ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

KSRTC ಬೃಹತ್ ನೇಮಕಾತಿ 2022 : 4600 ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ ಆರಂಭ

 

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ 2018 ರಲ್ಲಿ ಹಾಗೂ 2020 ರನ್ವಯ 3745 ಚಾಲನಾ ಸಿಬ್ಬಂದಿ ನೇರ ನೇಮಕಾತಿಗಾಗಿ ಅಧಿಸೂಚನೆಗಳನ್ನು ಹೊರಡಿಸಲಾಗಿತ್ತು.ಹೀಗಾಗಿ ಇದು ಉದ್ಯೋಗಾಂಕ್ಷಿಗಳಿಗೆ(Job Seekers) ಸಿಹಿಸುದ್ದಿಯಾಗಿದೆ. ಒಟ್ಟು 726 ತಾಂತ್ರಿಕ ಸಹಾಯಕ, 200 ಕರಾಸಾ ಪೇದೆ ಹಾಗೂ 3,745 ಚಾಲನಾ ಸಿಬ್ಬಂದಿ ಹುದ್ದೆ ಸೇರಿ ಒಟ್ಟು 4600ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಹೀಗಾಗಿ ಈ ಹುದ್ದೆಗಳ ನೇರ ನೇಮಕಾತಿಗೆ ಮರುಚಾಲನೆ ನೀಡುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸರ್ಕಾರ(Government )ವನ್ನು ಕೋರಿದೆ.

ಕೊರೋನಾ ಕಾರಣದಿಂದಾಗಿ ಈ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿಯಲಾಗಿತ್ತು. ಈಗ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡವಂತೆ ಸರ್ಕಾರವನ್ನು ಕೋರಲಾಗಿದೆ. ಈ ಕುರಿತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿಯೋಗಿ ಕಳಸದ ಪ್ರಕಟಣೆ ಹೊರಡಿಸಿದ್ದಾರೆ.

 

 

 

ಹುದ್ದೆಯ ವಿವರ

ಹುದ್ದೆಯ ಹೆಸರುಒಟ್ಟು ಹುದ್ದೆಗಳು
ತಾಂತ್ರಿಕ ಸಹಾಯಕ 726 ಹುದ್ದೆಗಳು
ಕರಾಸಾ ಪೇದೆ 200 ಹುದ್ದೆಗಳು
ಚಾಲನಾ ಸಿಬ್ಬಂದಿ3745 ಹುದ್ದೆಗಳು
ಒಟ್ಟು 4600 ಹುದ್ದೆಗಳು

ಈ ಮೊದಲು ಕೆಎಸ್​ಆರ್​ಟಿಸಿಯಲ್ಲಿ ಖಾಲಿ ಇರುವ 726 ತಾಂತ್ರಿಕ ಸಹಾಯಕ, 200 ಕರಾಸಾ ಪೇದೆ ಮತ್ತು 3,745 ಚಾಲನಾ ಸಿಬ್ಬಂದಿಯ ನೇರ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ತದನಂತರದಲ್ಲಿ ಕೋವಿಡ್​-19 ಕಾರಣದಿಂದಾಗಿ ಈ ನೇಮಕಾತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು. ಈಗ ಈ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Notification PDF
close button