ಕಿರಿಯ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ


ಸಿಂಡಿಕೇಟ್‌ ರೈತರ ಸೇವಾ ಸಹಕಾರ ಸಂಘ ನಿಯಮಿತದಲ್ಲಿ ಖಾಲಿ ಇರುವ ಕಿರಿಯ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಸಂಘವು ಪೂರೈಸುವ ಮೂಲ ಅರ್ಜಿಯನ್ನು ಭರ್ತಿ ಮಾಡಿ ಸ್ವಯಂ ಧೃಡೀಕೃತ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಹುದ್ದೆಯ ಸ್ಥಳ, ಇತರೆ ಮಾಹಿತಿ ಈ ಕೆಳಗಿನಂತಿದೆ.

ಹುದ್ದೆಯ ಹೆಸರು ಕಿರಿಯ ಸಹಾಯಕ
ಹುದ್ದೆಗಳ ಸಂಖ್ಯೆ: 8
ವೇತನ ಶ್ರೇಣಿ: ರೂ.21400 ರಿಂದ ರೂ.42,000 ಜತೆಗೆ ಇತರೆ ಭತ್ಯೆಗಳು.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 01-10-2021 ರ ಸಂಜೆ 5 ಗಂಟೆವರೆಗೆ.
ಹುದ್ದೆಯ ಕರ್ತವ್ಯ ಸ್ಥಳ: ಬೆಂಗಳೂರು ನಗರ ಜಿಲ್ಲೆ

ಹುದ್ದೆಗಳ ವರ್ಗಾವಾರು ಮೀಸಲಾತಿ
ಸಾಮಾನ್ಯ ವರ್ಗ – 4, ಸಾಮಾನ್ಯ ವರ್ಗ ಮಹಿಳಾ ಮೀಸಲು- 2, ಪರಿಶಿಷ್ಟ ಪಂಗಡ – 1, ಪ್ರವರ್ಗ 2 (ಎ) – 1 ಸೇರಿ ಒಟ್ಟು ಹುದ್ದೆಗಳು 8.

 

 

ವಿದ್ಯಾರ್ಹತೆ
ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿಎ / ಬಿಎಸ್ಸಿ / ಬಿಸಿಎ / ಬಿಕಾಂ / ಬಿಬಿಎಂ / ಬಿಬಿಎ ಯಾವುದೇ ಪದವಿಯಲ್ಲಿ ಕನಿಷ್ಠ ಶೇಕಡ.50 ಅಂಕಗಳೊಂದಿಗೆ ಪಾಸ್ ಆಗಿರಬೇಕು.

ವಯೋಮಿತಿ 
ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ ವಯೋಮಿತಿ ವರ್ಗಾವಾರು ಈ ಕೆಳಗಿನಂತಿದೆ.
ಸಾಮಾನ್ಯ ವರ್ಗ – 35 ವರ್ಷ.
ಹಿಂದುಳಿದ ವರ್ಗದ ಪ್ರವರ್ಗಗಳು – 38 ವರ್ಷ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 – 40 ವರ್ಷ.

ಅರ್ಜಿ ಸಲ್ಲಿಸುವ ವಿಧಾನ
ಸಿಂಡಿಕೇಟ್‌ ರೈತರ ಸೇವಾ ಸಹಕಾರ ಸಂಘ ನಿಯಮಿತ ಕೇಂದ್ರ ಕಚೇರಿಯಲ್ಲಿ ಕೆಲಸದ ವೇಳೆಯಲ್ಲಿ ಅರ್ಜಿಯನ್ನು ಪಡೆಯಬಹುದು. ರೂ.1000 ಕ್ಕೆ ಡಿಡಿಯನ್ನು ‘ಸಿರೈ.ಸೇ.ಸ.ಸಂಘ ನಿಯಮಿತ, ಅತ್ತಿಬೆಲೆ, ಇವರ ಹೆಸರಿನಲ್ಲಿ ನೀಡಿ ಅರ್ಜಿಯನ್ನು ಪಡೆಯಬೇಕು.

ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ವಿಳಾಸ – ಸದಸ್ಯ ಕಾರ್ಯದರ್ಶಿ, ಸಿಬ್ಬಂದಿ ನೇಮಕಾತಿ ಸಮಿತಿ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಸಿಂಡಿಕೇಟ್ ರೈತರ ಸೇವಾ ಸಹಕಾರ ಸಂಘ ನಿಯಮಿತ, ಅತ್ತಿಬೆಲೆ – 562107 ‘ ಕಳುಹಿಸಬೇಕು.

error: Content is protected !!