ಉಚಿತ ವಾಹನ ತರಬೇತಿ ಯೋಜನೆ 2023-24
Free Driving Scheme 2024 Karnataka – ನಮಸ್ಕಾರ ಓದುಗರೇ ತಾವು ಉಚಿತ ವಾಹನ ತರಬೇತಿ ಪಡೆಯುವುದರ ಬಗ್ಗೆ ಯೋಚನೆ ಮಾಡುತ್ತಿದ್ದರೆ ನಿಮಗಾಗಿ ಇಲ್ಲಿದೆ ಗುಡ್ ನ್ಯೂಸ್. ಅರ್ಹ ಅಭ್ಯರ್ಥಿಗಳು ಉಚಿತ ಲಘು ಮತ್ತು ಭಾರಿ ವಾಹನ ಚಾಲನಾ ತರಬೇತಿಗೆ ನೋಂದಣಿ ಮಾಡಿಕೊಳ್ಳಬಹುದು.
ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್ಸಿ) ಹಾಗೂ ಗಿರಿಜನ ಉಪ ಯೋಜನೆ (ಟಿ.ಎಸ್.ಪಿ) ಯೋಜನೆಯಡಿ ಪರಿಶಿಷ್ಟ ಜಾತಿ(ಎಸ್ಸಿ) ಮತ್ತು ಪರಿಶಿಷ್ಟ ಪಂಗಡ(ಎಸ್.ಟಿ)ಗಳ ಅಭ್ಯರ್ಥಿಗಳಿಗೆ ಉಚಿತವಾಗಿ ಲಘು ಮತ್ತು ಭಾರಿ ವಾಹನ ಚಾಲನ ತರಬೇತಿ ನೀಡಿ ಪ್ರಾದೇಶಿಕ ಸಾರಿಗೆ ಕಛೇರಿಯಿಂದ ಚಾಲನ ಅನುಜ್ಞಾಪತ್ರ/ ಬ್ಯಾಡ್ಜ್ ನೀಡುವ ಕಾರ್ಯಕ್ರಮವನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿರುತ್ತದೆ.
ಉಚಿತ ವಾಹನ ತರಬೇತಿಯನ್ನು ಪಡೆಯಲು ಇಚ್ಚಿಸುವ ಪರಿಶಿಷ್ಟ ಜಾತಿ(ಎಸ್ಸಿ) ಮತ್ತು ಪರಿಶಿಷ್ಟ ಪಂಗಡ(ಎಸ್.ಟಿ)ಗಳ ಅಭ್ಯರ್ಥಿಗಳು ಹೊಂದಿರಬೇಕಾದ ಕನಿಷ್ಠ ಅರ್ಹತೆಗಳು/ ಸಲ್ಲಿಸಬೇಕಾಗುವ ದಾಖಲಾತಿಗಳ ಸಂಪೂರ್ಣ ವಿವರ ಈ ಕೆಳಕಂಡಂತೆ ಇರುತ್ತದೆ.
ಲಘು ವಾಹನ ಚಾಲನಾ ತರಬೇತಿ (ಕಾರ್/ಜೀಪ್):
– ಕನಿಷ್ಠ 18 ವರ್ಷ ವಯೋಮಿತಿ ತುಂಬಿರಬೇಕು. ಗರಿಷ್ಠ: 45 ವರ್ಷ (ವಯೋಮಿತಿಯನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕಕ್ಕೆ ಪರಿಗಣಿಸಲಾಗುವುದು).
– ಜನ್ಮ ದಿನಾಂಕದ ಬಗ್ಗೆ ಜನನ ಪ್ರಮಾಣಪತ್ರ ಅಥವಾ ಎಸ್.ಎಸ್.ಎಲ್.ಸಿ. ಅಂಕಪಟ್ಟಿ ಅಥವಾ ಶಾಲಾ ವರ್ಗಾವಣಾ ಪ್ರಮಾಣ ಪತ್ರ ಅಥವಾ ನೋಟರಿಯಿಂದ ಪ್ರಮಾಣ ಪತ್ರ.
– ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ.
– ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ-5.
ಭಾರಿ ವಾಹನ ಚಾಲನಾ ತರಬೇತಿ (ಬಸ್):
ಕನಿಷ್ಠ 20 ವರ್ಷಗಳ ವಯೋಮಿತಿ ಪೂರ್ಣಗೊಂಡಿರಬೇಕು, ಗರಿಷ್ಠ: 45 ವರ್ಷ (ವಯೋಮಿತಿಯನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕಕ್ಕೆ ಪರಿಗಣಿಸಲಾಗುವುದು).
– ಲಘು ವಾಹನ ಚಾಲನಾ ಅನುಜ್ಞಾಪತ್ರ ಪಡೆದು ಒಂದು ವರ್ಷ ಪೂರ್ಣಗೊಂಡಿರಬೇಕು.
– ಜನ್ಮ ದಿನಾಂಕದ ಬಗ್ಗೆ ಜನನ ಪ್ರಮಾಣಪತ್ರ ಅಥವಾ ಎಸ್.ಎಸ್.ಎಲ್.ಸಿ. ಅಂಕಪಟ್ಟಿ ಅಥವಾ ಶಾಲಾ ವರ್ಗಾವಣಾ
– ಪ್ರಮಾಣ ಪತ್ರ ಅಥವಾ ನೋಟರಿಯಿಂದ ಪ್ರಮಾಣ ಪತ್ರ.
– ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ.
– ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ-5.
ಮೊದಲು ಬಂದ ಅರ್ಹ ಅಭ್ಯರ್ಥಿಗಳಿಗೆ ಮೊದಲ ಆದ್ಯತೆಯ ಮೇರೆಗೆ ಅರ್ಹ ಎಸ್.ಸಿ/ ಎಸ್.ಟಿ ಅಭ್ಯರ್ಥಿಗಳಿಗೆ ಲಘು/ ಭಾರಿ ವಾಹನ ಚಾಲನಾ ತರಬೇತಿ (30 ದಿನಗಳು) ಮತ್ತು ತರಬೇತಿಯ ಅವಧಿಯಲ್ಲಿ ವಸತಿ ಮತ್ತು ಊಟೋಪಚಾರದ ವ್ಯವಸ್ಥೆಯನ್ನು ಉಚಿತವಾಗಿ ನೀಡಲಾಗುತ್ತದೆ
ಅರ್ಜಿ ಸಲ್ಲಿಸುವ ವಿಧಾನ:
ಮೇಲೆ ತಿಳಿಸಿರುವ ಮಾನದಂಡಗಳನ್ನು ಹೊಂದುವ ಅಭ್ಯರ್ಥಿಗಳು ಅರ್ಹತೆ ಹೊಂದಿದ್ದು, ಆಸಕ್ತಿ ಇರುವ ಪರಿಶಿಷ್ಟ ಜಾತಿ/ ಪಂಗಡದ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ತಮ್ಮ ಮೂಲ ದಾಖಲೆ ಮತ್ತು 02 ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ, 3ನೇ ಮಹಡಿ, ಶಾಂತಿನಗರ ಬಸ್ ನಿಲ್ದಾಣ, ಬೆಂಗಳೂರು-560027 ಇಲ್ಲಿ ದಿನಾಂಕ: 31-01-2024 ರವರೆಗೂ ಹೆಸರು ನೋಂದಾಯಿಸಿಕೊಳ್ಳಬಹುದಾಗಿರುತ್ತದೆ.
ಹೆಚ್ಚಿನ ಮಾಹಿತಿಯನ್ನು ಸಂಸ್ಥೆಯ ವೆಬ್‌ಸೈಟ್ www.mybmtc.gov.in ನಿಂದ ಪಡೆಯಬಹುದಾಗಿದೆ. ಕಛೇರಿಯ ವೇಳೆಯಲ್ಲಿ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆಗಳು: 7760991085, 6364858520, 7892529634, 7760576556, 7760991348, 080-22537481.
ಪ್ರಮುಖ ದಿನಾಂಕಗಳು:
ನೋಂದಣಿಯ ಕೊನೆಯ ದಿನಾಂಕ: 31-01-2024 ರವರೆಗೆ (ಮೊದಲು ಬಂದವರಿಗೆ ಮೊದಲ ಆದ್ಯತೆಯ)
ಅಧಿಕೃತ ವೆಬ್ಸೈಟ್ – ಇಲ್ಲಿ ಕ್ಲಿಕ್ ಮಾಡಿ |