ಭಾರತ ಸರ್ಕಾರದ ಆದಾಯ ತೆರಿಗೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಇನ್‌ಕಮ್ ಟ್ಯಾಕ್ಸ್ ಡಿಪಾರ್ಟ್‌ಮೆಂಟ್ ಟ್ಯಾಕ್ಸ್ ಅಸಿಸ್ಟಂಟ್ (Tax Assistant) , ಸ್ಟೆನೋಗ್ರಾಫರ್ ಗ್ರೇಡ್-2 ( Stenographer Grade-2), ಮಲ್ಟಿ ಟಾಸ್ಕಿಂಗ್ ಸ್ಟಾಫ್ (Multi Tasking Staff) ಹುದ್ದೆಗಳನ್ನು ಭರ್ತಿ ಮಾಡುತ್ತಿದೆ.
ಹುದ್ದೆಗಳ ವಿವರ
ಟ್ಯಾಕ್ಸ್ ಅಸಿಸ್ಟಂಟ್ – 11
ಸ್ಟೆನೋಗ್ರಾಫರ್ – 5
ಮಲ್ಟಿ ಟಾಸ್ಕಿಂಗ್ ಸ್ಟಾಫ್ – 5
ಶೈಕ್ಷಣಿಕ ಅರ್ಹತೆ
ಟ್ಯಾಕ್ಸ್ ಅಸಿಸ್ಟಂಟ್ ಪದವಿ ಪಾಸ್
ಸ್ಟೆನೋಗ್ರಾಫರ್ ಹುದ್ದೆಗಳಿಗೆ: ದ್ವಿತೀಯ ಪಿಯುಸಿ ಪಾಸ್
ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳಿಗೆ: ಎಸ್‌ಎಸ್‌ಎಲ್‌ಸಿ/ 10ನೇ ತರಗತಿ ಪಾಸ್.
ವಯೋಮಿತಿ
ಈ ಮೇಲಿನ ಯಾವುದೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಪೂರೈಸಿರಬೇಕು. ಹಾಗೂ ಗರಿಷ್ಠ 27 ವರ್ಷ ವಯೋಮಿತಿ ಮೀರಿರಬಾರದು. ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ಅರ್ಜಿ ಸಲ್ಲಿಸುವ ವಿಧಾನ
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯ ಜತೆಗೆ ಅಗತ್ಯ ದಾಖಲೆಗಳಾದ ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಗ್ರಿ ಅಂಕಪಟ್ಟಿಗಳು, ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರಗಳ ಜೆರಾಕ್ಸ್ ಕಾಪಿಗೆ ಅಟೆಸ್ಟ್ ಮಾಡಿ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.
ಅರ್ಜಿ ಸಲ್ಲಿಸಬೇಕಾದ ವಿಳಾಸ : ಡೆಪ್ಯೂಟಿ ಕಮಿಷನರ್, ಆದಾಯ ತೆರಿಗೆ ಇಲಾಖೆ, 3ನೇ ಮಹಡಿ, ರೂಮ್ ನಂಬರ್ 388A, ಸೆಂಟ್ರಲ್ ರೆವಿನ್ಯೂ ಬಿಲ್ಡಿಂಗ್, ಐ.ಪಿ. ಎಸ್ಟೇಟ್, ನವದೆಹಲಿ -110002.
ಈ ಮೇಲಿನ ಸದರಿ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ನವೆಂಬರ್ 15 ರ ವರೆಗೆ ಅವಕಾಶ ಇದೆ. ಜಮ್ಮು ಮತ್ತು ಕಾಶ್ಮೀರ, ಕೇರಳ, ಲಕ್ಷದ್ವೀಪ, ಅಂಡಮಾನ್ ಮತ್ತು ನಿಕೋಬಾರ್ ಅಭ್ಯರ್ಥಿಗಳು ನವೆಂಬರ್ 30 ರವರೆಗೆ ಅರ್ಜಿ ಸಲ್ಲಿಸಬಹುದು.
Website |
Notification PDF / Application Form |
Income Tax Department Recruitment 2021 – Apply for 21 Tax Assistants, Stenographer Posts