free sewing machine scheme online apply karnataka – ಜಿಲ್ಲಾ ಪಂಚಾಯತ ಕಾರ್ಯಾಲಯ ಕಲಬುರಗಿ ಸಂಖ್ಯೆಜಿಪಂಕ/ಕೈವಿ/ಆನ್‌ಲೈನ್ ಅರ್ಜಿ/2023-24 ದಿನಾಂಕ:28-08-2023. ಅಧಿಸೂಚನೆ ಜಿಲ್ಲಾ ಪಂಚಾಯತ, ಕಲಬುರಗಿ (ಕೈಗಾರಿಕಾ ವಿಭಾಗದ 2023-24ನೇ ಸಾಲಿನ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಸಲಕರಣೆ ಸರಬರಾಜು ಯೋಜನೆ (ಜಿಲ್ಲಾ ವಲಯ) ಅಡಿ ಕಲಬುರಗಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಒಟ್ಟು 550 ಹೊಲಿಗೆ ವೃತ್ತಿನಿರತ ಮಹಿಳಾ ಕುಶಲಕರ್ಮಿಗಳಿಗೆ ಉಚಿತವಾಗಿ ವಿದ್ಯುತ್‌ಚಾಲಿತ ಹೊಲಿಗೆಯಂತ್ರಗಳನ್ನು ವಿತರಿಸಬೇಕಾಗಿದ್ದರಿಂದ ಈ ಕೆಳಗಿನಂತೆ ತಾಲೂಕುವಾರು ಹಾಗೂ ಪ್ರವರ್ಗವಾರು ಗುರಿ ನಿಗದಿಪಡಿಸಿ, ದಿನಾ೦ಕ:01-09-2023 ರಿಂದ ದಿನಾಂಕ:30-09-2023ರ ವರೆಗೆ ವೆಬ್‌ಸೈಟ್: www.kalaburagi.nic.in ಮುಖಾಂತರ ಅರ್ಜಿಗಳನ್ನು ಅಹ್ವಾನಿಸಲಾಗಿದೆ.
ಅರ್ಹತೆಗಳು
- ವಿದ್ಯುತಚಾಲಿತ ಹೊಲಿಗೆಯಂತ್ರ ಪಡೆಯುವುದಕ್ಕಾಗಿ ಕಲಬುರಗಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ವಾಸವಿರುವ ಮಹಿಳಾ ಅಭ್ಯರ್ಥಿ ಮಾತ್ರ ಅರ್ಜಿ ಸಲ್ಲಿಸತಕ್ಕದ್ದು.
- ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಕನಿಷ್ಠ 21 ವರ್ಷ ಹಾಗೂ ಗರಿಷ್ಠ 45 ವರ್ಷಗಳು ಇರತಕ್ಕದ್ದು. (ಅರ್ಜಿ ಸಲ್ಲಿಸುವ ಮೊದಲನೇ ದಿನಾಂಕವಾದ 01-09-2023 ರಂದು)
- ಅರ್ಜಿದಾರರು ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು. * ಒಂದು ಕುಟುಂಬಕ್ಕೆ ಒಂದು ಅರ್ಜಿ ಸಲ್ಲಿಸಲು ಮಾತ್ರ ಅವಕಾಶವಿರುತ್ತದೆ. * ಸರಕಾರದ ಯಾವುದೇ ಯೋಜನೆಯಡಿ ಈಗಾಗಲೇ ಹೊಲಿಗೆಯಂತ್ರವನ್ನು ಪಡೆದಿರುವ ಫಲಾನುಭವಿಗಳು ಅರ್ಜಿ ಸಲ್ಲಿಸಲು ಅರ್ಹವಿರುವುದಿಲ್ಲ.
- ಸರ್ಕಾರಿ ನೌಕರರು ಅಥವಾ ಅವರ ಅವಲಂಬಿತರು ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.
- ಆನ್‌ಲೈನ್‌ನಲ್ಲಿ www.kalaburagi.nic.in ವೆಬ್‌ಸೈಟ್ ಮುಖಾಂತರ ಅವಶ್ಯ ಮಾಹಿತಿ ಭರ್ತಿ ಮಾಡಿ ಮತ್ತು ಸಂಬಂಧಿಸಿದ ದಾಖಲೆಗಳ ಸ್ವಯಂ ದೃಢೀಕೃತ ಪ್ರತಿಗಳು ಅಪ್ಲೋಡ್ ಮಾಡುವ ಮೂಲಕ ನಿಗದಿತ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸುವುದು.
- ಅಪ್ಲೋಡ್ ಮಾಡಬೇಕಾದ ದಾಖಲೆಗಳು. (ಸ್ವಯಂ ದೃಢೀಕೃತ ಪ್ರತಿಗಳು)
1) ಪಾಸ್ಪೋರ್ಟ್ ಗಾತ್ರದ ಭಾವಚಿತ್ರ (In JPG Format)
2) ಜನ್ಮ ದಿನಾಂಕ ನಮೂದಿಸಿರುವ ದಾಖಲೆ (ವರ್ಗಾವಣೆ ಪ್ರಮಾಣ ಪತ್ರ/ ಎಸ್.ಎಸ್.ಎಲ್.ಸಿ. ಅಂಕಪಟ್ಟಿ/ ಇನ್ನೀತರ ಪ್ರಮಾಣ ಪತ್ರ) (In PDF Format).
3) ಶೈಕ್ಷಣಿಕ ಅರ್ಹತೆ (ವರ್ಗಾವಣೆ ಪ್ರಮಾಣ/ ಅಂಕಪಟ್ಟಿ) (In PDF Format).
4) ಜಾತಿ ಪ್ರಮಾಣ ಪತ್ರ. (In PDF Format).
5) ಪಡಿತರ ಚೀಟಿ (In PDF Format).
6) ಆಯಾ ಗ್ರಾಮ ಪಂಚಾಯತಿಯ, ಪಂಚಾಯತ ಅಭಿವೃದ್ಧಿ ಅಧಿಕಾರಿಯವರಿಂದ ಹೊಲಿಗೆ (ಟೇಲರಿಂಗ್) ವೃತ್ತಿ ಮಾಡುತ್ತಿರುವ ಬಗ್ಗೆ ದೃಢೀಕರಣ ಪ್ರಮಾಣ ಪತ್ರ. (In PDF Format).
ಆಯ್ಕೆ ಪ್ರಕ್ರಿಯೆ:
ನಿಗದಿಪಡಿಸಿರುವ ಗುರಿಗಿಂತ ಅಧಿಕ ಅರ್ಹ ಅರ್ಜಿಗಳು ಸ್ವೀಕೃತವಾಗಿದ್ದಲ್ಲಿ, ಲಾಟರಿ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿಃ ಉಪ. ನಿರ್ದೇಶಕರು (ಗ್ರಾಮೀಣ ಕೈಗಾರಿಕೆ) ರವರ ಕಛೇರಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕೈಗಾರಿಕಾ ವಿಭಾಗ, ಜಿಲ್ಲಾ ಪಂಚಾಯತ, ಎಲ್-10, ಕೈಗಾರಿಕಾ ವಸಾಹತು, ಎಂ.ಎಸ್.ಕೆ. ಮಿಲ್ಲ್ ರಸ್ತೆ, ಕಲಬುರಗಿ ಅಥವಾ ಆಯಾ ತಾಲೂಕಿನ ಕೈಗಾರಿಕಾ ವಿಸ್ತರಣಾಧಿಕಾರಿಗಳಿಗೆ ಸಂಪರ್ಕಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ಲಿಂಕ್ |