ಅಧಿಕಾರಿ
01 ಹುದ್ದೆ

ವಿದ್ಯಾರ್ಹತೆ:  ಬಿ.ಇ (Information Science) ಪದವಿ ಅರ್ಹತೆ ಹೊಂದಿರಬೇಕು. ಕಹಾಮ ಮತ್ತು ಇದರ ಹಾಲು ಒಕ್ಕೂಟಗಳಲ್ಲಿ ಪಶು ಕನಿಷ್ಠ 3 ವರ್ಷ ಮಾಹಿತಿ ನಿರ್ವಹಣೆ ವ್ಯವಸ್ಥೆ ವಿಭಾಗದಲ್ಲಿ ಸೇವೆ ಸಲ್ಲಿಸಿರಬೇಕು.

 

 

4) ತಾಂತ್ರಿಕ ಅಧಿಕಾರಿ (ಡಿ.ಟಿ) –
01 ಹುದ್ದೆ

ವಿದ್ಯಾರ್ಹತೆ:  ಬಿ.ಎಸ್ಸಿ (ಡಿ.ಟಿ)/ ಬಿ.ಟೆಕ್ (ಡಿ.ಟೆಕ್)/ಬಿ.ಟೆಕ್ (ಪುಡ್ ಟೆಕ್ನಾಲಜಿ) ಪದವಿ ಅರ್ಹತೆ ಹೊಂದಿರಬೇಕು.

5) ತಾಂತ್ರಿಕ ಅಧಿಕಾರಿ (ಅಭಿಯಂತರ) –
01 ಹುದ್ದೆ

ವಿದ್ಯಾರ್ಹತೆ:  ಬಿಇ (ಮೆಕಾನಿಕಲ್) ಪದವಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

6) ಮಾರುಕಟ್ಟೆ ಅಧೀಕ್ಷಕರು
01 ಹುದ್ದೆ

ವಿದ್ಯಾರ್ಹತೆ:  ಬಿ.ಬಿ.ಎ/ ಬಿ.ಬಿ.ಎಮ್/ ಬಿ.ಕಾಂ/ ಬಿ.ಎಸ್ಸಿ (ಅಗ್ರಿಕಲ್ಚರ್ ಮಾರ್ಕೆಟಿಂಗ್ & ಕೋಆಪರೇಶನ್) ಪದವಿ ಜೊತೆಗೆ ಎಂ.ಬಿ.ಎ (ಮಾರ್ಕೆಟಿಂಗ್) ಸ್ನಾತಕೋತ್ತರ ಪದವಿ ಪಡೆದಿರಬೇಕು.

7) ವಿಸ್ತರಣಾಧಿಕಾರಿ ದರ್ಜೆ 3
08 ಹುದ್ದೆಗಳು

ವಿದ್ಯಾರ್ಹತೆ:  ಬಿ.ಕಾಂ./ ಬಿ.ಎಸ್ಸಿ/ ಬಿ.ಬಿ.ಎ/ ಬಿ.ಬಿ.ಎಂ/ ಬಿ.ಎ/ ಬಿ.ಎಸ್ಸಿ (ಕೃಷಿ) ಪದವಿಯಲ್ಲಿ ಕನಿಷ್ಠ ಶೇ. 60 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

8) ಮಾರುಕಟ್ಟೆ ಸಹಾಯಕರು ದರ್ಜೆ 2
02 ಹುದ್ದೆಗಳು

ವಿದ್ಯಾರ್ಹತೆ:  ಬಿ.ಕಾಂ/ ಬಿ.ಬಿ.ಎ ಪದವಿ ಜೊತೆಗೆ ಟ್ಯಾಲಿ ಪ್ರಮಾಣ ಪತ್ರ ಮತ್ತು ಎಂಎಸ್ ಆಫೀಸ್ ಪ್ಯಾಕೇಜ್ ಜ್ಞಾನ ಹೊಂದಿರಬೇಕು.

9) ಕೆಮಿಸ್ಟ್ ದರ್ಜೆ 2
2 ಹುದ್ದೆಗಳು

ವಿದ್ಯಾರ್ಹತೆ:  ಕೆಮೆಸ್ಟ್ರಿ ಅಥವಾ ಮೈಕ್ರೋಬೈಯಾಲಾಜಿಯನ್ನು ಒಂದು ಐಚ್ಛಿಕ ವಿಷಯವಾಗಿ ಬಿ.ಎಸ್ಸಿ ಪದವಿಯನ್ನು ಹೊಂದಿರಬೇಕು.

10) ಆಡಳಿತ ಸಹಾಯಕ ದರ್ಜೆ 2
01 ಹುದ್ದೆ

ವಿದ್ಯಾರ್ಹತೆ:  ಯಾವುದೇ ಪದವಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

11) ಲೆಕ್ಕ ಸಹಾಯಕ ದರ್ಜೆ 2
04 ಹುದ್ದೆಗಳು

ವಿದ್ಯಾರ್ಹತೆ:  ಬಿ.ಕಾಂ ಪದವಿ ಜೊತೆಗೆ ಟ್ಯಾಲಿ ಪ್ರಮಾಣ ಪತ್ರ ಮತ್ತು ಎಂಎಸ್ ಆಫೀಸ್ ಪ್ಯಾಕೇಜ್ ಜ್ಞಾನ ಹೊಂದಿರಬೇಕು.

12) ಕಿರಿಯ ಸಿಸ್ಟಂ ಆಫರೇಟರ್
02 ಹುದ್ದೆಗಳು

ವಿದ್ಯಾರ್ಹತೆ:  ಬಿ.ಎಸ್ಸಿ (ಕಂಪ್ಯೂಟರ್ ಸೈನ್ಸ್/ ಕಂಪ್ಯೂಟರ್ ಅಪ್ಲಿಕೇಷನ್) ಅಥವಾ ಬಿಸಿಎ ಪದವಿ ಪಡೆದಿರಬೇಕು

13) ಕಿರಿಯ ತಾಂತ್ರಿಕ (ಬಾಯ್ಲರ್ ಅಟೆಂಡೆಂಟ್) –
02 ಹುದ್ದೆಗಳು

ವಿದ್ಯಾರ್ಹತೆ:  ಎಸ್.ಎಸ್.ಎಲ್.ಸಿ ಉತ್ತೀರ್ಣತೆ ಜೊತೆಗೆ ಬಾಯ್ಲರ್ ಅಟೆಂಡೆಂಟ್ ಸರ್ಟಿಫಿಕೇಟ್ ಹೊಂದಿರಬೇಕು.

14) ಕಿರಿಯ ತಾಂತ್ರಿಕ (ಎಲೆಕ್ಟ್ರಿಷಿಯನ್) –
03 ಹುದ್ದೆಗಳು

ವಿದ್ಯಾರ್ಹತೆ:  ಎಸ್.ಎಸ್.ಎಲ್.ಸಿ ಉತ್ತೀರ್ಣತೆ ಜೊತೆಗೆ ಐಟಿಐ ನಲ್ಲಿ ಇಲೆಕ್ಟ್ರಿಕಲ್ ಟ್ರೇಡ್ ಸರ್ಟಿಫಿಕೇಟ್ ಹೊಂದಿರಬೇಕು.

15) ಕಿರಿಯ ತಾಂತ್ರಿಕ (ರೆಪ್ರೀಜಿರೇಷನ್) –
01 ಹುದ್ದೆ

ವಿದ್ಯಾರ್ಹತೆ:  ಎಸ್.ಎಸ್.ಎಲ್.ಸಿ ಉತ್ತೀರ್ಣತೆ ಜೊತೆಗೆ ಐಟಿಐ ನಲ್ಲಿ ರೆಪ್ರೀಜಿರೇಷನ್ ಟ್ರೇಡ್ ಸರ್ಟಿಫಿಕೇಟ್ ಹೊಂದಿರಬೇಕು.

16) ಕಿರಿಯ ತಾಂತ್ರಿಕ (ಫಿಟ್ಟರ್) –
01 ಹುದ್ದೆ

ವಿದ್ಯಾರ್ಹತೆ:  ಎಸ್.ಎಸ್.ಎಲ್.ಸಿ ಉತ್ತೀರ್ಣತೆ ಜೊತೆಗೆ ಐಟಿಐ ನಲ್ಲಿ ಫಿಟ್ಟರ್ ಟ್ರೇಡ್ ಸರ್ಟಿಫಿಕೇಟ್ ಹೊಂದಿರಬೇಕು.

17) ಹಾಲು ರವಾನೆಗಾರರು
04 ಹುದ್ದೆಗಳು

ವಿದ್ಯಾರ್ಹತೆ:  ಕನಿಷ್ಠ ಎಸ್.ಎಸ್.ಎಲ್.ಸಿ ಪಾಸಾಗಿರಬೇಕು.

ಉದ್ಯೋಗ ಸ್ಥಳ: 
 ಆಯ್ಕೆಯಾದ ಅಭ್ಯರ್ಥಿಗಳಿಗೆ  ವಿಜಯಪುರ ದಲ್ಲಿ  ಕಾರ್ಯ ನಿರ್ವಹಿಸಬೇಕು.

ವೇತನ ಶ್ರೇಣಿ :
ತಿಂಗಳು ರೂ. 21,400 ರಿಂದ ರೂ. 97,100ವರೆಗೂ ವೇತನ ನೀಡಲಾಗುತ್ತದೆ.

ವಯಸ್ಸಿನ ಮಿತಿ: ಕನಿಷ್ಠ 18 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ ಹಾಗೂ
ಎಸ್ಸಿ, ಎಸ್ಟಿ, ಪ್ರವರ್ಗ 1 ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ
ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ
ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ

ಆಯ್ಕೆ ಪ್ರಕ್ರಿಯೆ : ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆ ಮತ್ತು ಅಗತ್ಯ ದಾಖಲೆಗಳ ಆಧಾರದ ಮೇಲೆ ಪರಿಶೀಲಿಸಿ ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ ನಂತರ ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಶೇಕಡವಾರು ಆಧಾರದ ಮೇಲೆ (ಮೆರಿಟ್) 1:5ರ ಅನುಪಾತದಲ್ಲಿ ಅರ್ಹ ಅಭ್ಯರ್ಥಿಗಳಿಗೆ ಮೌಖಿಕ ಸಂದರ್ಶನ ನಡೆಸಿ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ : ಎಸ್ಸಿ, ಎಸ್ಟಿ, ಪ್ರವರ್ಗ 1 ಹಾಗೂ ಅಂಗವಿಕಲ ಅಭ್ಯರ್ಥಿಗಳು ರೂ. 500 ಹಾಗೂ ಇತರೆ ಅಭ್ಯರ್ಥಿಗಳು ರೂ. 1000 ಪಾವತಿಸಬೇಕು

 

 

 

 

ಶುಲ್ಕ ಪಾವತಿಸುವ ವಿಧಾನ : ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆಗೆ ಪ್ರಾರಂಭ ದಿನಾಂಕ : ಡಿಸೆಂಬರ್ 18, 2021

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ಜನವರಿ 20, 2022

Website / Application Form
Download Notification PDF
close button