ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

ನಿರುದ್ಯೋಗಿಗಳಿಗೆ ಹೊಸ ಉದ್ಯೋಗಗಳು 

ಬೆಂಗಳೂರು : ರಾಜ್ಯದಲ್ಲಿ ಶಾಲಾ-ಕಾಲೇಜು ಆರಂಭದ ನಂತ್ರ ವಿದ್ಯಾರ್ಥಿಗಳ ಉಚಿತ ಬಸ್ ಪಾಸ್ ಅವಧಿ ಮುಕ್ತಾಯಗೊಂಡಿದ್ದರೂ, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಠಿಯಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ದಿನಾಂಕ 31-1-2021 ರವರೆಗೆ ಅವಕಾಶ ನೀಡಿ ಕೆಎಸ್ ಆರ್ ಟಿ ಸಿ ಆದೇಶ ನೀಡಿತ್ತು.

ಇದೀಗ ಮುಂದುವರೆದು, ಎಲ್ಲಾ ವರ್ಗದ ಶಾಲಾ/ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿದ್ಯಾರ್ಥಿಗಳು 2019-20 ನೇ ಸಾಲಿನ ಬಸ್ ಪಾಸ್ ಹಾಗೂ ಪ್ರಸಕ್ತ ವರ್ಷದಲ್ಲಿ ಕಾಲೇಜುಗಳಿಗೆ ದಾಖಲಾಗಿರುವ ಶುಲ್ಕ ಪಾವತಿ ರಶೀದಿ ಯೊಂದಿಗೆ ಸಂಬಂಧಪಟ್ಟ ಮಾರ್ಗದಲ್ಲಿ ಕರಾರಸಾ ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು 28:2:2021 ರವರೆಗೆ ಅವಕಾಶ ಕಲ್ಪಿಸಿದೆ.


ನಿಗಮದ ಬಸ್ಸುಗಳಲ್ಲಿ ವಿದ್ಯಾರ್ಥಿ ಬಸ್ ಪಾಸುದಾರರಿಗೆ 2019-20ನೇ ಸಾಲಿನ ಪಾಸಿನ ಆಧಾರದಲ್ಲಿ ಉಚಿತವಾಗಿ ಪ್ರಯಾಣಿಸಲು ಕೆ ಎಸ್ ಆರ್ ಟಿ ಸಿ ನಿಗಮವು ದಿನಾಂಕ 28:2:2021 ರವರೆಗೆ ಅವಕಾಶ ಕಲ್ಪಿಸಿದೆ.

ಇನ್ನೂ, ಪ್ರಸಕ್ತ ವರ್ಷದಲ್ಲಿ ಸೇವಾ ಸಿಂಧು ಪೋರ್ಟಲ್ ಮೂಲಕ ವಿದ್ಯಾರ್ಥಿಗಳು ಹೊಸ ಬಸ್ ಪಾಸ್ ಪಡೆಯಬೇಕಿರುವುದರಿಂದ ಈ ಬಗ್ಗೆ ತಮ್ಮ ವಿಭಾಗ ವ್ಯಾಪ್ತಿಯ ಶಾಲಾ/ಕಾಲೇಜು ಮಕ್ಕಳಿಗೆ ಸೇವಾಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಿ ಬಸ್ ಪಾಸ್ ಪಡೆಯುವಂತೆ ಕೆ ಎಸ್ ಆರ್ ಟಿ ಸಿ ಪ್ರಕಟಣೆ ಹೊರಡಿಸಿದೆ.

ನಿರುದ್ಯೋಗಿಗಳಿಗೆ ಹೊಸ ಉದ್ಯೋಗಗಳು 

error: Content is protected !!