ಕೇಂದ್ರ ಲೋಕಸೇವಾ ಆಯೋಗದಲ್ಲಿ ಖಾಲಿ ಇರುವ 241 ಇಂಡಿಯನ್ ಸರ್ವಿಸ್ ಎಕ್ಸಾಮಿನೇಷನ್(ಇಎಸ್ಇ ), ಇಂಡಿಯನ್ ಎಕನಾಮಿಕ್ ಸರ್ವಿಸ್( ಐಇಎಸ್) , ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಸರ್ವಿಸ್( ಐಎಸ್ಎಸ್) ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಪ್ರಕ್ರಿಯೆಯು ಏಪ್ರಿಲ್ 07, 2021 ಪ್ರಾರಂಭಗೊಂಡು ಮತ್ತು ಏಪ್ರಿಲ್ 27, 2021ರಂದು ಕೊನೆಗೊಳ್ಳುತ್ತದೆ.
ಹುದ್ದೆಗಳ ವಿವರ:
ಇಎಸ್ಇ- 215 ಹುದ್ದೆಗಳು
ಐಇಎಸ್- 15 ಹುದ್ದೆಗಳು
ಐಎಸ್ಎಸ್ – 11 ಹುದ್ದೆಗಳು
ಒಟ್ಟು – 241 ಹುದ್ದೆಗಳು
ಆಯ್ಕೆ ವಿಧಾನ:
ಹುದ್ದೆಗೆ ಅಭ್ಯರ್ಥಿಗಳನ್ನುಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ವಿದ್ಯಾರ್ಹತೆ:
ಹುದ್ದೆಗೆ ಅನುಗುಣವಾಗಿ Diploma, Degree, PG, BE/B.Tech ಮತ್ತು M.Sc ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಶುಲ್ಕ:
ಹಿಂದುಳಿದ ವರ್ಗದ ಮತ್ತು ಸಾಮಾನ್ಯ ಅಭ್ಯರ್ಥಿಗಳು – 200/- ರೂ ಗಳ ಅರ್ಜಿ ಶುಲ್ಕವನ್ನು ತುಂಬಬೇಕು. ಮತ್ತು
ಪ.ಜಾ ಮತ್ತು ಪ.ಪಂ ದ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ರೀತಿಯಾದ ಅರ್ಜಿ ಶುಲ್ಕವಿರುದಿಲ್ಲ.
ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ-21 ವರ್ಷಗಳನ್ನು ಪೂರೈಸಿರಬೇಕು, ಮತ್ತು ಗರಿಷ್ಠ-30 ವರ್ಷಗಳ ವಯೋಮಿತಿಯನ್ನು ಮೀರಿರಬಾರದು.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 7 ಎಪ್ರಿಲ್ 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27 ಎಪ್ರಿಲ್ 2021
Website
Notification – 1
Notification – 2
UPSC Recruitment 2021 notification Apply Online for 241 Engineering Service, IES Posts