ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

ಅಂಚೆ ಜೀವ ವಿಮೆ ಏಜೆಂಟ್‌ಗಳ ನೇಮಕಾತಿ 2021- indian post life insurance agents recruitment 2021

ಕಲಬುರಗಿ ಅಂಚೆ ವಿಭಾಗದ ವ್ಯಾಪ್ತಿಯಲ್ಲಿ ಅಗತ್ಯ ಇರುವ ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ವ್ಯವಹಾರಕ್ಕಾಗಿ ಅಂಚೆ ಜೀವ ವಿಮೆ ಏಜೆಂಟ್‌ಗಳ ನೇಮಕ ಮಾಡಿಕೊಳ್ಳಲು ಪ್ರಕಟಣೆ ಹೊರಡಿಸಲಾಗಿದೆ. ಇದೇ ಜುಲೈ 15 ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿ ಜಗತ್ ವೃತ್ತದ ಹತ್ತಿರವಿರುವ ಕಲಬುರಗಿ ಅಂಚೆ ವಿಭಾಗದ ವರಿಷ್ಠ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ನೇರ ಸಂದರ್ಶನವನ್ನು ಏರ್ಪಡಿಸಲಾಗಿದೆ. ಈ ಕುರಿತು ಕಲಬುರಗಿ ವರಿಷ್ಠ ಅಂಚೆ ಅಧೀಕ್ಷಕರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಹುದ್ದೆಯ ಹೆಸರು: ಅಂಚೆ ಜೀವ ವಿಮೆ ಏಜೆಂಟ್‌
ಹುದ್ದೆಯ ಸ್ಥಳ: ಕಲಬುರಗಿ ಮತ್ತು ಯಾದಗಿರಿ ಜಿಲ್ಲೆ

ಅರ್ಹತೆಗಳು
– ಅಭ್ಯರ್ಥಿಗಳ ವಯೋಮಿತಿ 18 ರಿಂದ 50 ವರ್ಷದೊಳಗಿರಬೇಕು.
– ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದಿರಬೇಕು.

ಈ ಮೇಲೆ ತಿಳಿಸಲಾದ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಮೂಲ ದಾಖಲೆಗಳೊಂದಿಗೆ ನಿಗದಿತ ದಿನಾಂಕದಂದು ನೇರವಾಗಿ ಸಂದರ್ಶನಕ್ಕೆ ಹಾಜರಾಗಬೇಕು. ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಕಲಬುರಗಿ ಅಂಚೆ ವಿಭಾಗದ ವರಿಷ್ಠ ಅಂಚೆ ಅಧೀಕ್ಷಕರ ಕಛೇರಿ ದೂರವಾಣಿ ಸಂಖ್ಯೆ 08472-263800 ಗೆ ಸಂಪರ್ಕಿಸಬಹುದು.

10th Pass Jobs 2021
12th Pass Jobs 2021
7th Pass Jobs 2021
Diploma Pass Jobs 2021
ITI Pass Jobs 2021
Degree Pass Jobs 2021
close button