ರೈತ ವಿದ್ಯಾನಿಧಿ ವಿದ್ಯಾರ್ಥಿವೇತನ 2022-23
Raita Vidya Nidhi Scholarship 2022 – ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ವತಿಯಿಂದ ರೈತ ವಿದ್ಯಾನಿಧಿ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ಮೊದಲನೆಯದಾಗಿ ರೈತರಿಗೆ ಅಂದರೆ ಜಮೀನು ಇದ್ದಂತಹ ರೈತ ಮಕ್ಕಳಿಗೆ ಈ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿತ್ತು ಆದರೆ ಇದರಲ್ಲಿ ಸ್ವಲ್ಪ ವಿಸ್ತರಣೆಯಾಗಿದೆ. ಅದೇನೆಂದರೆ ಈ ರೈತ ವಿದ್ಯಾನಿಧಿ ವಿದ್ಯಾರ್ಥಿ ವೇತನವನ್ನು ಜಮೀನಿರುವ ರೈತರ ಮಕ್ಕಳಿಗೆ ಹಾಗೂ ಭೂ ರಹಿತ ಕೃಷಿ ಕಾರ್ಮಿಕರ ಮಕ್ಕಳಿಗೂ ಕೂಡ ಈ ಯೋಜನೆಯನ್ನು ವಿಸ್ತರಿಸಲಾಗಿದೆ. ಅಷ್ಟೇ ಅಲ್ಲದೆ ಮೀನುಗಾರರ ಮಕ್ಕಳು ಕೂಡ ಈ ವಿದ್ಯಾರ್ಥಿ ವೇತನವನ್ನು ಪಡೆಯಬಹುದಾಗಿದೆ.
ಆರ್ಥಿಕವಾಗಿ ಹಿಂದುಳಿದಂತಹ ರೈತರಿಗೆ ಹಾಗೂ ರೈತರ ಮಕ್ಕಳಿಗೆ ಉನ್ನತ ಶಿಕ್ಷಣಗಳನ್ನು ಪೂರೈಸುವಲ್ಲಿ ಅಡೆತಡೆಯಾಗದಂತೆ, ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಲು ಈ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ಎಲ್ಲಾ ಫಲಾನುಭವಿ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನದ ಮೂಲಕ, ವಿದ್ಯಾರ್ಥಿಗಳು 2,500 ರೂಗಳಿಂದ, ರೂ.11,000 ವರೆಗೂ ವಿದ್ಯಾರ್ಥಿ ವೇತನವನ್ನು ಪಡೆದು ತಮ್ಮ ಓದಿನ ಆಸೆಯನ್ನು ಪೂರ್ಣಗೊಳಿಸಿಕೊಳ್ಳಬಹುದಾಗಿದೆ. ಇಂತಹ ವಿದ್ಯಾರ್ಥಿ ವೇತನಗಳನ್ನು ರಾಜ್ಯ ಸರ್ಕಾರದವರು ನೀಡುವುದರಿಂದ ರೈತರಿಗೆ ತಮ್ಮ ಮಕ್ಕಳನ್ನು ಓದಿಸಲು ಯಾವುದೇ ರೀತಿಯ ತೊಂದರೆಯೂ ಆಗುವುದಿಲ್ಲ. ಒಟ್ಟಾರೆ ರೈತರ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಪೂರೈಸುವಲ್ಲಿ ಯಾವುದೇ ಅಡೆತಡೆಯಾಗದಂತೆ ನೆರವು ನೀಡುವುದು ಈ ವಿದ್ಯಾರ್ಥಿ ವೇತನದ ಮುಖ್ಯ ಉದ್ದೇಶವಾಗಿದೆ.
ಈ ವಿದ್ಯಾರ್ಥಿ ವೇತನವನ್ನು ಪಡೆಯಲು ಬೇಕಾದ ಅರ್ಹತೆಗಳು :
ವಿದ್ಯಾರ್ಥಿಯು ಖಾಯಂ ಕರ್ನಾಟಕದ ನಿವಾಸಿಯಾಗಿರಬೇಕು.
ವಿದ್ಯಾರ್ಥಿಗಳು ಪಿಯುಸಿ, ಐಟಿಐ, ಬಿಎ, ಬಿ ಎಸ್ ಸಿ, ಬಿಕಾಂ, ಎಂಬಿಬಿಎಸ್, ಕಾನೂನು, ಅರೆ ವೈದ್ಯಕೀಯ, ನರ್ಸಿಂಗ್, ಇತರೆ ವೃತ್ತಿಪರ ಪದವಿಗಳು ಅಥವಾ ಸ್ನಾತಕೋತ್ತರ ಪದವಿಯನ್ನು ಓದುತ್ತಿರಬೇಕು.
ವಿದ್ಯಾರ್ಥಿ ವೇತನವನ್ನು ಪಡೆಯಲು ವಿದ್ಯಾರ್ಥಿಯು ಕರ್ನಾಟಕ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರದ ವತಿಯಿಂದ ಮಾನ್ಯತೆ ಪಡೆದ ಶಾಲೆಯಿಂದ 10ನೇ ತರಗತಿಯನ್ನು ಉತ್ತೀರ್ಣರಾಗಿರಬೇಕು.
ಕೃಷಿ ಹಾಗೂ ಮೀನುಗಾರಿಕೆ ಮಾಡಿಕೊಂಡ ಪೋಷಕರ ಮಕ್ಕಳಿಗೆ ಮಾತ್ರ ಈ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ.
ವಿದ್ಯಾರ್ಥಿ ವೇತನದ ಮೊತ್ತ :
1. ಪ್ರೌಢ ಶಿಕ್ಷಣ (8 ರಿಂದ 10ನೇ ತರಗತಿ)
ವಿದ್ಯಾರ್ಥಿನಿಯರು ಅಥವಾ ಅನ್ಯಲಿಂಗದವರಿಗೆ-2000 ರೂ
2. ಪದವಿಯ ಮುಂಚೆ ಪಿಯುಸಿ/ ಐಟಿಐ /ಡಿಪ್ಲೋಮ
ವಿದ್ಯಾರ್ಥಿಗಳು/ ಪುರುಷರು-ರೂ.
2500
ವಿದ್ಯಾರ್ಥಿನಿಯರು/ ಅನ್ಯಲಿಂಗದವರು-ರೂ 3000
3. ಎಲ್ಲಾ ಬಿಎ ಬಿಎಸ್ಸಿ ಬಿಕಾಂ ಇತ್ಯಾದಿ (ಎಂಬಿಬಿಎಸ್, ಬಿಇ/ಬಿ ಟೆಕ್ ಮತ್ತು ವೃತ್ತಿಪರ ಕೋರ್ಸ್ ಗಳನ್ನು ಹೊರತುಪಡಿಸಿ)
ವಿದ್ಯಾರ್ಥಿಗಳು/ ಪುರುಷರು -ರೂ 5000
ವಿದ್ಯಾರ್ಥಿನಿಯರು / ಅನ್ಯಲಿಂಗದವರು-ರೂ 5500
4. ಎಲ್ ಎಲ್ ಬಿ, ಪ್ಯಾರಾಮೆಡಿಕಲ್, ಬಿ ಫಾರ್, ನರ್ಸಿಂಗ್ ಇತ್ಯಾದಿ ವೃತ್ತಿಪರ ಕೋರ್ಸ್ ಗಳು
ವಿದ್ಯಾರ್ಥಿಗಳು/ ಪುರುಷರು-ರೂ.7500
ವಿದ್ಯಾರ್ಥಿನಿಯರು / ಅನ್ಯಲಿಂಗದವರು-ರೂ 8000
5. ಎಂಬಿಬಿಎಸ್, ಬಿ ಇ/ಬಿ ಟೆಕ್ ಮತ್ತು ಎಲ್ಲಾ ಸ್ನಾತಕೋತ್ತರ ಕೋರ್ಸ್ ಗಳು
ವಿದ್ಯಾರ್ಥಿಗಳು/ ಪುರುಷರು-ರೂ 10,000
ವಿದ್ಯಾರ್ಥಿನಿಯರು/ ಅನ್ಯಲಿಂಗದವರು-ರೂ 11,000
ವಿಶೇಷ ಸೂಚನೆ- ಪುನರಾವರ್ತಿತ ವಿದ್ಯಾರ್ಥಿಗಳು ಅರ್ಹರಿರುವುದಿಲ್ಲ.