ಗ್ಯಾಸ್ ಬಳಕೆದಾರರಿಗೆ ಹೊಸ ಸೂಚನೆ – ಕೇಂದ್ರದ ಹೊಸ ಆದೇಶ
ಹಿಂದೆ ಒಂದು ಕಾಲವಿತ್ತು ಪ್ರತಿ ಮನೆಯಲ್ಲೂ ಸೌದೆ ಬಳಸಿ ಅಡುಗೆ ಹಾಗೂ ಇತ್ಯಾದಿ ಕೆಲಸಕ್ಕೆ ಒಲೆಯನ್ನೇ ಬಳಸಿ ಜೀವನ ಸಾಗಿಸುತ್ತಿದ್ದರು, ಗ್ಯಾಸ್ ಸಿಲಿಂಡರ್ ಸೌಲಭ್ಯ ಇರಲಿಲ್ಲ, ಸ್ವಲ್ಪ ಸಮಯದ ನಂತರ ಗ್ಯಾಸ್ ಸಿಲಿಂಡರ್ ಸೇವೆ ಬಂದರೂ ಕೂಡ ಅದನ್ನು ಖರೀದಿಸುವಷ್ಟು ಜನರ ಬಳಿ ಹಣ ಇರುತ್ತಿರಲಿಲ್ಲ,
ಆದರೆ ಈಗ ಕಾಲ ಬಹಳ ಬದಲಾಗಿದೆ ಹಾಗೂ ಪ್ರತಿಯೊಬ್ಬರ ಮನೆಯಲ್ಲೂ ಕೂಡ ಎಲ್ಪಿಜಿ ಸಿಲಿಂಡರ್ ಬಳಕೆಯಾಗುತ್ತಿದ್ದು ಅತಿ ಸುಲಭ ಹಾಗೂ ಸ್ವಚ್ಛವಾಗಿ ಅಡುಗೆ ಸಿದ್ಧಪಡಿಸಬಹುದು. ಹಾಗೂ ಪ್ರತಿ ಗ್ರಾಹಕರ ಮನೆಗೆಲ್ಪಿಜಿ ಸಿಲಿಂಡರ್ ಗಳು ಬುಕ್ ಮಾಡಿದ ಕೆಲವೇ ಗಂಟೆಗಳಲ್ಲಿ ನಮ್ಮ ಮನೆಗೆ ಬಂದು ತಲುಪುತ್ತವೆ. ಈ ಒಂದು ಯೋಜನೆ ಅಡಿಯಲ್ಲಿ ಸರಿಸುಮಾರು 75 ಲಕ್ಷಕ್ಕೂ ಅಧಿಕ ಕುಟುಂಬಗಳು ಎಲ್ಪಿಜಿ (LPG Cylinder) ಸೌಲಭ್ಯವನ್ನು ಪಡೆದು ತಮ್ಮ ದಿನನಿತ್ಯದ ಜೀವನವನ್ನು (Daily Lifestyle)ಮತ್ತಷ್ಟು ಸುಲಭವಾಗಿ ಕಂಡುಕೊಂಡಿದ್ದಾರೆ.
ಎಲ್ಪಿಜಿ ಸಿಲಿಂಡರ್ ಇಂದ ಸಮಸ್ಯೆಗಳು
ಎಲ್ಪಿಜಿ ಸಿಲೆಂಡರ್ ಇಂದ ಅಡುಗೆ ಕೆಲಸಗಳು ಹಾಗೂ ಮಹಿಳೆಯರಿಗೆ ಸಾಕಷ್ಟು ಇದರಿಂದ ಅನುಕೂಲ ಆಗುವುದು ಒಂದು ಕಡೆಯಾದರೆ ಎಲ್ಪಿಜಿ ಸಿಲಿಂಡರ್ ಸಮಸ್ಯೆಗಳು ಹಾಗೂ ಜೀವ ಹಾನಿಗಳು ಕೂಡ ಅಷ್ಟೇ ಪ್ರಮಾಣದಲ್ಲಿದೆ. ಅದೆಷ್ಟೋ ಕುಟುಂಬದ ಮಹಿಳೆಯರಿಗೆ ಎಲ್‌ಪಿಜಿಯ ಬಗ್ಗೆ ಸಾಕಷ್ಟು ಮಾಹಿತಿ ಇರೋದೇ ಇಲ್ಲ.
ಇದರಿಂದ ಸಾಕಷ್ಟು ಅವಘಡಗಳು ಹಾಗೂ ಅಚಾತುರ್ಯವೂ ಕೂಡ ನಡೆದು ಹೋಗಬಹುದು ಒಂದು ವೇಳೆ ನಾವು ಅದನ್ನು ಸರಿಯಾಗಿ ಬಳಸದೆ ಇದ್ದುದರಿಂದ ಇಂತಹ ಸಮಸ್ಯೆಗಳು ಎದುರಾಗುವುದು ಖಂಡಿತ, ಎಲ್ಪಿಜಿ ಗ್ಯಾಸ್ ಬಳಕೆಯ ನಂತರ ಅದರ ಕನೆಕ್ಷನ್ ಸರಿಯಾಗಿ ಆಫ್ ಮಾಡಲಾಗಿದೆಯಾ ಇಲ್ಲ ಎಂಬುದು ಖಚಿತಪಡಿಸಿಕೊಳ್ಳಿ.
ಎಲ್ಪಿಜಿ ಸಿಲಿಂಡರ್ ನ ಎಕ್ಸ್ಪರಿ ಡೇಟ್ ಒಮ್ಮೆ ಚೆಕ್ ಮಾಡಿ
ಸಾಕಷ್ಟು ಜನರು ಬಹುಶಹ ಎಲ್ಪಿಜಿ ಗ್ರಾಹಕರು ಸಿಲಿಂಡರ್ ಗಳಿಗೆ ಇರುವಂತಹ ಎಕ್ಸ್ಪರಿ ಡೇಟ್ (LPG cylinder expiry date) ಬಗ್ಗೆ ಮಾಹಿತಿ ಇರುವುದಿಲ್ಲ. ಒಂದು ವೇಳೆ ಎಕ್ಸ್ಪರಿ ಆಗಿರುವಂತಹ ಸಿಲಿಂಡರ್ ನೀವು ಬಳಸುತ್ತಿದ್ದರೆ ಬಹುದೊಡ್ಡ ಅನಾಹುತ ನಿಮ್ಮ ಮನೆಯಲ್ಲಿ ಎದುರಾಗಬಹುದು.
ಎಲ್ಪಿಜಿ ಸಿಲಿಂಡರ್ (LPG Cylinder) ಮೇಲೆ ಮೂರು ಬಹಳ ಮುಖ್ಯವಾದ ಮೂರೂ ವಿಷಯ ಬರೆದಿರಲಾಗುತ್ತದೆ. ಸಿಲಿಂಡರ್ ಮೇಲೆ ಇರುವಂತಹ ಮೂರು ಸ್ರಿಪ್ಸ್ (Three Strips) ಗಳ ಮೇಲೆ ಆಲ್ಪ ನ್ಯೂಮರಿಕಲ್ ಸಂಖ್ಯೆಯನ್ನು ನಮೂದಿಸಲಾಗಿರುತ್ತದೆ A-23, B-25, C-24, D-23 ಇವು ನಿಮಗೆ ಸಿಲಿಂಡರ್ ನ ಎಕ್ಸ್ಪರಿ ಡೇಟ್ ಕುರಿತಾದ ಮಾಹಿತಿಯನ್ನು ತಿಳಿಸುತ್ತದೆ.
A ಅಂದರೆ ಜನವರಿ – ಮಾರ್ಚ್
B ಅಂದರೆ ಏಪ್ರಿಲ್ – ಜೂನ್
C ಅಂದರೆ ಜುಲೈ – ಸೆಪ್ಟೆಂಬರ್
D ಎಂದರೆ ಅಕ್ಟೋಬರ್ – ಡಿಸೆಂಬರ್
ಹಾಗೆಯೇ ABCD ಯ ಮುಂದೆ ಇರುವ ನಂಬರ್ ಗಳು ಎಕ್ಸ್ಪರಿ ವರ್ಷವನ್ನು (Expiry Year) ಸೂಚಿಸುತ್ತದೆ. ಉದಾಹರಣೆಗೆ B 24 ಎಂದರೆ ನೀವು ಉಪಯೋಗಿಸುತ್ತಿರುವಂತಹ ಎಲ್ಪಿಜಿ ಸಿಲಿಂಡರ್ (LPG Cylinder) ಕೇವಲ ಏಪ್ರಿಲ್ ನಿಂದ ಜೂನ್ 2024 ರವರೆಗೂ ಮಾತ್ರ ಮಾನ್ಯವಾಗಿರುತ್ತದೆ ಎಂದರ್ಥ. ಸಿಲಿಂಡರ್ ಮೇಲಿರುವ ಈ ಸಂಖ್ಯೆಯನ್ನು ತಪ್ಪದೆ ಸರಿಯಾಗಿ ಪರಿಶೀಲಿಸಿ ಆನಂತರ ಉಪಯೋಗಿಸುವುದು ಒಳ್ಳೆಯದು.
ಜಿಲ್ಲಾವಾರು ಉದ್ಯೋಗಗಳು |