ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

ರಾಜ್ಯ ಸರ್ಕಾರವು ಕಾರ್ಮಿಕರಿಗೆ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದೆ !

 

ಬೆಂಗಳೂರು : ರಾಜ್ಯ ಸರ್ಕಾರವು ಕಾರ್ಮಿಕರಿಗೆ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಲು ಮುಂದಾಗಿದ್ದು, ವರ್ಷಕ್ಕೆ ಕಾರ್ಮಿಕರ ವೇತನ ಸಹಿತ ರಜೆ ಸಂಖ್ಯೆಯನ್ನು 30 ರಿಂದ 45 ಕ್ಕೆ ಹೆಚ್ಚಿಸುವ 2020 ಸಾಲಿನ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ವಿಧೇಯಕಕ್ಕೆ ಸದನ ಅನುಮೋದನೆ ನೀಡಿತು.

ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್, ಉದ್ಯಮಗಳಿಗೆ ಅನುಕೂಲ ಮತ್ತು ಕಾರ್ಮಿಕ ಹಿತರಕ್ಷಣೆಗೂ ಸರ್ಕಾರ ಬದ್ಧವಾಗಿದೆ. ಇದುವರೆಗೆ ಒಬ್ಬ ಕಾರ್ಮಿಕ ವರ್ಷಕ್ಕೆ 30 ದಿನ ಸಂಬಳ ಸಹಿತ ರಜೆ ಪಡೆಯಲು ಇದ್ದ ಅವಕಾಶವನ್ನು 45 ದಿನಕ್ಕೆ ಹೆಚ್ಚಳ ಮಾಡಲು ನಿರ್ಧರಿಸಿದೆ ಎಂದರು.

ಹೊಸ ಉದ್ಯೋಗ ಸುದ್ದಿ 

ಭಾರತೀಯ ರಿಸೆರ್ವ್ ಬ್ಯಾಂಕ್ ಉದ್ಯೋಗಾವಕಾಶ 

ರಿಸರ್ವ್ ಬ್ಯಾಂಕ್ ಆಫ್​ ಇಂಡಿಯಾದಲ್ಲಿ (ಆರ್​ಬಿಐ) ಖಾಲಿ ಇರುವ ಅಧಿಕಾರಿಗಳ ಹುದ್ದೆಗೆ (ಗ್ರೇಡ್ ಬಿ) ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ.

ಒಟ್ಟು ಹುದ್ದೆಗಳು: 322

ಆರ್​ಬಿಐ ನಲ್ಲಿರುವ ಗ್ರೇಡ್ ಬಿ ಅಧಿಕಾರಿಗಳ ಹುದ್ದೆಯಲ್ಲಿ
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 130 ಹುದ್ದೆಗಳು ,
ಎಸ್ಸಿಗೆ 59 ಹುದ್ದೆಗಳು
ಎಸ್ಟಿಗೆ 35 ಹುದ್ದೆಗಳು
ಇತರ ಹಿಂದುಳಿದ ವರ್ಗಕ್ಕೆ 68 ಹುದ್ದೆಗಳು,
ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 30 ಹುದ್ದೆಗಳು ಮೀಸಲಿರಿಸಲಾಗಿದೆ.

ಈ ಹಿಂದೆ ಮೊದಲ ಹಂತದ ಪರೀಕ್ಷೆಗೆ 6 ಬಾರಿ ಅರ್ಜಿ ಸಲ್ಲಿಸಿರುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಮತ್ತೆ ಅರ್ಜಿ ಸಲ್ಲಿಸುವಂತಿಲ್ಲ. ಈ ನಿಯಮ ಮೀಸಲಾತಿ ಅಭ್ಯರ್ಥಿಗಳಿಗೆ ಅನ್ವಯವಾಗುವುದಿಲ್ಲ.

ಹುದ್ದೆಗಳ ಸಂಖ್ಯೆ
* ಅಧಿಕಾರಿ ಗ್ರೇಡ್ ಬಿ ಜನರಲ್ – 270

* ಅಧಿಕಾರಿ ಗ್ರೇಡ್ ಬಿ ಡಿಇಪಿಆರ್ – 29
* ಅಧಿಕಾರಿ ಗ್ರೇಡ್ ಬಿ ಡಿಎಸ್‍ಐಎಂ – 23


 

ಶೈಕ್ಷಣಿಕ ವಿದ್ಯಾರ್ಹತೆ
ಜನರಲ್ ವಿಭಾಗದ ಹುದ್ದೆಗೆ ಯಾವುದೇ ಪದವಿ/ ತತ್ಸಮಾನ ಟೆಕ್ನಿಕಲ್ ಅಥವಾ ವೃತ್ತಿ ಆಧಾರಿತ ಪದವಿಯಲ್ಲಿ ಕನಿಷ್ಠ ಶೇ.60 ಅಂಕ ಪಡೆದಿರಬೇಕು. ಉಳಿದ ಹುದ್ದೆಗಳಿಗೆ ಎಕನಾಮಿಕ್ಸ್/ ಎಕನಾಮೆಟ್ರಿಕ್ಸ್/ ಕ್ವಾಂಟಿಟೇಟೀವ್ ಎಕನಾಮಿಕ್ಸ್/ ಮ್ಯಾಥಮೆಟಿಕಲ್ ಎಕನಾಮಿಕ್ಸ್/ ಇಂಟರ್‍ಗ್ರೇಟೆಡ್ ಎಕನಾಮಿಕ್ಸ್/ ಫೈನಾನ್ಸ್/ ಅಗ್ರಿಕಲ್ಚರಲ್/ ಬಿಜಿನೆಸ್/ ಡೆವೆಲಪ್‍ಮೆಂಟ್/ ಸ್ಟ್ಯಾಟಿಸ್ಟಿಕ್ಸ್/ ಮ್ಯಾಥಮೆಟಿಕಲ್ ಸ್ಟಾೃಟಿಸ್ಟಿಕ್ಸ್‍ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕನಿಷ್ಠ ಶೇ.55 ಅಂಕ ಪಡೆದಿರಬೇಕು.

ವಯೋಮಿತಿ: 1.1.2021ಕ್ಕೆ ಅನ್ವಯವಾಗುವಂತೆ ಕನಿಷ್ಠ 21 ವರ್ಷ, ಗರಿಷ್ಠ 30 ವರ್ಷ. ಎಂ.ಫಿಲ್, ಪಿಎಚ್.ಡಿ ಮಾಡಿದ ಅಭ್ಯರ್ಥಿಗಳಿಗೆ ಗರಿಷ್ಠ 32 ಹಾಗೂ 34 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇದೆ.

ವೇತನ: ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಮೂಲ ವೇತನ 35,150 ರೂ. ನಿಂದ 83,254 ರೂ. ಇದ್ದು, ಡಿಎ, ಸ್ಥಳೀಯ ಭತ್ಯೆ, ಮನೆ ಬಾಡಿಗೆ ಭತ್ಯೆ, ಕುಟುಂಬ ಭತ್ಯೆ ಹಾಗೂ ಗ್ರೇಡ್ ಭತ್ಯೆಗಳನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ: 2 ಹಂತದ ಆನ್‍ಲೈನ್ ಪರೀಕ್ಷೆ ಅಂಕ ಆಧರಿಸಿ ಶಾರ್ಟ್‍ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಿ ಆಯ್ಕೆ ಮಾಡಲಾಗುವುದು. ಆನ್‍ಲೈನ್ ಪರೀಕ್ಷೆಯ ಪತ್ರಿಕೆ 1ಕ್ಕೆ ಕರ್ನಾಟಕದ ಬೆಂಗಳೂರು, ಗುಲ್ಬರ್ಗ, ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿಗಳಲ್ಲಿ ಪರೀಕ್ಷಾ ಕೇಂದ್ರ ಇರಲಿದೆ. ಜತೆಗೆ ಇತರ ರಾಜ್ಯಗಳಲ್ಲೂ ಪರೀಕ್ಷಾ ಕೇಂದ್ರ ಇರಲಿದ್ದು, ಸಾಮಾನ್ಯ ಜ್ಞಾನ, ಇಂಗ್ಲಿಷ್ ಭಾಷೆ, ಕ್ವಾಂಟಿಟೇಟೀವ್ ಆಫ್ಟಿಟ್ಯೂಡ್ ಮತ್ತು ರೀಸನಿಂಗ್ ಸಂಬಂಧಿತ ಪ್ರಶ್ನೆಗಳಿರುತ್ತವೆ. ಫೇಸ್2 ಗೆ ಬೆಂಗಳೂರು ಸೇರಿ ಇತರ ನಗರಗಳಲ್ಲಿ ಪರೀಕ್ಷಾ ಕೇಂದ್ರ ಇರಲಿದೆ. ಇದರಲ್ಲಿ ಅರ್ಥಶಾಸ ಮತ್ತು ಸಾಮಾಜಿಕ ಸಮಸ್ಯೆ, ಇಂಗ್ಲಿಷ್, ಫೈನಾನ್ಸ್ ಆಯಂಡ್ ಮ್ಯಾನೇಜ್‍ಮೆಂಟ್ ಸಂಬಂಧಿತ ಪ್ರಶ್ನೆಗಳಿರುತ್ತವೆ. ಆನ್‍ಲೈನ್ ಪರೀಕ್ಷೆಯು ಮಾರ್ಚ್ 6 ರಿಂದ ಪ್ರಾರಂಭವಾಗಲಿದೆ.


ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳು ಮಾಹಿತಿ ಶುಲ್ಕವಾಗಿ 100 ರೂ. ಪಾವತಿಸಬೇಕು, ಸಾಮಾನ್ಯವರ್ಗ, ಇತರ ಹಿಂದುಳಿದ ವರ್ಗ, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳು ಮಾಹಿತಿ ಶುಲ್ಕ ಜತೆ ಅರ್ಜಿ ಶುಲ್ಕವಾಗಿ 850 ರೂ. ಪಾವತಿಸಬೇಕು.

* ಉಚಿತ ತರಬೇತಿ
ಮೀಸಲಾತಿ ಅಭ್ಯರ್ಥಿಗಳಿಗೆ ಫೇಸ್ 1 ಹಾಗೂ 2ರ ಪರೀಕ್ಷೆಗೆ ಉಚಿತವಾಗಿ ತರಬೇತಿ ನೀಡಲಾಗುವುದು. ಅರ್ಜಿ ಭರ್ತಿ ಮಾಡುವಾಗ ತರಬೇತಿ ಪಡೆಯಲು ಆಸಕ್ತಿ ಇರುವವರು ಸೂಚನೆ ನೀಡಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನ: 15.2.2021

Website
Notification
close button