ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

ಜಿರಳೆ ಕಾಟದಿಂದ ಬೇಸತ್ತಿದ್ದೀರಾ…? ಇಲ್ಲಿದೆ ಪರಿಹಾರ – get rid of cockroaches

ಮನೆಯಲ್ಲಿರುವ ಈ ವಸ್ತುಗಳನ್ನು ಬಳಸಿ ಜಿರಳೆ ಸಮಸ್ಯೆಯಿಂದ ಶಾಶ್ವತ ಮುಕ್ತಿ ಪಡೆಯಬಹುದು

5 Best Ways To Kill Cockroaches Instantly from Home – ಜಿರಳೆ ಭಾರತದ ಪ್ರತಿಯೊಂದು ಮನೆಯಲ್ಲೂ ಕಂಡುಬರುವ ಅನಗತ್ಯ ಜೀವಿ. ಪ್ರತಿಯೊಂದು ಅಡುಗೆ ಮನೆ, ಕೋಣೆ ಹಾಗೂ ಮನೆಯ ಇತರ ಭಾಗದಲ್ಲಿ ಜಿರಳೆಯು ಕಂಡುಬರುವುದು ಸಹಜ .ಇದು ಕೊಳಚೆಯಲ್ಲಿ ವಾಸಿಸುತ್ತದೆ. ಈ ಜಿರಳೆಗಳು ಅನೇಕ ರೋಗಗಳ ಅಪಾಯವನ್ನು ತಂದೊಡ್ಡುತ್ತದೆ. ಮನೆಯ ಅಡಿಗೆ ಮನೆ ಮತ್ತು ಸಿಂಕ್ ಜಿರಳೆಗಳ ನೆಚ್ಚಿನ ಸ್ಥಳಗಳಾಗಿರುತ್ತವೆ. ಅವು ಆಹಾರ ಪದಾರ್ಥಗಳನ್ನು ಕಲುಷಿತಗೊಳಿಸುತ್ತವೆ.

How To Kill Cockroaches | Getting Rid of Cockroaches Guide 2019
Aukid Phumsirichat / EyeEm//Getty Images

 ಜಿರಳೆಯನ್ನು ಕೊಲ್ಲಲು ಹಾಗೂ ಅದನ್ನು ದೂರ ಓಡಿಸಲು ಹಲವಾರು ರೀತಿಯ ಸ್ಪ್ರೇ ಹಾಗೂ ಹುಡಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಇದನ್ನು ಬಳಕೆ ಮಾಡಿದರೆ ಅದು ಆರೋಗ್ಯಕ್ಕೆ ಹಾನಿ ಉಂಟು ಮಾಡುವುದು.  ಆದರೆ ಜಿರಳೆಯನ್ನು ಹಾಗೆ ಬಿಟ್ಟರೆ ಅದರಿಂದ ಆರೋಗ್ಯದ ಮೇಲೆ ಮತ್ತಷ್ಟು ಪರಿಣಾಮ ಬೀರುವುದು ಪಕ್ಕಾ ಇದನ್ನು ಹೇಗೆ ತಡೆಗಟ್ಟಲು ಸಾಧ್ಯ ಎಂಬುದನ್ನು ತಿಳಿಯೋನಾ .

ಜಿರಳೆಗಳನ್ನು ತೊಡೆದುಹಾಕಲು  ಸುಲಭ ಮಾರ್ಗಗಳು
ಕರ್ಪೂರ

ಕರ್ಪೂರವನ್ನು ಅಡುಗೆ ಕೊನೆಯ ಮೂಲೆ ಮೂಲೆಯಲ್ಲಿ ಇಟ್ಟರೆ ಇದರ ಗಾಢ ಪರಿಮಳದಿಂದ ಜಿರಳೆ ದೂರ ಓಡುತ್ತದೆ. ಇದರಿಂದ ಕಿಚನ್ ನಲ್ಲಿ ಒಳ್ಳೆಯ ಪರಿಮಳವು ಇರುತ್ತದೆ.

ಸೀಮೆ ಎಣ್ಣೆ
ಜಿರಳೆಗಳೂ ಸೀಮೆ ಎಣ್ಣೆಯ ವಾಸನೆಯನ್ನು ಇಷ್ಟಪಡುವುದಿಲ್ಲ ಮತ್ತು ಅವು ಅದರಿಂದ ಓಡಿಹೋಗುತ್ತವೆ. ಮನೆಯಲ್ಲಿ ಜಿರಳೆಗಳು ಕಾಣಿಸಿಕೊಳ್ಳದಂತೆ, ನೆಲ ಒರೆಸುವಾಗ ಸ್ವಲ್ಪ ಸೀಮೆ ಎಣ್ಣೆಯನ್ನು ಬೆರೆಸುವದು.

ಪಲಾವ್ ಎಲೆಗಳು
ಆಹಾರದ ರುಚಿಯನ್ನು ಹೆಚ್ಚಿಸಲು ಪಲಾವ್ ಎಲೆಗಳನ್ನು ಜಿರಳೆಗಳನ್ನು ತೊಡೆದುಹಾಕಲು ಇದು ರಾಮಬಾಣ. ಈ ಎಲೆಗಳ ವಾಸನೆಯನ್ನು ಸಹಿಸುವುದಿಲ್ಲ. ಈ ಎಲೆಗಳನ್ನು ಪುಡಿಮಾಡಿ ಮತ್ತು ಅವುಗಳನ್ನು ಮನೆಯಲ್ಲಿ ಅಲ್ಲಲ್ಲಿ ಇರಿಸಿದರೆ ಮನೆಯೊಳಗೆ ಜಿರಳೆಗಳು ಬರುವುದಿಲ್ಲ.

ಬೋರಿಕ್ ಆಮ್ಲ ಮತ್ತು ಸಕ್ಕರೆ
ಸ್ವಲ್ಪ ಬೋರಿಕ್ ಆಮ್ಲ ಮತ್ತು ಸಕ್ಕರೆಯನ್ನು ಬೆರೆಸಿ, ನಂತರ ಜಿರಳೆಗಳ ಸಂತಾನೋತ್ಪತ್ತಿಯನ್ನು ನೀವು ಕಂಡುಕೊಳ್ಳುವ ಸ್ಥಳಗಳಲ್ಲಿ ಹರಡಿ. ಸಕ್ಕರೆ ಬಗ್ ಗಳಿಗೆ ಆಮಿಷವೊಡ್ಡಿದರೆ, ಬೋರಿಕ್ ಆಮ್ಲವು ತಕ್ಷಣ ಅವುಗಳನ್ನು ಕೊಲ್ಲುತ್ತದೆ.

ಬಿಸಿನೀರು, ನಿಂಬೆ ಮತ್ತು ಅಡಿಗೆ ಸೋಡಾ ಬಳಕೆ
ನಿಂಬೆ, 2 ಚಮಚ ಬೇಕಿಂಗ್ ಸೋಡಾವನ್ನು 1 ಲೀಟರ್ ಬಿಸಿನೀರಿನಲ್ಲಿ ಚೆನ್ನಾಗಿ ಬೆರೆಸಿ ಡ್ರೈನ್ ಔಟ್ ಲೆಟ್ಗಳಲ್ಲಿ ಸುರಿಯಿರಿ ಜಿರಳೆಗಳ ಸಂತಾನೋತ್ಪತ್ತಿಯನ್ನು ನಿಲ್ಲಿಸುವ ಪರಿಹಾರ ಇದು.

 

 

ಜಿಲ್ಲಾವಾರು ಉದ್ಯೋಗಗಳು 

ಬಾಗಲಕೋಟೆವಿಜಯಪುರ
ಬಳ್ಳಾರಿಬೆಳಗಾವಿ
ಬೆಂಗಳೂರುಬೀದರ್
ಬಿಜಾಪುರಚಾಮರಾಜನಗರ
ಚಿಕ್ಕಬಳ್ಳಾಪುರಚಿಕ್ಕಮಗಳೂರು
ಚಿತ್ರದುರ್ಗದಕ್ಷಿಣ ಕನ್ನಡ
ದಾವಣಗೆರೆಧಾರವಾಡ
ಗದಗಕಲಬುರಗಿ 
ಹಾಸನಹಾವೇರಿ
ಹುಬ್ಬಳ್ಳಿಕಲಬುರಗಿ
ಕಾರವಾರಕೊಡಗು
ಕೋಲಾರಕೊಪ್ಪಳ
ಮಂಡ್ಯಮಂಗಳೂರು
ಮೈಸೂರುರಾಯಚೂರು
ರಾಮನಗರಶಿವಮೊಗ್ಗ
ತುಮಕೂರುಉಡುಪಿ
ಉತ್ತರ ಕನ್ನಡಯಾದಗಿರಿ

close button