ನಿಮ್ಮ ರೇಷನ್ ಕಾರ್ಡ್ ಬಗ್ಗೆ ಇಲ್ಲಿದೆ ಪ್ರಮುಖ ಮಾಹಿತಿ

Telegram Group

ನಿಮ್ಮ ರೇಷನ್ ಕಾರ್ಡ್ ಕ್ಯಾನ್ಸಲ್ ಆಗಿದೆಯೇ ಎಂಬುದರ್  ಬಗ್ಗೆ ತಿಳಿಯೋಣ 

ಪಡಿತರ ಚೀಟಿಗೆ ಸಂಬಂಧಿಸಿದಂತೆ ಹೊಸ ಮಾಹಿತಿಯೊಂದು ಬಂದಿದ್ದು ಆ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ. ಕರ್ನಾಟಕ ರಾಜ್ಯ ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿಯಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ರಿಯಾಯಿತಿ ದರದಲ್ಲಿ ಧಾನ್ಯಗಳನ್ನು ಒದಗಿಸುತ್ತದೆ.ಬಡತನ ರೇಖೆಗಿಂತ ಕೆಳಗಿರುವವರು ಎಂದು ಗುರುತಿಸುವ ರಾಜ್ಯ ಸರ್ಕಾರವು ರೇಷನ್ ಕಾರ್ಡ್ ಅನ್ನು ಅರ್ಹರಾಗಿರುವ ಕುಟುಂಬಗಳಿಗೆ ಮಾತ್ರ ಒದಗಿಸಲು ಪ್ರಯತ್ನಿಸುತ್ತಿದೆ.

 

ರೇಷನ್ ಕಾರ್ಡ್ ಪಟ್ಟಿಯಲ್ಲಿ ನಿಮ್ಮ ಕಾರ್ಡ್ ಕೂಡ ಇದೆಯೇ ಎಂಬುದನ್ನು ಹಾಗೂ ಅರ್ಹರು ಆನ್‌ಲೈನ್‌ನಲ್ಲಿ ಸುಲಭವಾಗಿ ರೇಷನ್ ಕಾರ್ಡ್ ಪಡೆಯಲು ಏನು ಮಾಡಬೇಕು ಎಂಬುದನ್ನು ತಿಳಿಯೋಣ.

ಕರ್ನಾಟಕ ರೇಷನ್ ಕಾರ್ಡ್ ಪಟ್ಟಿಯನ್ನು ಪರೀಕ್ಷಿಸಲು ಈ ಕೆಳಗಿನಂತೆ ತಿಳಿಯೋಣ

ಆಹಾರದ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ನೀಡಿ (ahara.kar.nic.in)

‘ಇ-ಸೇವೆಗಳ ಬಟನ್ ಮೇಲೆ ಕ್ಲಿಕ್ ಮಾಡಿ, ತದ ನಂತರ ‘ಇ-ರೇಷನ್’ ಲಿಂಕ್ ಅನ್ನು ಕ್ಲಿಕ್ ಮಾಡಿ

‘ವಿಲೇಜ್ ಪಟ್ಟಿ’ ಬಟನ್ ಅನ್ನು ಕ್ಲಿಕ್ ಮಾಡಿ, ಜಿಲ್ಲೆಯ, ತಾಲ್ಲೂಕು, ಗ್ರಾಮ ಪಂಚಾಯತ್, ಮತ್ತು ಗ್ರಾಮವನ್ನು ಆಯ್ಕೆ
ಮಾಡಿ ಮತ್ತು ‘ಗೋ’ ಮೇಲೆ ಕ್ಲಿಕ್ ಮಾಡಿ ಎಲ್ಲಾ ರೇಷನ್ ಕಾರ್ಡಗಳ ಪಟ್ಟಿ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತದೆ.

ನಿಮ್ಮ ಪಡಿತರ ಚೀಟಿಯ ಅರ್ಜಿಯ ಅಕ್ನಾಲೆಜ್ ಮೆಂಟ್ ಸಂಖ್ಯೆಯನ್ನು ಹುಡುಕಿ ಅದರಲ್ಲಿ ನಿಮ್ಮ ಪಡಿತರ ಚೀಟಿಯ ಅರ್ಜಿ ಸಂಖ್ಯೆ ಇದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ನಂತರ ಅದರ ಪ್ರಿಂಟ್ ತೆಗೆದುಕೊಂಡು ನೀವು ನಿಮ್ಮ ತಾಲೂಕ ಆಫೀಸಿಗೆ ಭೇಟಿ ನೀಡಿ ಅಲ್ಲಿ ನಾವು ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದು ನಮ್ಮ ಪಡಿತರ ಚೀಟಿ ತಯಾರಾಗಿದೆ ಅದರ ಪ್ರತಿಯನ್ನು ತೆಗೆದುಕೊಡುವಂತೆ ಕೇಳಬೇಕು. ಈ ರೀತಿಯಾಗಿ ನೀವು ಸುಲಭವಾಗಿ ನಿಮ್ಮ ಪಡಿತರ ಚೀಟಿಯನ್ನು ಪಡೆಯಬಹುದಾಗಿದೆ.

 

Telegram Group
error: Content is protected !!