ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

MCC ಬ್ಯಾಂಕ್ ನೇಮಕಾತಿ ಅಧಿಸೂಚನೆ 2025 – ವಿವಿಧ ಖಾಲಿ ಹುದ್ದೆಗಳಿಗೆ ಅರ್ಜಿ ಅಹ್ವಾನ

ಮಂಗಳೂರು ಕ್ಯಾಥೋಲಿಕ್ ಸಹಕಾರಿ ಬ್ಯಾಂಕ್ ಲಿಮಿಟೆಡ್ ನೇಮಕಾತಿ 2025

ಮಂಗಳೂರು ಕ್ಯಾಥೋಲಿಕ್ ಸಹಕಾರಿ ಬ್ಯಾಂಕ್ ಲಿಮಿಟೆಡ್ (MCC Bank) ಜೂನಿಯರ್ ಮತ್ತು ಸೀನಿಯರ್ ಅಸಿಸ್ಟೆಂಟ್ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮೊದಲು ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ ಮತ್ತು ಇತರ ಮಾಹಿತಿ ಸಂಪೂರ್ಣವಾಗಿ ಓದಿ ತಿಳಿದುಕೊಳ್ಳುವುದು ಅಗತ್ಯ. ಈ ಲೇಖನದಲ್ಲಿ ಎಲ್ಲಾ ವಿವರಗಳನ್ನು ವಿವರಿಸಲಾಗಿದೆ. ಅಧಿಕೃತ ಅಧಿಸೂಚನೆ ಮತ್ತು ವೆಬ್‌ಸೈಟ್ ಲಿಂಕ್‌ಗಳನ್ನೂ ನೀಡಲಾಗಿದೆ.

ನಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟವಾಗುವ ಎಲ್ಲಾ ಉದ್ಯೋಗ ಮಾಹಿತಿಗಳು ಉಚಿತವಾಗಿದ್ದು, ಯಾವುದೇ ಶುಲ್ಕವನ್ನು ತೆಗೆದುಕೊಳ್ಳಲಾಗುವುದಿಲ್ಲ. ಯಾರಾದರೂ ಹಣವನ್ನು ಕೇಳಿದರೆ ದಯಮಾಡಿ ನಮ್ಮ ಇಮೇಲ್ ವಿಳಾಸಕ್ಕೆ ಮಾಹಿತಿ ನೀಡಿ.

ಹುದ್ದೆಗಳ ವಿವರ

ಬ್ಯಾಂಕ್‌ ಹೆಸರು:
ಮಂಗಳೂರು ಕ್ಯಾಥೋಲಿಕ್ ಸಹಕಾರಿ ಬ್ಯಾಂಕ್ ಲಿಮಿಟೆಡ್

ಒಟ್ಟು ಹುದ್ದೆಗಳ ಸಂಖ್ಯೆ:
10

ಹುದ್ದೆಗಳ ಹೆಸರು:
ಹಿರಿಯ ಸಹಾಯಕ – 2 ಹುದ್ದೆಗಳು
ಕಿರಿಯ ಸಹಾಯಕ – 8 ಹುದ್ದೆಗಳು

ಕೆಲಸದ ಸ್ಥಳ:
ಮಂಗಳೂರು

ಅರ್ಜಿ ಸಲ್ಲಿಸುವ ವಿಧಾನ:
ಆಫ್‌ಲೈನ್‌ ಮೂಲಕ

ವಿದ್ಯಾರ್ಹತೆ

ಹಿರಿಯ ಸಹಾಯಕ:
✅ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (B.Com/B.A./B.B.M./B.Sc./B.C.A./M.Sc. ಮುಂತಾದವು).
✅ ಕನ್ನಡದಲ್ಲಿ ಮಾತನಾಡಲು, ಓದಲು ಮತ್ತು ಬರೆಯಲು ಸಾಮರ್ಥ್ಯ ಇರಬೇಕು.
✅ ಕಂಪ್ಯೂಟರ್‌ ಆಧಾರಿತ ಕೌಶಲ್ಯಗಳು ಇರಬೇಕು, ವಿಶೇಷವಾಗಿ ಓಪನ್ ಆಫೀಸ್, ಟೈಪಿಂಗ್ ಮತ್ತು ಇಂಟರ್‌ನೆಟ್‌ ಬಳಕೆ.
✅ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನುಭವ ಇದ್ದರೆ ಆದ್ಯತೆ.
✅ ಗ್ರಾಹಕ ಸಂಪರ್ಕ ವಿಭಾಗದಲ್ಲಿ ಅನುಭವ ಇದ್ದರೆ ಉತ್ತಮ.

ಕಿರಿಯ ಸಹಾಯಕ:
✅ ಯಾವುದೇ ಪದವಿ ಪೂರ್ಣಗೊಳಿಸಿರಬೇಕು (ಬಿಕಾಂ/ಬಿ.ಎ./ಬಿ.ಬಿ.ಎಂ./ಬಿ.ಎಸ್.ಸಿ./ಬಿ.ಸಿ.ಎ./ಎಂ.ಎಸ್.ಸಿ. ಮುಂತಾದವು).
✅ ಕನ್ನಡದಲ್ಲಿ ಮಾತನಾಡಲು, ಓದಲು ಮತ್ತು ಬರೆಯಲು ಪರಿಣಿತಿ.
✅ ಕಂಪ್ಯೂಟರ್ ಜ್ಞಾನ ಮತ್ತು ಆಧಾರಭೂತ ಕೌಶಲ್ಯಗಳು.

ಅರ್ಜಿ ಶುಲ್ಕ
 ಸಾಮಾನ್ಯ ವರ್ಗ ಹಾಗೂ ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು: ರೂ.1,000 + 18% GST (ಒಟ್ಟು ರೂ.1,180)
ಪರಿಶಿಷ್ಟ ಜಾತಿ/ಪಂಗಡ ಹಾಗೂ ಕಾಟ್-1 ಅಭ್ಯರ್ಥಿಗಳು: ರೂ.500 + 18% GST (ಒಟ್ಟು ರೂ.590)

ವೇತನ ಶ್ರೇಣಿ

🔸 ಹಿರಿಯ ಸಹಾಯಕರು:
ರೂ.21,600–600–24,600–700–28,800–800–33,600–900–39,000–1050–40,050

ಕಿರಿಯ ಸಹಾಯಕರು:
ರೂ.20,000–500–21,000–600–24,600–700–28,800–800–33,600–900–36,300

ವಯೋಮಿತಿ

ಅಭ್ಯರ್ಥಿಯು 2025ರ ಜೂನ್ 9 ರಂದು ಕನಿಷ್ಠ 18 ವರ್ಷ ಪ್ರಾಯವನ್ನು ಹೊಂದಿರಬೇಕು.

ಸಾಮಾನ್ಯ ವರ್ಗ: ಗರಿಷ್ಠ 35 ವರ್ಷ
2A, 2B, 3A, 3B ವರ್ಗ: ಗರಿಷ್ಠ 38 ವರ್ಷ
ಪರಿಶಿಷ್ಟ ಜಾತಿ/ಪಂಗಡ/ಪ್ರವರ್ಗ-I: ಗರಿಷ್ಠ 40 ವರ್ಷ

ಆಯ್ಕೆ ವಿಧಾನ

ಲಿಖಿತ ಪರೀಕ್ಷೆ (200 ಅಂಕಗಳು):
– ಕನ್ನಡ ಭಾಷೆ: 50 ಅಂಕ
– ಸಾಮಾನ್ಯ ಜ್ಞಾನ: 25 ಅಂಕ
– ಗಣಿತ ಮತ್ತು ತಾರ್ಕಿಕ ಪ್ರಶ್ನೆಗಳು: 25 ಅಂಕ
– ವಾಣಿಜ್ಯ ವಿಷಯ: 50 ಅಂಕ
– ಭಾರತ ಸಂವಿಧಾನ ಮತ್ತು ಬ್ಯಾಂಕಿಂಗ್ ಜ್ಞಾನ: 25 ಅಂಕ
– ಕಂಪ್ಯೂಟರ್ ಜ್ಞಾನ: 25 ಅಂಕ

ಲಿಖಿತ ಪರೀಕ್ಷೆಯಲ್ಲಿ ಶೇಕಡಾ 85 ಅಂಕಗಳು ಪಡೆದ ಅಭ್ಯರ್ಥಿಗಳಿಗೆ ಸಂದರ್ಶನ ಅವಕಾಶ.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 26-ಮೇ-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 09-ಜೂನ್-2025

ಪ್ರಮುಖ ಲಿಂಕುಗಳು

ನೋಟಿಫಿಕೇಶನ್ (ಅಧಿಸೂಚನೆ): ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್ ಅರ್ಜಿ ಲಿಂಕ್: ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಂ ಗುಂಪಿಗೆ ಸೇರಿಕೊಳ್ಳಿ: ಇಲ್ಲಿ ಕ್ಲಿಕ್ ಮಾಡಿ
ನಮ್ಮ ಯೂಟ್ಯೂಬ್ ಚಾನೆಲ್ ನೋಡಿ: ಇಲ್ಲಿ ಕ್ಲಿಕ್ ಮಾಡಿ

MCC ಬ್ಯಾಂಕ್ ನೇಮಕಾತಿ ಅಧಿಸೂಚನೆ 2025 – ವಿವಿಧ ಖಾಲಿ ಹುದ್ದೆಗಳಿಗೆ ಅರ್ಜಿ ಅಹ್ವಾನ

close button