SBI ಖಾತೆ ಹೊಂದಿರುವವರು ಕೂಡಲೇ ಈ ಕೆಲಸ ಮಾಡಿ

ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಒಂದು ವೇಳೆ ನೀವೂ ಕೂಡ ಖಾತೆ ಹೊಂದಿದ್ದರೆ, ಈ ವರದಿ ನಿಮ್ಮ ಉಪಯೋಗಕ್ಕೆ ಬರಲಿದೆ. ಹೌದು, SBI ತನ್ನ ಕ್ಯಾಶ್ ವಿಥ್ ಡ್ರಾ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಿದೆ. ಹಣ ಹಿಂಪಡೆಯುವಿಕೆಗಾಗಿ ಬ್ಯಾಂಕ್ ಒಟ್ಟು ಮೂರು ನಿಯಮಗಳನ್ನು ಹೇಳಿದೆ. ಈ ನಿಯಮಗಳನ್ನು ಒಂದು ವೇಳೆ ನೀವೂ ಕೂಡ ಪಾಲಿಸಿದರೆ ನಿಮಗೆ ಟ್ಯಾಕ್ಸ್ ಬೀಳುವ ಸಾಧ್ಯತೆ ಇಲ್ಲ. ಗ್ರಾಹಕರು ಕೆಲ ವಿಶೇಷ ಸಂದರ್ಭಗಳಲ್ಲಿ ಬ್ಯಾಂಕ್ ನಿಂದ ಹಣ ಹಿಂಪಡೆದರೆ ಟ್ಯಾಕ್ಸ್ ನೀಡಬೇಕಾಗಲಿದೆ ಎಂದು ಬ್ಯಾಂಕ್ ಹೇಳಿದೆ. ಹಾಗಾದರೆ ಆ ನಿಯಮಗಳು ಯಾವುದು ಎಂಬುದನ್ನು ತಿಳಿಯೋಣ.

ಈ ಕುರಿತು ಟ್ವೀಟ್ ಮಾಡಿರುವ SBI ಒಂದು ವೇಳೆ ನೀವು ಕಳೆದ ಮೂರು ವರ್ಷಗಳಲ್ಲಿ ಇನ್ಕಮ್ ಟ್ಯಾಕ್ಸ್ ರಿಟರ್ನ್ ಪಾವತಿಸದೇ ಇದ್ದಲ್ಲಿ ಹಾಗೂ ನೀವು 20 ಲಕ್ಷಕ್ಕಿಂತ ಅಧಿಕ ಹಣ ವಿಥ್ ಡ್ರಾ ಮಾಡಿದರೆ ಇನ್ಕಮ್ ಟ್ಯಾಕ್ಸ್ ಕಾಯ್ದೆಯ ಸೆಕ್ಷನ್ 194N ಅಡಿ TDS ಕಡಿತ ಗೊಳಿಸಲಾಗುತ್ತದೆ.

ಈ ಟ್ಯಾಕ್ಸ್ ನಿಂದ ಒಂದು ವೇಳೆ ನೀವು ಪಾರಾಗಲು ಬಯಸುತಿದ್ದರೆ, ನೀವು ನಿಮ್ಮ PAN ಕಾರ್ಡ್ ಮಾಹಿತಿಯನ್ನು ಬ್ಯಾಂಕ್ ಗೆ ಸಲ್ಲಿಸಬೇಕು. ಜೊತೆಗೆ ಬ್ಯಾಂಕ್ ನಲ್ಲಿ ನಿಮ್ಮ ಇನ್ಕಮ್ ಟ್ಯಾಕ್ಸ್ ಸಲ್ಲಿಕೆಯ ರಸೀದಿಯನ್ನು ಸಲ್ಲಿಸಿ.



ಈಗಾಗಲೇ ಒಂದು ವೇಳೆ ನೀವು ನಿಮ್ಮ ಬ್ಯಾಂಕ್ ಗೆ ಪ್ಯಾನ್ ಕಾರ್ಡ್ ಮಾಹಿತಿ ಸಲ್ಲಿಸಿದ್ದರೆ, ಪುನಃ ನೀವು ಅದನ್ನು ಸಲ್ಲಿಸುವ ಅಗತ್ಯತೆ ಇಲ್ಲ. ಇದನ್ನು ಹೊರತುಪಡಿಸಿ, ನೀವು ನಿಮ್ಮ ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಗೆ ಸಂಬಂಧಿಸಿದ ಡಿಟೇಲ್ಸ್ ಅನ್ನು ಬ್ಯಾಂಕ್ ಗೆ ಸಲ್ಲಿಸಬೇಕು. ಇದರಿಂದ ನೀವು TDS ಪಾವತಿಸುವುದರಿಂದ ಪಾರಾಗಬಹುದು.

20 ಲಕ್ಷದವರೆಗೆ ಹಣವನ್ನು ಹಿಂಪಡೆಯಲು ನೀವು ನಿಮ್ಮ CIF ಖಾತೆಯಲ್ಲಿ ಪ್ಯಾನ್ ವಿವರಗಳನ್ನು ನೀಡಿದ್ದರೆ ಯಾವುದೇ ಶುಲ್ಕ ನೀಡುವ ಅಗತ್ಯವಿಲ್ಲ. ಒಂದು ವೇಳೆ ನೀವು CIF ಖಾತೆಯಿಂದ 20 ಲಕ್ಷದಿಂದ ಒಂದು ಕೋಟಿ ರೂಪಾಯಿಗೆ ಮೊತ್ತವನ್ನು ಹಿಂಪಡೆದಿದ್ದು ಮತ್ತು ಪ್ಯಾನ್ ಕಾರ್ಡ್ ವಿವರ ಸಲ್ಲಿಸಿದ್ದರೆ ನಿಮಗೆ ಕೇವಲ ಶೇ.2 ರಷ್ಟು ಮತ್ತು ಒಂದು ವೇಳೆ ಪ್ಯಾನ್ ವಿವರ ನೀಡದೆ ಸಂದರ್ಭದಲ್ಲಿ ಶೇ.20 ಟಿಡಿಎಸ್ ಕಡಿತಗೊಳಿಸಲಾಗುತ್ತದೆ.

ಒಂದು ವೇಳೆ ನೀವು ಒಂದು ಕೋಟಿ ರೂ.ಗಿಂತ ಹೆಚ್ಚನ ಮೌಲ್ಯ ಹಿಂಪಡೆದಿದ್ದು ಹಾಗೂ ಪ್ಯಾನ್ ಕಾರ್ದ್ಹ್ ಮಾಹಿತಿ ನೀಡಿದ್ದಾರೆ ಶೇ.5ರಷ್ಟು TDS ಕಡಿತಗೊಳ್ಳುತ್ತದೆ. ಪ್ಯಾನ್ ಕಾರ್ಡ್ ಮಾಹಿತಿ ನೀಡದೆ ಹೋದ ಸಂದರ್ಭದಲ್ಲಿ ಶೇ.20ರಷ್ಟು TDS ಕಡಿತಗೊಳಿಸಲಾಗುತ್ತದೆ.

error: Content is protected !!