ಭೂಮಿ ಖರೀದಿಸಲು 25 ಲಕ್ಷ ರೂ ಸಬ್ಸಿಡಿ ಮತ್ತು ಸಾಲಸೌಲಭ್ಯ – Land Purchase Scheme 2023

ಭೂಮಿ ಖರೀದಿಸಲು ಸರ್ಕಾರದಿಂದ 25 ಲಕ್ಷ ರೂ. ಸಬ್ಸಿಡಿ ಮತ್ತು ಸಾಲಸೌಲಭ್ಯ 

Land Purchase Scheme 2023 Karnataka Apply Online  – ನಮಸ್ಕಾರ ಓದುಗರೇ.., ತಾವು ಕರ್ನಾಟಕ ಸರ್ಕಾರದ ಸಹಾಯಧನದ ಮೂಲಕ ಜಮೀನ ಖರೀದಿ ಮಾಡಬೇಕಾ? ಕರ್ನಾಟಕ ಸರ್ಕಾರದ 25 ಲಕ್ಷ ರೂ., 20 ಲಕ್ಷ ರೂ. ಸಬ್ಸಿಡಿ ಮತ್ತು ಸಾಲಸೌಲಭ್ಯ ಪಡೆಯಬೇಕೇ? ಭೂ ಒಡೆತನ ಯೋಜನೆ (Land Purchase Scheme 2023) ಯ ಮಾಹಿತಿಯನ್ನು ನಮ್ಮ ಲೇಖನದಲ್ಲಿ ನೀಡಲಾಗಿದೆ. ಈ ಯೋಜನೆಯ ಬಗ್ಗೆ ಮಾಹಿತಿ ತಿಳಿದುಕೊಂಡು ಇದರ ಪ್ರಯೋಜನ ಪಡೆದುಕೊಳ್ಳಿ.

ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ತಮ್ಮ ವಾಸ ಸ್ಥಳದಿಂದ 10 ಕಿ.ಮೀ ವ್ಯಾಪ್ತಿಯೊಳಗೆ ಕೃಷಿಯೋಗ್ಯವಾದ 02 ಎಕರೆ ಖುಷ್ಕ ಅಥವಾ 01 ಎಕರೆ ತರಿ ಜಮೀನು ಖರೀದಿಸಲು ಸಹಾಯಧನ ಮತ್ತು ಸಾಲ ನೀಡಲಾಗುತ್ತದೆ. ಭೂ ಒಡೆತನ ಯೋಜನೆಯಡಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ರಾಮನಗರ ಜಿಲ್ಲೆಗಳಿಗೆ ನಿಗದಿಪಡಿಸಿರುವ ಘಟಕ ವೆಚ್ಚ ರೂ. 25 ಲಕ್ಷ ಹಾಗೂ ಇನ್ನೂಳಿದ ಜಿಲ್ಲೆಗಳಿಗೆ ರೂ. 20 ಲಕ್ಷ ನೀಡಲಾಗುತ್ತದೆ. ಇದರಲ್ಲಿ ಶೇ 50% ರಷ್ಟು ಸಹಾಯಧನ ಮತ್ತು ಇನ್ನೂಳಿದ ಶೇ 50% ಸಾಲ ನೀಡುತ್ತಾರೆ.

ಯೋಜನೆಯ ಹೆಸರು: ಭೂ ಒಡೆತನ ಯೋಜನೆ
ಸಹಾಯಧನ ಮೊತ್ತ: 25 ಲಕ್ಷ ರೂ. ಹಾಗೂ 20 ಲಕ್ಷ ರೂ. ಇದರಲ್ಲಿ ಶೇ 50% ರಷ್ಟು ಸಹಾಯಧನ ಮತ್ತು ಶೇ 50% ಸಾಲ ಸೌಲಭ್ಯ

ಈ ಯೋಜನೆಗೆ ಬೇಕಾಗುವ ದಾಖಲೆಗಳು:
ಭಾವಚಿತ್ರ
ಜಾತಿ ಪ್ರಮಾಣಪತ್ರ (ಕ್ಯಾಸ್ಟ್ ಸರ್ಟಿಫಿಕೇಟ್)
ಆದಾಯ ಪ್ರಮಾಣಪತ್ರ (ಇನ್ಕಮ್ ಸರ್ಟಿಫಿಕೇಟ್)
ಆಧಾರ್ ಕಾರ್ಡ್ ಪ್ರತಿ (ನಿವಾಸದ ಪುರಾವೆ)
ಕೃಷಿ ಕಾರ್ಮಿಕರ ದೃಡೀಕರಣ ಪತ್ರ

ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು?
ಭೂ ಒಡೆತನ ಯೋಜನೆಗೆ ಈ ಕೆಳಗಿನ ನಿಗಮಗಳ ವ್ಯಾಪ್ತಿಯಲ್ಲಿ ಬರುವ ಸಮುದಾಯದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ,
ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ,
ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ,
ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ,
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗದು,
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ.
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ

2023-2024 ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಗಳ ಮತ್ತು ಪರಿಶಿಷ್ಟ ಪಂಗಡಗಳ ಆರ್ಥಿಕ ಅಭಿವೃದ್ಧಿಗಾಗಿ ಭೂ ಒಡೆತನ ಯೋಜನೆಯ ಅರ್ಜಿ ಆಹ್ವಾನಿಸಲಾದೆ.

ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಸೇವಾ ಸಿಂಧು ಪೊರ್ಟಲ್ ಮೂಲಕ ಆನ್‌ಲೈನ್‌ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆ ಲಿಂಕ್‌ನ್ನು ಕೇಳಗೆ ನೀಡಲಾಗಿದೆ.

ಪ್ರಮುಖ ದಿನಾಂಕಗಳು:
ಭೂ ಒಡೆತನ ಯೋಜನೆಗೆ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 15-12-2023

ಆನ್‌ಲೈನ್‌ ಅರ್ಜಿ ಲಿಂಕ್‌: ಇಲ್ಲಿ ಕ್ಲಿಕ್‌ ಮಾಡಿ
ಅಧಿಕೃತ ವೆಬ್‌ಸೈಟ್ – ಇಲ್ಲಿ ಕ್ಲಿಕ್‌ ಮಾಡಿ

error: Content is protected !!