SSLC PUC Degree ಪಾಸಾದವರಿಗೆ ಬ್ಯಾಂಕ್ ನಲ್ಲಿ ನೇರ ನೇಮಕಾತಿಗೆ ಅರ್ಜಿ ಅಹ್ವಾನ:

 

 

ಸಿದ್ಧಸಿರಿ ಸೌಹಾರ್ದ ಸಹಕಾರಿ ನಿಯಮಿತ, ವಿಜಯಪುರದ ಅಡಿಯಲ್ಲಿ ಕರ್ನಾಟಕ ರಾಜ್ಯಾದ್ಯಂತ ಪ್ರಾರಂಭವಾಗಲಿರುವ ನೂತನ ಶಾಖೆಗಳಲ್ಲಿ ಕಾರ್ಯನಿರ್ವಹಿಸಲು 135 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು,ಆಸಕ್ತ ಅಭ್ಯರ್ಥಿಗಳು ಅರ್ಜಿ ಜೊತೆಗೆ ತಮ್ಮ ಸ್ವ-ವಿವರವುಳ್ಳ ಸಂಪೂರ್ಣ ಮಾಹಿತಿ ಭಾವಚಿತ್ರದೊಂದಿಗೆ ಕೇವಲ ನಕಲು ಪ್ರತಿಗಳನ್ನು ಮಾತ್ರ ಲಗತ್ತಿಸಿನಿಗದಿಪಡಿಸಿದ ಕೊನೆಯ ದಿನಾಂಕ 11-11-2021 ರೊಳಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಲು ಸೂಚಿಸಲಾಗಿದೆ.

ಒಟ್ಟು ಹುದ್ದೆಗಳು: 135
ಉದ್ಯೋಗ ಸ್ಥಳ: ಕರ್ನಾಟಕ

ವಿದ್ಯಾರ್ಹತೆ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ 10th Pass, ITI, BSC Agri/ MSC Agri/ Chemistry, MBA Marketing, D.Pharma/ B. Pharma, B.Com/BCA/BBA, M.Com/MBA/MCA, CA/Auditorsವಿದ್ಯಾರ್ಹತೆಯನ್ನು ಹೊಂದಿರಬೇಕು.

ವಯೋಮಿತಿ:
ಈ ಮೇಲ್ಕಾಣಿಸಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 19 ವರ್ಷ ಪೂರೈಸಿರಬೇಕು ಗರಿಷ್ಠ 50 ವರ್ಷದೊಳಗಿರಬೇಕು.

 

 

ವೇತನಶ್ರೇಣಿ:
ಹುದ್ದೆಗಳಿಗೆ ಅನುಗುಣವಾಗಿ ವೇತನಶ್ರೇಣಿಯನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ
ಸಿಬ್ಬಂದಿ ತರಬೇತಿ ಅಧಿಕಾರಿ ಹುದ್ದೆಗಳಿಗೆ 25,000/-
ಆಂತರಿಕ ಲೆಕ್ಕ ಪರಿಶೋಧಕರು ಹುದ್ದೆಗಳಿಗೆ 21,000/-
ಮಾನವ ಸಂಪನ್ಮೂಲ ಅಧಿಕಾರಿಗಳು ಹುದ್ದೆಗಳಿಗೆ 21,000/-
ಸಾಲ ಹಾಗೂ ಮುಂಗಡ ವಿಭಾಗ ಮಹಾ ಪ್ರಬಂಧಕರು ಹುದ್ದೆಗಳಿಗೆ 25,000/-
ಮಾರಾಟ ಅಧಿಕಾರಿಗಳು ಹುದ್ದೆಗಳಿಗೆ 25,000/-
ಹಿರಿಯ ಅಧಿಕಾರಿಗಳು ಹುದ್ದೆಗಳಿಗೆ 18,000/-
ಕಿರಿಯ ಅಧಿಕಾರಿಗಳು ಹುದ್ದೆಗಳಿಗೆ 15,000/-
ಪ್ರಧಾನಮಂತ್ರಿ ಜನೌಷಧಿ ಕೇಂದ್ರ ವಿತರಕರು ಹುದ್ದೆಗಳಿಗೆ 18,000/-
ಸಿದ್ಧಸಿರಿ ಕೋಲ್ಡ್ ಸ್ಟೋರೇಜ್ ಹುದ್ದೆಗಳಿಗೆ 18,000/-
ಸಿದ್ಧಸಿರಿ ಕೃಷಿ ಸೇವಾ ಕೇಂದ್ರ ಹುದ್ದೆಗಳಿಗೆ 18,000/-
ಎಲೆಕ್ಟ್ರಿಷಿಯನ್ಸ್ ಹುದ್ದೆಗಳಿಗೆ 12,000/-
ವಾಹನ ಚಾಲಕರು / ಸಿಪಾಯಿ ಹುದ್ದೆಗಳಿಗೆ 12,000/-
ಭದ್ರತಾ ಸಿಬ್ಬಂದಿ ಹುದ್ದೆಗಳಿಗೆ 12,000/-
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.

ಅರ್ಜಿ ಶುಲ್ಕ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ರೂ 200/- ಡಿಡಿ ಶುಲ್ಕವನ್ನು ನಿಗದಿಪಡಿಸಲಾಗಿದೆ.
ಎಲೆಕ್ಟ್ರಿಷಿಯನ್ಸ್, ವಾಹನ ಚಾಲಕರು / ಸಿಪಾಯಿ ಮತ್ತು ಭದ್ರತಾ ಸಿಬ್ಬಂದಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಡಿಡಿ ಶುಲ್ಕ ಇರುವದಿಲ್ಲ.

 

 

ಆಯ್ಕೆ ವಿಧಾನ:
ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳನ್ನು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಕಳುಹಿಸಬೇಕಾದ ವಿಳಾಸ :
ಸಿದ್ಧಸಿರಿ ಸೌಹಾರ್ದ ಸಹಕಾರಿ ನಿಯಮಿತ, ವಿಜಯಪುರ ಆಡಳಿತ ಕಛೇರಿ,
ಸಿದ್ದೇಶ್ವರ ದೇವಾಲಯ ಆವರಣ, ಸಿದ್ದೇಶ್ವರ್ ಮುಖ್ಯ ರಸ್ತೆ,
ವಿಜಯಪುರ-586101

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 25 ಅಕ್ಟೋಬರ್ 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11 ನವೆಂಬರ್ 2021
ಶುಲ್ಕ ಪಾವತಿಸಲು ಕೊನೆಯ ದಿನಾಂಕ: 11 ನವೆಂಬರ್ 2021

Notification PDF 
error: Content is protected !!