WhatsApp Telegram Group

ಗ್ರಾಮ ಪಂಚಾಯಿತಿ ಬೃಹತ್ ನೇಮಕಾತಿಗೆ ಚಾಲನೆ ನೀಡಿದ ರಾಜ್ಯ ಸರ್ಕಾರ


ಗ್ರಾಮ ಪಂಚಾಯಿತಿ ಕಾರ್ಯದರ್ಶಿ (ಗ್ರೇಡ್‌–2) ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕ (ಎಸ್‌ಡಿಎಎ) ಹುದ್ದೆಗಳಿಗೆ ಗ್ರಾಮ ಪಂಚಾಯಿತಿ ನೌಕರರ ವೃಂದದಿಂದ ನೇರ ನೇಮಕಾತಿ ಮಾಡಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಒಟ್ಟು ಹುದ್ದೆಗಳ ಸಂಖ್ಯೆ: 6406

ಕೋವಿಡ್‌ ಕಾರಣದಿಂದ ನೇರ ನೇಮಕಾತಿ ಪ್ರಕ್ರಿಯೆಯನ್ನು ತಡೆ ಹಿಡಿಯಲಾಗಿತ್ತು. ಇದೀಗ ತಡೆಯನ್ನು ತೆರವುಗೊಳಿಸಲಾಗಿದೆ. ಆ ಮೂಲಕ, ಹಲವು ವರ್ಷಗಳಿಂದ ಪದೋನ್ನತಿಗೆ ಕಾಯುತ್ತಿರುವ ಗ್ರಾಮ ಪಂಚಾಯಿತಿಯ ವಿವಿಧ ವೃಂದಗಳ ಸಿಬ್ಬಂದಿಗೆ ಅನುಕೂಲ ಆಗಲಿದೆ.

In Article ad

ಗ್ರಾಮ ಪಂಚಾಯಿತಿ ಕಾರ್ಯದರ್ಶಿ (ಗ್ರೇಡ್‌–2) ಮತ್ತು ಎಸ್‌ಡಿಎಎ ಹುದ್ದೆಗಳಿಗೆ ಬಿಲ್‌ ಕಲೆಕ್ಟರ್‌, ಅಕೌಂಟೆಂಟ್‌, ಕ್ಲರ್ಕ್‌, ಟೈಪಿಸ್ಟ್‌, ಕ್ಲರ್ಕ್‌ ಕಂ ಡೇಟಾ ಎಂಟ್ರಿ ಆಪರೇಟರ್‌ ವೃಂದದ ಹುದ್ದೆಗಳಿಂದ ನೇರ ನೇಮಕಾತಿ ಪ್ರಕ್ರಿಯೆಯನ್ನು ತಕ್ಷಣ ಆರಂಭಿಸುವಂತೆ ಎಲ್ಲ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ (ಆರ್‌ಡಿಪಿಆರ್‌) ಪ್ರಧಾನ ಕಾರ್ಯದರ್ಶಿ ಸೂಚಿಸಿದ್ದಾರೆ.

In Article ad

ಗ್ರಾಮ ಪಂಚಾಯಿತಿ ಕಾರ್ಯದರ್ಶಿ (ಗ್ರೇಡ್‌–2) ವೃಂದದ ಶೇ 70ರಷ್ಟು ಹುದ್ದೆಗಳನ್ನು 3:2 ಅನುಪಾತದಲ್ಲಿ ನೇಮಕಾತಿಗೆ ಅವಕಾಶ ನೀಡಲಾಗಿದೆ. ಅಂದರೆ, ಮೊದಲ ಮೂರು ಹುದ್ದೆಗಳನ್ನು ಬಿಲ್‌ ಕಲೆಕ್ಟರ್‌ ವೃಂದದ ನೌಕರರಿಂದ, ನಂತರ ಎರಡು ಹುದ್ದೆಗಳನ್ನು ಅಕೌಂಟೆಂಟ್‌, ಕ್ಲರ್ಕ್‌, ಟೈಪಿಸ್ಟ್‌, ಕಂ ಡೇಟಾ ಎಂಟ್ರಿ ಆಪರೇಟರ್‌ ವೃಂದದಿಂದ ನೇಮಕಾತಿ ಮಾಡಿಕೊಳ್ಳಬೇಕು.

ಅಭ್ಯರ್ಥಿಯ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಿ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ, ಮೀಸಲಾತಿ ನಿಯಮಗಳ ಅನ್ವಯ ಆಯ್ಕೆ ಪಟ್ಟಿ ಪ್ರಕಟಿಸಬೇಕು ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಉಳಿದ ಶೇ 30ರಷ್ಟು ಖಾಲಿ ಹುದ್ದೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಮೂಲಕ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

 

In Article ad

 

ದ್ವಿತೀಯ ದರ್ಜೆ ಲೆಕ್ಕ ಸಹಾಯಕ ವೃಂದದ ಶೇ 50ರಷ್ಟು ಹುದ್ದೆಗಳನ್ನು 1:1 ಅನುಪಾತದಲ್ಲಿ ನೇಮಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಅಂದರೆ, ಮೊದಲ ಖಾಲಿ ಹುದ್ದೆಯನ್ನು ಬಿಲ್‌ ಕಲೆಕ್ಟರ್‌ ವೃಂದಿಂದ, ಎರಡನೇ ಹುದ್ದೆಯನ್ನು ಅಕೌಂಟೆಂಟ್‌, ಕ್ಲರ್ಕ್‌, ಟೈಪಿಸ್ಟ್‌, ಕಂ ಡೇಟಾ ಎಂಟ್ರಿ ಆಪರೇಟರ್‌ ವೃಂದದಿಂದ ನೇಮಕಾತಿ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ಉಳಿದ ಶೇ 50ರಷ್ಟು ಖಾಲಿ ಹುದ್ದೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಮೂಲಕ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

ಆಯ್ಕೆ ಪ್ರಕ್ರಿಯೆ ಹೇಗೆ?: ಗ್ರಾಮ ಪಂಚಾಯಿತಿಯಲ್ಲಿ ಕನಿಷ್ಠ ಆರು ವರ್ಷ ಕೆಲಸ ಮಾಡಿದ ಸಿಬ್ಬಂದಿ ನೇರ ನೇಮಕಾತಿಗೆ ಅರ್ಹತೆ ಪಡೆಯಲಿದ್ದಾರೆ. ಈ ರೀತಿ ಬಡ್ತಿಗೆ ಅರ್ಹತೆ ಪಡೆದವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯ 100 ಅಂಕಗಳ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದೆ.

Notification 
Website 

ಜಿಲ್ಲಾವಾರು ಉದ್ಯೋಗ ಮಾಹಿತಿ

close button