ಮಹಿಳೆಯರ ಖಾತೆಗೆ ಉಚಿತ ರೂ.800 ಪಿಂಚಣಿ ಸೌಲಭ್ಯ । ಮನಸ್ವಿನಿ ಯೋಜನೆ । Manaswini Scheme

ಮಹಿಳೆಯರ ಖಾತೆಗೆ ಪ್ರತಿ ತಿಂಗಳು ರೂ.800 ಪಿಂಚಣಿ ಸೌಲಭ್ಯ 

ಮನಸ್ವಿನಿ ಯೋಜನೆ । Manaswini Scheme | ರಾಜ್ಯದಲ್ಲಿನ ಬಡತನ ರೇಖೆಗಿಂತ ಕೆಳಗಿರುವ 40 ರಿಂದ 64 ವರ್ಷದೊಳಗಿರುವ ಅವಿವಾಹಿತ ಹಾಗೂ ವಿಚ್ಚೇದಿತ ಮಹಿಳೆಯರಿಗೆ ಆರ್ಥಿಕ ಸೌಲಭ್ಯವನ್ನು ಒದಗಿಸಿ ಸಮಾಜದ ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಸರ್ಕಾರದ ಆದೇಶ ಸಂಖ್ಯೆ:ಆರ್ಡಿ 95 ಡಿಎಸ್ಪಿ 2013 ದಿನಾಂಕ:01/08/2013 ರನ್ವಯ ಜಾರಿಗೆ ತರಲಾಗಿದೆ. (Govt Scheme Karnataka 2024)

ಅರ್ಹತಾ ಮಾನದಂಡ:
1.ಫಲಾನುಭವಿಯು 40 ರಿಂದ 64 ವರ್ಷದೊಳಗಿರಬೇಕು.
2.ವಾರ್ಷಿಕ ಆದಾಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ರೂ.32,000/- ಕ್ಕಿಂತ ಕಡಿಮೆ ಇರಬೇಕು.
3.ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ, ನಿರ್ಗತಿಕ ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ದೇವದಾಸಿ ವೇತನ ಅಥವಾ ಅಂಗವಿಕಲರ ವೇತನ ಅಥವಾ ಯಾವುದೇ ರೀತಿಯ ಮಾಸಾಶನವನ್ನು ಸಾರ್ವಜನಿಕ ಅಥವಾ ಖಾಸಗಿ ಮೂಲಗಳಿಂದ ಪಡೆಯುತ್ತಿರುವ ವ್ಯಕ್ತಿಗಳು ಈ ಯೋಜನೆಯಡಿಯಲ್ಲಿ ಮಾಸಾಶನ ಪಡೆಯಲು ಅರ್ಹರಾಗಿರುವುದಿಲ್ಲ.

ಈ ಯೋಜನೆಗೆ ಸಲ್ಲಿಸಬೇಕಾದ ದಾಖಲೆಗಳು:
1.ಬಿಪಿಲ್‌ ಪಡಿತರ ಚೀಟಿ, ಇಲ್ಲದಿದ್ದಲ್ಲಿ ಆದಾಯ ಪ್ರಮಾಣ ಪತ್ರ
2.ಚುನಾವಣಾ ಗುರುತಿನ ಚೀಟಿ ಅಥವಾ ವಿಳಾಸದ ಬಗ್ಗೆ ದೃಢೀಕರಣ ದಾಖಲೆ/ವಯಸ್ಸಿನ ಬಗ್ಗೆ ದೃಢೀಕರಣ ಪತ್ರ.
3.ಅವಿವಾಹಿತರು ತಮಗೆ ವಿವಾಹ ಆಗಿಲ್ಲದಿರುವ ಬಗ್ಗೆ ಸ್ವಯಂ ಘೋಷಿತ ಪ್ರಮಾಣ ಪತ್ರ
4.ವಿವಾಹ ವಿಚ್ಚೇದಿತರು ವಿಚ್ಚೇದನದ ಸ್ವಯಂ ಘೋಷಿತ ಪ್ರಮಾಣ ಪತ್ರ
5.ಬ್ಯಾಂಕ್‌ ಮತ್ತು ಅಂಚೆ ಖಾತೆ ವಿವರಗಳು
6.ಆಧಾರ್‌ ಕಾರ್ಡ್

ಪಿಂಚಣಿ ಮೊತ್ತ: 800
ಅರ್ಜಿದಾರರು ವಾಸಸ್ಥಳ ವ್ಯಾಪ್ತಿಯ ಅಟಲ್‌ ಜೀ ಜನಸ್ನೇಹಿ ಕೇಂದ್ರದ ಮೂಲಕ ಅರ್ಜಿ ಸಲ್ಲಿಸತಕ್ಕದ್ದು.

ಜಿಲ್ಲಾವಾರು ಉದ್ಯೋಗಗಳು 

ಬಾಗಲಕೋಟೆವಿಜಯಪುರ
ಬಳ್ಳಾರಿಬೆಳಗಾವಿ
ಬೆಂಗಳೂರುಬೀದರ್
ಬಿಜಾಪುರಚಾಮರಾಜನಗರ
ಚಿಕ್ಕಬಳ್ಳಾಪುರಚಿಕ್ಕಮಗಳೂರು
ಚಿತ್ರದುರ್ಗದಕ್ಷಿಣ ಕನ್ನಡ
ದಾವಣಗೆರೆಧಾರವಾಡ
ಗದಗಕಲಬುರಗಿ 
ಹಾಸನಹಾವೇರಿ
ಹುಬ್ಬಳ್ಳಿಕಲಬುರಗಿ
ಕಾರವಾರಕೊಡಗು
ಕೋಲಾರಕೊಪ್ಪಳ
ಮಂಡ್ಯಮಂಗಳೂರು
ಮೈಸೂರುರಾಯಚೂರು
ರಾಮನಗರಶಿವಮೊಗ್ಗ
ತುಮಕೂರುಉಡುಪಿ
ಉತ್ತರ ಕನ್ನಡಯಾದಗಿರಿ

error: Content is protected !!