ಎಲ್ಪಿಜಿ ಸಿಲಿಂಡರ್ ಗ್ರಾಹಕರಿಗೆ ಸಿಹಿ ಸುದ್ದಿ!

Telegram Group

ಎಲ್ಪಿಜಿ ಸಿಲಿಂಡರ್ ಗ್ರಾಹಕರಿಗೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸಿಹಿ ಸುದ್ದಿ ನೀಡಿದೆ. ಗ್ರಾಹಕರು ತಮ್ಮ ಎಲ್ಪಿಜಿ ಸಿಲಿಂಡರ್ ಗಳನ್ನು ಬಯಸುವ ವಿತರಕರಿಂದ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ.

ಚಂಡಿಗಢ, ಕೊಯಮತ್ತೂರು, ಗುರ್ ಗಾಂವ್, ಪುಣೆ ಮತ್ತು ರಾಂಚಿ ಸೇರಿದಂತೆ ಆಯ್ದ ನಗರಗಳಲ್ಲಿ ಪ್ರಾಯೋಗಿಕ ಹಂತದಲ್ಲಿ ಸೌಲಭ್ಯವನ್ನು ಆರಂಭಿಸಿ ನಂತರ ವಿಸ್ತರಿಸಲಾಗುತ್ತದೆ. ಎಲ್ಪಿಜಿ ಗ್ರಾಹಕರು ತಮ್ಮ ಎಲ್ಪಿಜಿ ಸಿಲಿಂಡರ್ ಖಾಲಿಯಾದ ನಂತರ ಅವರು ಬಯಸುವ ವಿತರಕರಿಂದ ಭರ್ತಿಯಾದ ಸಿಲಿಂಡರ್ ಪಡೆದುಕೊಳ್ಳಬಹುದು. ಆಯ್ಕೆಯನ್ನು ಗ್ರಾಹಕರಿಗೆ ನಿರ್ಧರಿಸಬಹುದಾಗಿದೆ. ಶೀಘ್ರವೇ ಪ್ರಾಯೋಗಿಕ ಸೌಲಭ್ಯವನ್ನು ವಿವಿಧ ಕಡೆ ಆರಂಭಿಸಲಾಗುವುದು ಎಂದು ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ.


ಆಯ್ದ ಮಾರಾಟಗಾರರಿಂದ ಎಲ್ಪಿಜಿ ಸಿಲಿಂಡರ್ ಕಾಯ್ದಿರಿಸಬೇಕಿರುವುದರಿಂದ ಗ್ರಾಹಕರಿಗೆ ಅನೇಕ ಸಮಸ್ಯೆ ಎದುರಿಸುವಂತಾಗಿದೆ.

ವಿಶೇಷವಾಗಿ ಸಿಲಿಂಡರ್ಗಳ ಲಭ್ಯತೆ ಕಡಿಮೆ ಇರುವ ದೂರದ ಪ್ರದೇಶಗಳಲ್ಲಿ ವಾಸಿಸುವವರಿಗೆ ಸಮಸ್ಯೆಯಾಗಿದ್ದು, ಈಗ ಯಾವುದೇ ಮಾರಾಟಗಾರರಿಂದ ಸಿಲಿಂಡರ್ ತರಿಸಿಕೊಳ್ಳಬಹುದಾಗಿದೆ ಎಂದು ಹೇಳಲಾಗಿದೆ.

Telegram Group
error: Content is protected !!