ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

IDBI ನಲ್ಲಿ 920 ಕಾರ್ಯನಿರ್ವಾಹಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (IDBI) ನಲ್ಲಿ 920 ಕಾರ್ಯನಿರ್ವಾಹಕ ಹುದ್ದೆಗಳಿಗೆ ಅರ್ಜಿ ಆಹ್ವಾನ. ಆಸಕ್ತ ಅರ್ಹ ಮತ್ತು ಅಭ್ಯರ್ಥಿಗಳು ದಿನಾಂಕ : 18/08/2021 ರೊಳಗಾಗಿ ಅರ್ಜಿ ಸಲ್ಲಿಸಬಹುದು.

ಒಟ್ಟು ಹುದ್ದೆಗಳು: 920
ಉದ್ಯೋಗ ಸ್ಥಳ: ಭಾರತದಾದ್ಯಂತ

ವಿದ್ಯಾರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಬೋರ್ಡ್ ದಿಂದ ಸಂಬಂಧಿತ ವಿಭಾಗದಲ್ಲಿ ಪದವಿ ವಿದ್ಯಾರ್ಹತೆಯನ್ನು ಪಡೆದಿರಬೇಕು.

ವಯೋಮಿತಿ:
ದಿನಾಂಕ : 01/07/2021 ರ ಅನ್ವಯ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 20 ವರ್ಷ ಆಗಿರಬೇಕು, ಗರಿಷ್ಠ 25 ವರ್ಷ ಮೀರಿರಬಾರದು. ವಯೋಮಿತಿ ಸಡಿಲಿಕೆ ನಿಯಮವು ಅನ್ವಯವಾಗಲಿದೆ.

ವೇತನ ಶ್ರೇಣಿ:
ಮೊದಲ ವರ್ಷದಲ್ಲಿ ರೂಪಾಯಿ. 29,000/- ಮಾಸಿಕ.
ಎರಡನೇ ವರ್ಷದಲ್ಲಿ ರೂಪಾಯಿ. 31,000/- ಮಾಸಿಕ ಮತ್ತು
ಸೇವೆಯ ಮೂರನೇ ವರ್ಷದಲ್ಲಿ ರೂಪಾಯಿ. 34,000/- ಮಾಸಿಕ ವೇತನ ನೀಡಲಾಗುವದು.

ಅರ್ಜಿ ಶುಲ್ಕ:
ಎಲ್ಲಾ ಇತರ ಅಭ್ಯರ್ಥಿಗಳಿಗೆ (ಅರ್ಜಿ ಶುಲ್ಕ + ಸೂಚನೆ ಶುಲ್ಕಗಳು) ಒಟ್ಟು : ರೂ. 1000/-
ಎಸ್ಸಿ/ ಎಸ್ಟಿ/ ಪಿಡಬ್ಲ್ಯೂಡಿ(PwD) ಅಭ್ಯರ್ಥಿಗಳಿಗೆ (ಇಂಟಿಮೇಷನ್ ಶುಲ್ಕಗಳು): ರೂ. 200/-

ಆಯ್ಕೆ ವಿಧಾನ:
ಅರ್ಹ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವದು.

ಪರೀಕ್ಷಾ ಕೇಂದ್ರಗಳು
ಬೆಂಗಳೂರು ಮತ್ತು ಬೆಳಗಾವಿ

ಪ್ರಮುಖ ದಿನಾಂಕಗಳು
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಮತ್ತು ಶುಲ್ಕ ಪಾವತಿ: 04-08-2021
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಶುಲ್ಕ ಪಾವತಿ: 18-08-2021
ಅರ್ಜಿ ವಿವರಗಳನ್ನು ಸಂಪಾದಿಸಲು ಕೊನೆಯ ದಿನಾಂಕ: 18-08-2021
ನಿಮ್ಮ ಅರ್ಜಿಯನ್ನು ಮುದ್ರಿಸಲು ಕೊನೆಯ ದಿನಾಂಕ: 02-09-2021
ಆನ್‌ಲೈನ್ ಪರೀಕ್ಷೆಯ ತಾತ್ಕಾಲಿಕ ದಿನಾಂಕ: 05-09-2021

👉ವೆಬ್ಸೈಟ್ – Website 
👉ನೋಟಿಫಿಕೇಶನ್ – Notification 
👉 ಅರ್ಜಿ ಲಿಂಕ್ – Apply Online 

IDBI Bank Recruitment 2021 – Apply Online for 920 Executive Posts

Picture of ವರ್ಷಿಣಿ

ವರ್ಷಿಣಿ

ವರ್ಷಿಣಿ ಉದ್ಯೋಗ ಬಿಂದು ವೆಬ್‌ಸೈಟ್‌ನ ಸಕ್ರಿಯ ಬರಹಗಾರ್ತಿ ಮತ್ತು ಸಂಪಾದಕಿ. ಉದ್ಯೋಗ ಅಧಿಸೂಚನೆಗಳು, ಸರ್ಕಾರಿ ಮತ್ತು ಖಾಸಗಿ ಉದ್ಯೋಗ ಸುದ್ದಿಗಳು ಹಾಗೂ ಶೈಕ್ಷಣಿಕ ಮಾಹಿತಿಗಳನ್ನು ಸಂಗ್ರಹಿಸುವುದು, ಪರಿಶೀಲಿಸುವುದು ಮತ್ತು ಸ್ಪಷ್ಟವಾಗಿ ಪ್ರಸ್ತುತಪಡಿಸುವಲ್ಲಿ ವರ್ಷಿಣಿಗೆ ಅನುಭವವಿದೆ. ಅವರು ನಿಖರ ಮತ್ತು ನಂಬಿಗಸ್ಥ ಮಾಹಿತಿಯನ್ನು ಓದುಗರಿಗೆ ತಲುಪಿಸುವುದೇ ತಮ್ಮ ಉದ್ದೇಶವಾಗಿ ಇಟ್ಟುಕೊಂಡಿದ್ದಾರೆ.

Scroll to Top