ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

ಆಧಾರ್ ಕಾರ್ಡ್ ಇದ್ದವರಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ!

 

  • ಆಧಾರ್ ಕಾರ್ಡ್ ಕುರಿತು ಪ್ರತಿಯೊಬ್ಬರಿಗೂ ಅನ್ವಯವಾಗುವ ಅಪ್‌ಡೇಟ್ ನೀಡಿದ ಯುಐಡಿಎಐ
  • ಒಂದು ವೇಳೆ ನೀವು ಆಧಾರ್ ಕಾರ್ಡ್ ಕಳೆದುಕೊಂಡರೆ ಈಗ ಯಾವುದೇ ಸಮಸ್ಯೆ ಇರುವುದಿಲ್ಲ
  • ಎಲ್ಲಿಂದಲಾದರೂ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಬಹುದಾದ ನೇರ ಲಿಂಕ್ ಯುಐಡಿಎಐ ಹಂಚಿಕೊಂಡಿದೆ

ಆಧಾರ್ ಕಾರ್ಡ್ ಬಳಕೆದಾರರಿಗೆ ಇಲ್ಲಿದೆ ಒಂದು ಹೊಸ ಸುದ್ದಿಯಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(UIDAI)ವು ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಒಂದು ಮಹತ್ವದ ಅಪ್‌ಡೇಟ್ ನೀಡಿದೆ. ನಿಮ್ಮ ಆಧಾರ್ ಕಾರ್ಡ್ ಹೋದಲ್ಲಿ ಈಗ ನಿಮಗೆ ಯಾವುದೇ ರೀತಿಯ ಸಮಸ್ಯೆ ಇರುವುದಿಲ್ಲ. ಯುಐಡಿಎಐ ಈಗ ಆನ್‌ಲೈನ್‌ನಲ್ಲಿ ಆಧಾರ್ ಡೌನ್‌ಲೋಡ್ ಮಾಡುವುದನ್ನು ತುಂಬಾ ಸುಲಭ ಮಾಡಿದೆ. ನೀವು ಆಧಾರ್ ಕಾರ್ಡ್ ಅನ್ನು ಎಲ್ಲಿಂದಲಾದರೂ ಡೌನ್‌ಲೋಡ್ ಮಾಡಬಹುದಾದ ನೇರ ಲಿಂಕ್ ಅನ್ನು ಸಹ ಹಂಚಿಕೊಂಡಿದೆ.

ಯುಐಡಿಎಐ(UIDAI) ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ನಿಂದ ಟ್ವೀಟ್ ಮಾಡುವ ಮೂಲಕ ಈ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದೆ. ಆಧಾರ್ ಪ್ರಸ್ತುತ ನಮ್ಮ ಗುರುತಿನ ಪ್ರಮುಖ ದಾಖಲೆಯಾಗಿದೆ. ಬ್ಯಾಂಕ್ ಕೆಲಸ ಅಥವಾ ಸರ್ಕಾರಿ ಯೋಜನೆಯ ಲಾಭ ಪಡೆಯಲು ನಿಮಗೆ ಆಧಾರ್ ಅಗತ್ಯವಿದೆ. ಇದರೊಂದಿಗೆ ಈಗ ಆಧಾರ್ ಅನ್ನು ಒಟ್ಟಿಗೆ ಇಟ್ಟುಕೊಳ್ಳುವುದಕ್ಕೆ ಸಂಬಂಧಿಸಿದ ಅಥವಾ ಅದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ.

 

close button