ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ನಲ್ಲಿ ಖಾಲಿ ಇರುವ 37 ಐಟಿ ಮ್ಯಾನೇಜರ್ ಹುದ್ದೆಗಳು, ಮತ್ತು ರಿಸ್ಕ್ ಮ್ಯಾನೇಜರ್ ಹುದ್ದೆಗಳು 03 ಸೇರಿ ಒಟ್ಟು 40 ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು Online ಮೂಲಕ ದಿನಾಂಕ : 19-11-2021 ರಿಂದ 28-11-2021 ರ ರಾತ್ರಿ 11:59ರೊಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಒಟ್ಟು ಹುದ್ದೆಗಳು: 40
ಉದ್ಯೋಗ ಸ್ಥಳ: ಭಾರತದಾದ್ಯಂತ
ವಿದ್ಯಾರ್ಹತೆ:
ಐಟಿ ಮ್ಯಾನೇಜರ್ ಮತ್ತು ರಿಸ್ಕ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಟ 60% ಅಂಕಗಳೊಂದಿಗೆ B.E/ B.Tech/ M.E/ M.Tech/ MCA ವಿದ್ಯಾರ್ಹತೆಯನ್ನು ಹೊಂದಿರತಕ್ಕದ್ದು.
ವಯೋಮಿತಿ:
ಐಟಿ ಮ್ಯಾನೇಜರ್ ಮತ್ತು ರಿಸ್ಕ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಸೆಂಬರ್ 31 2020 ರ ಅನ್ವಯ ಕೆಳಗೆ ನೀಡಿರುವ ವಯಯೋಮಿತಿಯನ್ನು ಹೊಂದಿರಬೇಕು.
1) ಐಟಿ ಮ್ಯಾನೇಜರ್ MMGS -II, III, & ರಿಸ್ಕ್ ಮ್ಯಾನೇಜರ್ MMGS -III ಹುದ್ದೆಗಳಿಗೆ- ಕನಿಷ್ಟ 25 ರಿಂದ ಗರಿಷ್ಟ 35 ವರ್ಷಗಳು
2) ರಿಸ್ಕ್ ಮ್ಯಾನೇಜರ್ SMGS -IV ಹುದ್ದೆಗಳಿಗೆ- ಕನಿಷ್ಟ 30 ರಿಂದ ಗರಿಷ್ಟ 40 ವರ್ಷಗಳು
SC/ST ಅಭ್ಯರ್ಥಿಗಳಿಗೆ 5 ವರ್ಷ, OBC ಅಭ್ಯರ್ಥಿಗಳಿಗೆ 3 ವರ್ಷ ಮತ್ತು PH ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೇಮಕಾತಿ ನಿಯಮಾನುಸಾರ ನೀಡಲಾಗಿರುತ್ತದೆ.
ಅರ್ಜಿ ಶುಲ್ಕ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಗಿನಂತೆ ನಿಗದಿತ ಶುಲ್ಕವನ್ನು ಪಾವತಿಸಬೇಕಿರುತ್ತದೆ.
1) General ಮತ್ತು OBC ಅಭ್ಯರ್ಥಿಗಳು 1,003/- ರೂಗಳ ಮತ್ತು
2) SC/ST, PH ಅಭ್ಯರ್ಥಿಗಳು 177/-ರೂಗಳ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕಿರುತ್ತದೆ.
ವೇತನಶ್ರೇಣಿ:
ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ದಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಪ್ರತಿ ತಿಂಗಳಿಗೆ 48,170/-ರೂಗಳ ರಿಂದ 84,890/-ರೂಗಳ ವೇತನವನ್ನು ಪಡೆಯುವರು.
ಆಯ್ಕೆ ವಿಧಾನ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಅರ್ಜಿಯನ್ನು ಕಿರುಪಟ್ಟಿ ತಯಾರಿಸಿ, ನಂತರ ನೇರ ಸಂದರ್ಶನ ಅಥವಾ ದಾಖಲೆ ಪರಿಶೀಲನೆ ಮಾಡುವ ಮೂಲಕ ಆಯ್ಕೆ ಮಾಡಲಾಗುತ್ತದೆ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 19 ನವೆಂಬರ್ 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28 ನವೆಂಬರ್ 2021
Website |
Notification PDF & Application Form |