ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ 2023 – KPSC Recruitment 2023

ಹೊಸ ನೇಮಕಾತಿ ಅಧಿಸೂಚನೆ 2023

KPSC Recruitment 2023 – ಕರ್ನಾಟಕ ಲೋಕಸೇವಾ ಆಯೋಗದಿಂದ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆಯ ಪ್ರಕಟವಾಗಿದೆ. ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ ವಯೋಮಿತಿ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು. ಈ ಲೇಖನದ ಕೆಳಬಾಗದಲ್ಲಿ ಸೂಚಿಸಿರುವ ವಿದ್ಯಾರ್ಹತೆ ವಯೋಮಿತಿ ಶೈಕ್ಷಣಿಕ ಅರ್ಹತೆ ಹಾಗೂ ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಅಥವಾ ಕೆಳಗಡೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಲಿಂಕ್ ಹಾಗೂ ಅಧಿಕೃತ ವೆಬ್ಸೈಟ್ ಲಿಂಕ್ ಮೂಲಕ ನೀವು ಇನ್ನಷ್ಟು ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ

ನಮ್ಮ ಟೆಲಿಗ್ರಾಮ್ ಚಾನೆಲ್ ಜಾಯಿನ್ ಆಗಿ ದಿನನಿತ್ಯ ಹೊಸ ಉದ್ಯೋಗ ಮಾಹಿತಿಗಾಗಿ 

ನಾವು ಒದಗಿಸುವ ಎಲ್ಲ ಮಾಹಿತಿಗಳು ನಿಮಗೆ ಇಷ್ಟವಾಗುತ್ತಿದ್ದರು ತಪ್ಪದೇ ನಮ್ಮ ಇತರೆ ಗ್ರೂಪ್ ಗಳಿಗೆ (ಟೆಲಿಗ್ರಾಮ್ ಗ್ರೂಪ್ ಹಾಗೂ ಫೇಸ್ಬುಕ್ ಗ್ರೂಪ್ ) ತಾವು ಜಾಯಿನ್ ಆಗಿ. ಪ್ರತಿದಿನ ನಾವು ಹಾಕುವ ಉದ್ಯೋಗ ಮಾಹಿತಿ ನಿಮಗೆ ಬಂದು ನೇರವಾಗಿ ತಲುಪುತ್ತದೆ. ನಾವು ಹಾಕಿರುವ ಉದ್ಯೋಗ ಮಾಹಿತಿ ಕೊನೆಯ ಭಾಗದಲ್ಲಿ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ ಹಾಗೂ ಆರಂಭ ದಿನಾಂಕವನ್ನು ಸ್ಪಷ್ಟವಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ವಿಶೇಷ ಸೂಚನೆ :- ನಾವು ಒದಗಿಸುವ ಎಲ್ಲಾ ಉದ್ಯೋಗ ಮಾಹಿತಿ ಸಂಪೂರ್ಣ ಉಚಿತವಾಗಿದ್ದು ಯಾವುದೇ ಅಭ್ಯರ್ಥಿಗಳಿಂದ ಹಣವನ್ನು ತೆಗೆದುಕೊಂಡಿರುವುದಿಲ್ಲ. ಒಂದು ವೇಳೆ ಉದ್ಯೋಗ ಬಿಂದು ಹೆಸರಿನಲ್ಲಿ ಯಾರಾದರೂ ನಿಮಗೆ ಹಣ ಕೇಳಿದ್ದಲ್ಲಿ ಕೂಡಲೇ ತಾವು ನಮ್ಮ ಇಮೇಲ್ ವಿಳಾಸಕ್ಕೆ ಸಂದೇಶ ಕಳುಹಿಸಿ ನಮ್ಮ ಗಮನಕ್ಕೆ ತರತಕ್ಕದ್ದು.

ಕರ್ನಾಟಕ ಲೋಕಸೇವಾ ಆಯೋಗದಿಂದ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆಯ ಪ್ರಕಟವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.

ಇಲಾಖೆ ಹೆಸರು: ಕರ್ನಾಟಕ ಲೋಕಸೇವಾ ಆಯೋಗ – KPSC 
ಹುದ್ದೆಗಳ ಹೆಸರು: ವಿವಿಧ ಹುದ್ದೆಗಳು 
ಒಟ್ಟು ಹುದ್ದೆಗಳು  04
ಅರ್ಜಿ ಸಲ್ಲಿಸುವ ಬಗೆ  ಆನ್ಲೈನ್ 
ಹುದ್ದೆಗಳ ವಿವರ 
ಜೂನಿಯರ್ ಪ್ರೋಗ್ರಾಮರ್ 1
ಡೇಟಾ ಬೇಸ್ ಅಡ್ಮಿನ್ 1
ನೆಟ್‌ವರ್ಕ್ ಅಡ್ಮಿನ್ 1
ಹಾರ್ಡ್‌ವೇರ್ ತಂತ್ರಜ್ಞ 1 

ವಿದ್ಯಾರ್ಹತೆ:
ಈ ನೇಮಕಾತಿ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂಗೀಕೃತ ಸಂಸ್ಥೆ ಅಥವಾ ಬೋರ್ಡ್ ನಿಂದ ಎಂಜಿನಿಯರಿಂಗ್ ಪದವಿ ಮುಗಿಸಿರಬೇಕು.

ನಮ್ಮ ಟೆಲಿಗ್ರಾಮ್ ಚಾನೆಲ್ ಜಾಯಿನ್ ಆಗಿ ದಿನನಿತ್ಯ ಹೊಸ ಉದ್ಯೋಗ ಮಾಹಿತಿಗಾಗಿ 

ನಿಬಂಧನೆಗಳು/ ಷರತ್ತುಗಳು

1. ಸೇವೆಯನ್ನು 03 ವರ್ಷಗಳ ಅವಧಿಗೆ ನೇಮಕ ಮಾಡಲಾಗುತ್ತಿದ್ದು, 0! ವರ್ಷದ ನಂತರ ಅವರ ಕಾರ್ಯನಿರ್ವಹಣೆಯ ಆಧಾರದ ಮೇಲೆ ನಂತರದ ಅವಧಿಯ ಬಗ್ಗೆ ನಿರ್ಧರಿಸಲಾಗುವುದು.

2  ಅಭ್ಯರ್ಥಿಗಳನ್ನು ನೇಮಕಮಾಡಿಕೊಂಡ ನಂತರ ಪ್ರಥಮ 03 ತಿಂಗಳ ಅವಧಿಯನ್ನು ಪರೀಕ್ಷಾರ್ಥ ಅವದಿಯೆಂದು ಪರಿಗಣಿಸಲಾಗುವುದು. ತದನಂತರ ಅವರ ಕಾರ್ಯನಿರ್ವಹಣೆಯನ್ನು ಪುನರ್‌ ವಿಮರ್ಶಿಸಲಾಗುವುದು.

3… ಸದರಿಯವರು ಕಛೇರಿಯ ಅವಧಿಯಲ್ಲಿ ಕರ್ತವ್ಯಕ್ಕೆ ಹಾಜರಿರಬೇಕು(ಆಯೋಗದ ಕಾರ್ಯ ವಿಧಾನವು ಇತರೆ ಇಲಾಖೆಗಳಿಗಿಂತ ಭಿನ್ನವಾಗಿರುವುದರಿಂದ ಕಛೇರಿ ವೇಳೆಯ ಮುನ್ನ ಮತ್ತು ಕಛೇರಿ ವೇಳೆಯ ನಂತರ ಹಾಗೂ ಸಾರ್ವತ್ರಿಕ ರಜಾ ದಿನಗಳನ್ನೊಳಗೊಂಡಂತೆ ಭಾನುವಾರ ಸಹ ಕಾರ್ಯನಿರ್ವಹಿಸಲು ಸಿದ್ಧರಿರಬೇಕು).

4… ಆಯೋಗದ ಕಾರ್ಯವೈಖರಿಯು ಅತ್ಯಂತ ಗೋಪ್ಯ ಮತ್ತು ಸೂಕ್ಷ್ಮವಾಗಿರುವುದರಿಂದ ಆಯೋಗದ ಕಾರ್ಯವೈಖರಿಯ ಬಗ್ಗೆ ಕಛೇರಿಯ ಹೊರಗಡೆ ಎಲ್ಲಿಯೂ ಮಾಹಿತಿಯನ್ನು ನೀಡತಕ್ಕದ್ದಲ್ಲ.

5, ಆಯೋಗಕ್ಕೆ ನಿಯೋಜನೆಗೊಂಡಲ್ಲಿ ಕಡ್ಡಾಯವಾಗಿ ಆಯೋಗದ ಕಛೇರಿಯಲ್ಲಿ ಕಾರ್ಯನಿರ್ವಹಿಸಲು ಸಿದ್ಧರಿರಬೇಕು. ಕಾರ್ಯನಿರ್ವಹಿಸಲು ಅವಕಾಶವಿರುವುದಿಲ್ಲ.

6… ಆಯೋಗಕ್ಕೆ ನಿಯೋಜನೆಗೊಂಡಲ್ಲಿ ಆಯೋಗದ ಕರ್ತವ್ಯದ ವೇಳೆ, ಕಛೇರಿ ವೇಳೆಯ ಮುನ್ನ, ಕಛೇರಿ ವೇಳೆಯ ನಂತರ ಅಥವಾ ರಜಾ ದಿನಗಳಂದು ಬೇರೆ ಸಂಸ್ಥೆಯೊಂದಿಗೆ ನಿರ್ವಹಿಸಲು ಅವಕಾಶವಿರುವುದಿಲ್ಲ.

7. ಆಯೋಗಕ್ಕೆ ನಿಯೋಜನೆಗೊಳ್ಳುವ ಸಿಬ್ಬಂದಿಯು ಆಯೋಗದ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯನ್ನು ಎಲ್ಲಿಯೂ ನೀಡದ ಬಗ್ಗೆ ಸಹಿ ಮಾಡಿಕೊಡಬೇಕು.

8. ನಿಯೋಜನೆಗೊಂಡ ನೌಕಕರು ತಿಂಗಳಿಗೆ ಒಂದು ದಿನದ ಸಾಂದರ್ಭಿಕ ರಜೆ ಪಡೆಯಲು ಅರ್ಹರಿರುತ್ತಾರೆ.

9. ಸದರಿ ನೇಮಕಾತಿಯು ಸಂಪೂರ್ಣವಾಗಿ 000/7890 ಮಾದರಿಯಾಗಿದ್ದು, ಇವರ ನೇಮಕಾತಿಯು ಸಂಪೂರ್ಣವಾಗಿ ತಾತ್ಕಾಲಿಕವಾಗಿದ್ದು. ಇತರೆ ಯಾವುದೇ ಸೌಲಭ್ಯಗಳನ್ನು ಒಳಗೊಂಡಿರುವುದಿಲ್ಲ.

10. ಸದರಿ ನೇಮಕಾತಿಗೆ ಸಂಬಂಧಿಸಿದಂತೆ ಆಯೋಗವು ಸರ್ಕಾರದ ಇತರೆ ಇಲಾಖೆಗಳಲ್ಲಿ ಸಮಾನಾಂತರ ಹುದ್ದೆಗಳಿಗೆ ನಿಗದಿಪಡಿಸಿರುವಷ್ಟು ಕ್ರೋಡೀಕೃತ ಮೊತ್ತವನ್ನು ನೀಡಲಾಗುವುದು. ಉಳಿದಂತೆ ಯಾವುದೇ ಸೌಲಭ್ಯವು ಒಳಗೊಂಡಿರುವುದಿಲ್ಲ ಹಾಗೂ ಸದರಿ ಮೊತ್ತದಲ್ಲಿ ನಿಯಮಾನುಸಾರ ಆದಾಯ ತೆರಿಗೆಯನ್ನು ಕಟಾವು ಮಾಡಲಾಗುವುದು.

11  ನಿಯೋಜನೆಗೊಂಡ ನೌಕರರು ಯಾವುದೇ ಕಾರಣಕ್ಕೂ ಅಭ್ಯರ್ಥಿಗಳೊಂದಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಸಂಪರ್ಕವನ್ನು ಹೊಂದತಕ್ಕದ್ದಲ್ಲ.

12. ಒಮ್ಮೆ ಆಯ್ಕೆಯಾದ ನ೦ತರ ಕಡ್ಡಾಯವಾಗಿ ಒಂದು ವರ್ಷ ಸೇವೆ ಸಲ್ಲಿಸಲು ಬದ್ಧರಿರಬೇಕು. ಒಂದು ವೇಳೆ ಅನಿವಾರ್ಯ ಸಂದರ್ಭಗಳಲ್ಲಿ ಕೆಲಸ ಬಿಡಲು ನಿರ್ಧರಿಸಿದಲ್ಲಿ ಈ ಬಗ್ಗೆ ಆಯೋಗಕ್ಕೆ 03 ತಿಂಗಳ ಮುಂಚೆ ಲಿಖಿತ ರೂಪದಲ್ಲಿ ಮಾಹಿತಿಯನ್ನು ನೀಡತಕ್ಕದ್ದು.

13 ಸೇವೆಯನ್ನು 03 ವರ್ಷಗಳ ಅವಧಿಗೆ ನೇಮಕ ಮಾಡಲಾಗುತ್ತಿದ್ದು, 01 ವರ್ಷದ ನಂತರ ಅವರ ಕಾರ್ಯನಿರ್ವಹಣೆಯ ಆಧಾರದ ಮೇಲೆ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದ್ದರೂ ಸದರಿಯವರ ಕಾರ್ಯವೈಖರಿಯು ಸಮರ್ಪಕವಾಗಿರದ ಬಗ್ಗೆ ಮೇಲಾಧಿಕಾರಿಗಳಿಗೆ ಮನವರಿಕೆಯಾದಲ್ಲಿ ಅಥವಾ ಅವರು ಆಯೋಗದ ಕಾರ್ಯವೈಖರಿಯ ತಕ್ಕದ್ದಲ್ಲದ ರೀತಿಯಲ್ಲಿ ನಡೆದುಕೊಂಡಲ್ಲಿ ಯಾವುದೇ ನೋಟೀಸ್‌ ನೀಡದೇ ಯಾವುದೇ ಸಂದರ್ಭದಲ್ಲಿ ಅವರನ್ನು ಕೆಲಸದಿಂದ ತೆಗೆದು ಹಾಕುವ ಅಧಿಕಾರ ಕಾರ್ಯದರ್ಶಿಯವರಿಗೆ ಇರುತ್ತದೆ.

14. ಆಯೋಗದ ಪ್ರಕಾರ್ಯಗಳು ಅತ್ಯಂತ ಗೋಪ್ಯವಾಗಿರುವುದರಿಂದ ಯಾವುದಾದರೂ ಮಾಹಿತಿ ಹಾಗೂ ದಾಖಲೆಗಳನ್ನು ಸೋರಿಕೆ ಮಾಡಿದ ಸಂದರ್ಭದಲ್ಲಿ ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು.

15. ಕಾಲಕಾಲಕ್ಕೆ ಅನುಗುಣವಾಗಿ ಅಗತ್ಯತೆಯನುಸಾರ ಯಾವುದಾದರೂ ಷರತ್ತು ಮತ್ತು ನಿಬಂಧನೆಗಳನ್ನು ವಿಧಿಸಬೇಕಾದಲ್ಲಿ ಅದನ್ನು ತದನಂತರ ತಿಳಿಸಲಾಗುವುದು.

ಆದ್ದರಿಂದ ಮೇಲ್ಕಂಡ ಅಂಶಗಳ ಹಿನ್ನೆಲೆಯಲ್ಲಿ ನಿಗದಿತ ವಿದ್ಯಾರ್ಹತೆ ಹಾಗೂ ಅಗತ್ಯ ಸೇವಾನುಭವ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸುತ್ತಿದ್ದು, ಆಸಕ್ತರು ಅರ್ಜಿಯೊಂದಿಗೆ ತಮ್ಮ ಹೆಸರು, ವಿಳಾಸ, ಜನ್ಮ ದಿನಾಂಕ, ವಿದ್ಯಾರ್ಹತೆ, ಸೇವಾ ವಿವರಗಳನ್ನೊಳಗೊಂಡ ಸಂಪೂರ್ಣ ಮಾಹಿತಿ ಹಾಗೂ ಅಗತ್ಯ ದಾಖಲೆಗಳನ್ನು ಲಗತ್ತಿಸಿ

 

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ  24 ಜುಲೈ 2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  31 ಜುಲೈ 2023
   
ಪ್ರಮುಖ ಲಿಂಕುಗಳು 
ನೋಟಿಫಿಕೇಶನ್  ಇಲ್ಲಿ ಕ್ಲಿಕ್ ಮಾಡಿ 
ಅರ್ಜಿ ಸಲ್ಲಿಸುವ ಲಿಂಕ್  ಇಲ್ಲಿ ಕ್ಲಿಕ್ ಮಾಡಿ 
ಟೆಲಿಗ್ರಾಮ್ ಗ್ರೂಪ್  ಇಲ್ಲಿ ಕ್ಲಿಕ್ ಮಾಡಿ 
ಯೌಟ್ಯೂಬ್ ಚಾನೆಲ್  ಇಲ್ಲಿ ಕ್ಲಿಕ್ ಮಾಡಿ 

ಜಿಲ್ಲಾವಾರು ಉದ್ಯೋಗಗಳು 

ಬಾಗಲಕೋಟೆ ವಿಜಯಪುರ
ಬಳ್ಳಾರಿ ಬೆಳಗಾವಿ
ಬೆಂಗಳೂರು ಬೀದರ್
ಬಿಜಾಪುರ ಚಾಮರಾಜನಗರ
ಚಿಕ್ಕಬಳ್ಳಾಪುರ ಚಿಕ್ಕಮಗಳೂರು
ಚಿತ್ರದುರ್ಗ ದಕ್ಷಿಣ ಕನ್ನಡ
ದಾವಣಗೆರೆ ಧಾರವಾಡ
ಗದಗ ಕಲಬುರಗಿ 
ಹಾಸನ ಹಾವೇರಿ
ಹುಬ್ಬಳ್ಳಿ ಕಲಬುರಗಿ
ಕಾರವಾರ ಕೊಡಗು
ಕೋಲಾರ ಕೊಪ್ಪಳ
ಮಂಡ್ಯ ಮಂಗಳೂರು
ಮೈಸೂರು ರಾಯಚೂರು
ರಾಮನಗರ ಶಿವಮೊಗ್ಗ
ತುಮಕೂರು ಉಡುಪಿ
ಉತ್ತರ ಕನ್ನಡ ಯಾದಗಿರಿ
error: Content is protected !!