ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನೇಮಕಾತಿ 2021 RDPR (IA)

ಉದ್ಯೋಗ ಸುದ್ದಿ 

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಲ ಜೀವನ್ ಮಿಷನ್ ಹಾಗೂ ಸ್ವಚ್ ಭಾರತ್ ಮಿಷನ್ ಯೋಜನೆಯಡಿಯಲ್ಲಿ ಕೇಂದ್ರ ಕಚೇರಿ ಹಾಗೂ ಜಿಲ್ಲಾ ಪಂಚಾಯತಿಗಳಲ್ಲಿ ಖಾಲಿ ಇರುವ ತಾತ್ಕಾಲಿಕ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಕೊನೆಯ ದಿನಾಂಕ : 19-06-2021 ರೊಳಗಾಗಿ ಅರ್ಜಿಯನ್ನು ಸಲ್ಲಿಸಬೇಕು.

ಹುದ್ದೆಗಳ ವಿವರ
ಜೂನಿಯರ್ ಕನ್ಸಲ್ಟೆಂಟ್ (ಕಾರ್ಯನಿರ್ವಾಹಕ ಎಂಜಿನಿಯರ್ ಮಟ್ಟ) – 1
ಖರೀದಿ ಸಲಹೆಗಾರ – 1
ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ (ಎಸ್‌ಎಲ್‌ಡಬ್ಲ್ಯೂಎಂ) ಸಲಹೆಗಾರ – 1
ಭೂ ವಿಜ್ಞಾನಿ – 1
ಮಾಹಿತಿ ಶಿಕ್ಷಣ ಮತ್ತು ಸಂವಹನ (ಐಇಸಿ) ಸಲಹೆಗಾರ – 1
ಜಿಲ್ಲಾ ಎಂಐಎಸ್ / ಎಂ & ಇ ಕನ್ಸಲ್ಟೆಂಟ್ – 2

 

ಒಟ್ಟು ಹುದ್ದೆಗಳು: 7
ಉದ್ಯೋಗ ಸ್ಥಳ: ಕರ್ನಾಟಕ

ವಿದ್ಯಾರ್ಹತೆ:
ಜೂನಿಯರ್ ಕನ್ಸಲ್ಟೆಂಟ್ (ಕಾರ್ಯನಿರ್ವಾಹಕ ಎಂಜಿನಿಯರ್ ಮಟ್ಟ) ಹುದ್ದೆಗೆ : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಿವಿಲ್ ಎಂಜಿನಿಯರಿಂಗ್‌ ನಲ್ಲಿ ಪದವಿಯನ್ನು ಹೊಂದಿರಬೇಕು.

ಖರೀದಿ ಸಲಹೆಗಾರ ಹುದ್ದೆಗೆ : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ವಾಣಿಜ್ಯ / ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಅಥವಾ ಎಂಜಿನಿಯರಿಂಗ್‌ನಲ್ಲಿ ಪದವಿಯನ್ನು ಹೊಂದಿರಬೇಕು.

ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ (ಎಸ್‌ಎಲ್‌ಡಬ್ಲ್ಯೂಎಂ) ಸಲಹೆಗಾರ ಹುದ್ದೆಗೆ : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪರಿಸರ ವಿಜ್ಞಾನದಲ್ಲಿ ಪರಿಣತಿಯೊಂದಿಗೆ ಪರಿಸರ ಎಂಜಿನಿಯರಿಂಗ್ / ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿಯನ್ನು ಹೊಂದಿರಬೇಕು.

ಭೂ ವಿಜ್ಞಾನಿ ಹುದ್ದೆಗೆ : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಭೂವಿಜ್ಞಾನ / ಅನ್ವಯಿಕ ಭೂವಿಜ್ಞಾನ ಪದವಿಯನ್ನು ಹೊಂದಿರಬೇಕು.

ಮಾಹಿತಿ ಶಿಕ್ಷಣ ಮತ್ತು ಸಂವಹನ (ಐಇಸಿ) ಸಲಹೆಗಾರ ಹುದ್ದೆಗೆ : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮಾಸ್ ಕಮ್ಯುನಿಕೇಷನ್ / ಜರ್ನಲಿಸಂನಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.

ಜಿಲ್ಲಾ ಎಂಐಎಸ್ / ಎಂ & ಇ ಕನ್ಸಲ್ಟೆಂಟ್ ಹುದ್ದೆಗೆ : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂ.ಸಿ.ಎ. / ಸ್ಟ್ಯಾಟಿಸ್ಟಿಕ್ಸ್, ಎಂ.ಎಸ್ಸಿ ಕಂಪ್ಯೂಟರ್ ಸೈನ್ಸ್ / ಬಿಇ ಕಂಪ್ಯೂಟರ್ ಸೈನ್ಸ್ ಪದವಿಯನ್ನು ಹೊಂದಿರಬೇಕು.

10th Pass Jobs 2021
Degree Pass Jobs 2021
7th Pass Jobs 2021
Diploma Pass Jobs 2021
ITI Pass Jobs 2021
PUC Pass Jobs 2021

ವೇತನ ಶ್ರೇಣಿ:
ಜೂನಿಯರ್ ಕನ್ಸಲ್ಟೆಂಟ್ (ಕಾರ್ಯನಿರ್ವಾಹಕ ಎಂಜಿನಿಯರ್ ಮಟ್ಟ) – 60,000 / – ರೂ & ತಿಂಗಳಿಗೆ ರೂ .15,000 / – ಪ್ರಯಾಣ ಭತ್ಯೆಯಾಗಿ ನೀಡಲಾಗುವುದು. ಖರೀದಿ ಸಲಹೆಗಾರ – 85,000 /- ರೂ.ನಿಂದ 1,00,000 / ರೂಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ (ಎಸ್‌ಎಲ್‌ಡಬ್ಲ್ಯೂಎಂ) ಸಲಹೆಗಾರ – 1,00,000/- ರೂ.ನಿಂದ 1,20,000/- ರೂ.ಭೂವಿಜ್ಞಾನಿ – 30,000/- ರೂ.ನಿಂದ 35,000/- ರೂ. ಮಾಹಿತಿ ಶಿಕ್ಷಣ ಮತ್ತು ಸಂವಹನ (ಐಇಸಿ) ಸಲಹೆಗಾರ – 22,000/- ರೂ.ನಿಂದ 25,000/- ರೂ ಜಿಲ್ಲಾ ಎಂಐಎಸ್ / ಎಂ & ಇ ಕನ್ಸಲ್ಟೆಂಟ್ – 22,000/- ರೂ.ನಿಂದ 25,000/- ರೂ

ಅರ್ಜಿ ಸಲ್ಲಿಸುವ ವಿಳಾಸ
“ಆಯುಕ್ತರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ”, 2 ನೇ ಮಹಡಿ, ಕೆಎಚ್‌ಬಿ ಕಾಂಪ್ಲೆಕ್ಸ್, ಕಾವೇರಿ ಭವನ, ಕೆ.ಜಿ ರಸ್ತೆ, ಬೆಂಗಳೂರು – 560 009.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 27 ಮೇ 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19 ಜೂನ್ 2021

Website
Notification
close button