SSBJ Recruitment 2022: ಸೈನಿಕ್ ಸ್ಕೂಲ್ ಬಿಜಾಪುರ ದಲ್ಲಿ ಖಾಲಿ ಇರುವ 05 ಸಿಬ್ಬಂದಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.
ಇಲಾಖೆ ಹೆಸರು: ಸೈನಿಕ್ ಸ್ಕೂಲ್ ಬಿಜಾಪುರ
ಹುದ್ದೆಗಳ ಹೆಸರು: ವಿವಿಧ ಹುದ್ದೆಗಳು ( ಕೆಳಗೆ ವಿವರಿಸಲಾಗಿದೆ)
ಒಟ್ಟು ಹುದ್ದೆಗಳು: 05
ಅರ್ಜಿ ಸಲ್ಲಿಸುವ ಬಗೆ: ಆಫ್ ಲೈನ್
ಹುದ್ದೆಗಳ ವಿವರ:
ಲೋವರ್ ಡಿವಿಷನ್ ಕ್ಲರ್ಕ್ – 01
ಬ್ಯಾಂಡ್ ಮಾಸ್ಟರ್ – 01
ಪಿಇ ಎಂ /ಪಿಟಿಐ – ಕಮ್ ಮೇಟ್ರೊನ್ – 01
ಕೌಂಸೆಲೊರ್ – 01
ಟಿಜಿಐ- 01
ವಿದ್ಯಾರ್ಹತೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಎಸೆಸೆಲ್ಸಿ / ಪಿಯುಸಿ / ಡಿಪ್ಲೋಮ / ಬಿ.ಎಡ್ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆ/ವಿಶ್ವವಿದ್ಯಾಲಯದಿಂದ ಪಡೆದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
– ವೃತ್ತಿಯಲ್ಲಿ ಅನುಭವ ಹೊಂದಿರುವವರಿಗೆ ಮೊದಲ ಆದ್ಯತೆ ನೀಡಲಾಗುವುದು.
ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 50 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು.
ವೇತನಶ್ರೇಣಿ:
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗನುಗುಣವಾಗಿ ಮಾಸಿಕ ರೂ.44,900- 1,42,400/- ರೂಗಳ ವೇತನವನ್ನು ನಿಗದಿಪಡಿಸಲಾಗಿದೆ.
ಅರ್ಜಿ ಶುಲ್ಕ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 500/-ರೂ ಅರ್ಜಿ ಶುಲ್ಕವನ್ನು ಪಾವತಿಸಬೇಕಿರುತ್ತದೆ.
ಆಯ್ಕೆ ವಿಧಾನ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಅರ್ಜಿಯನ್ನು ಕಿರುಪಟ್ಟಿ ಮಾಡಲಾಗುವುದು ತದನಂತರ ಲಿಖಿತ ಪರೀಕ್ಷೆ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿಯನ್ನು ಸಲ್ಲಿಸುವ ವಿಳಾಸ:
ಪ್ರಿನ್ಸಿಪಲ್, ಸೈನಿಕ ಶಾಲೆ ವಿಜಯಪುರ – 586108
ಅಭ್ಯರ್ಥಿಗಳು 21 ದಿನಗಳೊಳಗಾಗಿ ಅಂಚೆಯ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 27-08-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16-09-2022
ಸೈನಿಕ್ ಸ್ಕೂಲ್ ಬಿಜಾಪುರ ನೇಮಕಾತಿ 2020: 06 ಲೋವರ್ ಡಿವಿಷನ್ ಕ್ಲರ್ಕ್, ನರ್ಸಿಂಗ್ ಸಿಸ್ಟರ್ ಖಾಲಿ ಹುದ್ದೆಗಳಿಗೆ ವಾಕ್-ಇನ್-ಇಂಟರ್ವ್ಯೂ. ಸೈನಿಕ ಶಾಲೆ ಬಿಜಾಪುರ ಅಧಿಕೃತ ಅಧಿಸೂಚನೆ ಫೆಬ್ರವರಿ-2020 ರ ಮೂಲಕ ಲೋವರ್ ಡಿವಿಷನ್ ಕ್ಲರ್ಕ್, ನರ್ಸಿಂಗ್ ಸಿಸ್ಟರ್ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳನ್ನು ವಾಕ್-ಇನ್-ಇಂಟರ್‌ವ್ಯೂಗೆ ಹಾಜರಾಗಲು ಆಹ್ವಾನಿಸಿದೆ. ಬಿಜಾಪುರ – ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಈ ಸೈನಿಕ್ ಸ್ಕೂಲ್ ಬಿಜಾಪುರ ಲೋವರ್ ಡಿವಿಷನ್ ಕ್ಲರ್ಕ್, ನರ್ಸಿಂಗ್ ಸಿಸ್ಟರ್ ಉದ್ಯೋಗಗಳಿಗಾಗಿ ವಾಕ್-ಇಂಟರ್‌ವ್ಯೂ 24ನೇ ಫೆಬ್ರವರಿ 2020 ರಂದು ನಡೆಯಲಿದೆ.
ಪ್ರಮುಖ ಲಿಂಕುಗಳು |
ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
ನೋಟಿಫಿಕೇಶನ್ | ಇಲ್ಲಿ ಕ್ಲಿಕ್ ಮಾಡಿ |