ಉಡುಪಿ: ನ್ಯಾಯಬೆಲೆ ಅಂಗಡಿಯ ಅಕ್ಕಿಯಲ್ಲಿ ಕಲಬರಕೆಯಾಗುವ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಿರುತ್ತವೆ. ಅದೇ ರೀತಿ ಇದೀಗ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲೂ ಅಂತದ್ದೇ ಪ್ರಕರಣ ಬೆಳಕಿಗೆ ಬಂದಿದೆ.ಕಾರ್ಕಳದ ಬೆಳ್ಮಣ್ ಪಂಚಾಯತಿ ವ್ಯಾಪ್ತಿಯಲ್ಲಿ ಇಂತದ್ದೊಂದು ದೂರು ಕೇಳಿಬಂದಿದೆ. ನ್ಯಾಯಬೆಲೆ ಅಂಗಡಿಯಿಂದ ಅಕ್ಕಿ ಕೊಂಡೋಗಿ ಮನೆಯಲ್ಲಿ ಅನ್ನ ಮಾಡಲು ಅಕ್ಕಿ ತೊಳೆಯುವಾದ ಅದರಲ್ಲಿ ಹೊಳೆಯುವ ಹರಳಿನ ರೂಪದ ವಸ್ತುಗಳು ಸಿಕ್ಕಿದೆ. ಪಂಚಾಯತಿಗೆ ಬಂದ ಅಕ್ಕಿಯ ಎರಡು ಗೋಣಿ ಚೀಲದಲ್ಲಿ ಮಾತ್ರ ಈ ರೀತಿಯ ಕಲಬರಕೆಯಾಗಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಪಂಚಾಯತ್ ಅಧ್ಯಕ್ಷರು ಆಹಾರ ಇಲಾಖೆಯನ್ನು ಒತ್ತಾಯಿಸಿದ್ದಾರೆ.
All Rights Reserved by udyogabindu.com 2017