ಹತ್ತನೇ ಹಾಗೂ ಐಟಿಐ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಖಾಲಿ ಹುದ್ದೆಗಳು

Telegram Group

ರೈಲ್ವೆ ಇಲಾಖೆಯ ಚೆನ್ನೈನ ಇಂಟಿಗ್ರೆಲ್‌ ಕೋಚ್‌ ವಿಭಾಗದಲ್ಲಿ ಖಾಲಿ ಇರುವ 1000 ಟ್ರೇಡ್ ಅಪ್ರೆಂಟಿಸ್‌ಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಕರ್ನಾಟಕ, ಆಂಧ್ರ, ಕೇರಳ ಸೇರಿದಂತೆ ತಮಿಳುನಾಡು ರಾಜ್ಯಗಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಇದು ನೇರ ನೇಮಕಾತಿಯಾಗಿರುತ್ತದೆ.

ಹುದ್ದೆಗಳ ವಿವರ: ಫಿಟ್ಟರ್, ಟರ್ನರ್‌, ಎಲೆಕ್ಟ್ರಿಷಿಯನ್, ಮೆಕಾನಿಸ್ಟ್‌, ಪ್ಲಂಬರ್‌, ಪೇಂಟರ್‌, ಕೊಪರ್‌, ಸ್ಟೆನೋ, ಸಹಾಯಕ ಹುದ್ದೆಗಳ ನೇಮಕಾತಿ ನಡೆಯಲಿದೆ

ಒಟ್ಟು ಹುದ್ದೆಗಳ ಸಂಖ್ಯೆ: 1000

ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ ಹಾಗೂ ಐಟಿಐ, ಪಿಯುಸಿ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು.

ತರಬೇತಿ ಭತ್ಯೆ: ಭಾರತ ಸರ್ಕಾರದ ನಿಯಮಗಳ ಅನ್ವಯ ತರಬೇತಿ ಭತ್ಯೆ ನೀಡಲಾಗುವುದು. ಮಾಸಿಕ ₹6,000 ರಿಂದ ₹7,000 ಭತ್ಯೆ ನೀಡಲಾಗುವುದು.

ವಯೋಮಿತಿ ಸಡಿಲಿಕೆ: 2020ಕ್ಕೆ ಅನ್ವಯವಾಗುವಂತೆ ಕನಿಷ್ಠ 15, ಗರಿಷ್ಠ 24 ವರ್ಷದರಾಗಿರಬೇಕು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ, ಅಂಗವಿಕಲರಿಗೆ 10 ವರ್ಷಗಳ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ನೇಮಕಾತಿ ವಿಧಾನ: ಎಸ್‌ಎಸ್‌ಎಲ್‌ಸಿ ಹಾಗೂ ಐಟಿಐ, ಪಿಯುಸಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್‌ ಲಿಸ್ಟ್‌ ತಯಾರಿಸಿ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ: ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು. ಅಧಿಕೃತ ವೆಬ್‌ಸೈಟ್‌ https://indianrailwayrecruitment.in ಗೆ ಲಾಗಿನ್‌ ಆಗಿ ಅರ್ಜಿ ಸಲ್ಲಿಸುವ ಮಾಹಿತಿಯನ್ನು ಪಡೆಯಬಹುದು. ಇತರೆ ವಿಧಾನದಲ್ಲಿ ಸಲ್ಲಿಸುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

 

ಅರ್ಜಿ ಸಲ್ಲಿಸಲು ಕೊನೆಯ ದಿನ: 25 ಸೆಪ್ಟೆಂಬರ್‌ 2020

ವೆಬ್ಸೈಟ್ 

ನೋಟಿಫಿಕೇಶನ್ 

Telegram Group
error: Content is protected !!