ಕರ್ನಾಟಕ ಅರಣ್ಯ ಇಲಾಖೆಯು, ಖಾಲಿ ಇರುವ 339 ಅರಣ್ಯ ರಕ್ಷಕ ಹುದ್ದೆಗಳ ನೇರ ನೇಮಕಾತಿ ಕುರಿತಂತೆ, ಸ್ಪರ್ಧಾತ್ಮಕ ಪರೀಕ್ಷೆಯ ಸರಿಯುತ್ತರಗಳನ್ನು ಬಿಡುಗಡೆ ಮಾಡಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ಇಲಾಖೆ ವೆಬ್ಸೈಟ್ಗೆ ಭೇಟಿ ನೀಡಿ ಕೀ ಉತ್ತರಗಳನ್ನು ಚೆಕ್ ಮಾಡಬಹುದು.
ಇಲಾಖೆಯು ದಿನಾಂಕ 05-12-2021 ರಂದು ರಾಜ್ಯದಾದ್ಯಂತ 11 ವೃತ್ತಗಳಲ್ಲಿ ಲಿಖಿತ ಪರೀಕ್ಷೆಯನ್ನು ನಡೆಸಿತ್ತು. ಸದರಿ ಪರೀಕ್ಷೆಯ ಕೀ ಉತ್ತರಗಳನ್ನು ಇದೀಗ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ಈ ಉತ್ತರಗಳಿಗೆ ಯಾವುದಾದರೂ ಆಕ್ಷೇಪಣೆ ಇದ್ದಲ್ಲಿ, ಲಿಖಿತ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಮಾತ್ರ ನಿಗದಿತ ನಮೂನೆಯಲ್ಲಿ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ, ಕೆಳಗೆ ನೀಡಲಾದ ಇ-ಮೇಲ್ ವಿಳಾಸಕ್ಕೆ ಕಳುಹಿಸಲು ಸೂಚಿಸಲಾಗಿದೆ.
ನಿಗಧಿತ ನಮೂನೆಯಲ್ಲಿಯೇ ಕೀ ಉತ್ತರಗಳ ಕುರಿತು ಆಕ್ಷೇಪಣೆಯನ್ನು ಸಲ್ಲಿಸತಕ್ಕದ್ದು, ಇದನ್ನು ಹೊರತುಪಡಿಸಿ, ಬೇರೆ ಯಾವುದೇ ನಮೂನೆಯಲ್ಲಿ ಸಲ್ಲಿಸುವ ಆಕ್ಷೇಪಣೆ ಹಾಗೂ ನಿಗಧಿತ ದಿನಾಂಕ ಮತ್ತು ಸಮಯದ ನಂತರ ಸ್ವೀಕೃತವಾಗುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.
ಅಭ್ಯರ್ಥಿಯ ಹೆಸರು, ನೋಂದಣಿ ಸಂಖ್ಯೆ, ಪ್ರಶ್ನೆ ಪತ್ರಿಕೆಯ ವರ್ಷನ್ ಕೋಡ್, ಪ್ರಶ್ನೆಯ ಸಂಖ್ಯೆ, ಪ್ರಶ್ನೆ, ಇಲಾಖೆ ನೀಡಿರುವ ಕೀ ಉತ್ತರ, ಅಭ್ಯರ್ಥಿ ತಿಳಿಸುವ ಉತ್ತರ, ಉತ್ತರಕ್ಕೆ ದಾಖಲೆ, ಅಡಕಗೊಳಿಸಿರುವ ದಾಖಲೆಗಳನ್ನು ಆಕ್ಷೇಪಣೆ ಅರ್ಜಿಯಲ್ಲಿ ನೀಡಬೇಕು.
ಆಕ್ಷೇಪಣೆ ಅರ್ಜಿ ನಮೂನೆಗಾಗಿ ಮತ್ತು ಕೀ ಉತ್ತರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ
ಆಕ್ಷೇಪಣೆ ಸಲ್ಲಿಸಬೇಕಾದ ಇ-ಮೇಲ್ ವಿಳಾಸ : kfdfg2021@gmail.com
ಆಕ್ಷೇಪಣೆ ಸಲ್ಲಿಸಲು ಕೊನೆ ದಿನಾಂಕ: 13-12-2021 ರ ಸಂಜೆ 05-30 ರೊಳಗೆ.