ಬಿಳಿ ಕೂದಲಿಗೆ ಶಾಶ್ವತ ಪರಿಹಾರ ಇಲ್ಲಿದೆ
ತುಳಸಿ ಎಲೆಗಳ ನೀರು ನಿಮ್ಮ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು. ಇದರ ಎಲೆಗಳಿಂದ ಮಡಿದ ಪೇಸ್ಟ್ ಮತ್ತು ನೀರು ಕೂದಲಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಬಹಳ ಬೇಗ ಪರಿಹಾರ ಸಿಗುತ್ತದೆ. ಹೆಚ್ಚಾಗಿ ಕೂದಲು ಉದುರುವಿಕೆ ಇರುವವರು, ತಲೆಹೊಟ್ಟು ಮತ್ತು ಒಣ ಕೂದಲಿನ ಸಮಸ್ಯೆ ಇದ್ದರೆ ತುಳಸಿ ಎಲೆಗಳನ್ನು ಬಳಸಿ ಸಾಕಷ್ಟು ಜನರು ಪರಿಹಾರ ಕಂಡುಕೊಂಡಿದ್ದಾರೆ.
ಕೂದಲಿನ ತಳಭಾಗಕ್ಕೆ ಮಸಾಜ್ ಮಾಡಿ
ಒಂದು ಪಾತ್ರೆಯಲ್ಲಿ 3 ಲೋಟ ನೀರು ತೆಗೆದುಕೊಳ್ಳಿ ನಂತರ ಆ ಪಾತ್ರೆಯಲ್ಲಿ 20 ರಿಂದ 25 ತುಳಸಿ ಎಲೆಗಳನ್ನು ಬೆರೆಸಿ ಕುದಿಸಿ. ಇದರ ರಸ ನೀರಿನಲ್ಲಿ ಕರಗಿದ ನಂತರ ತಣ್ಣಗಾಗಲು ಬಿಡಿ. ನಂತರ ಆ ನೀರಿನಿಂದ ನಿಮ್ಮ ಕೇಶವನ್ನು ತೊಳೆಯಿರಿ. ಕೂದಲು ತೊಳೆಯುವ ವೇಳೆ ಈ ನೀರಿನಿಂದ ಕೂದಲಿನ ಬುಡಕ್ಕೆ ಸರಿಯಾಗಿ ಮಸಾಜ್ ಮಾಡಿ ಕೊಳ್ಳುವುದನ್ನು ಮರೆಯಬೇಡಿ.
ಎಣ್ಣೆಯಲ್ಲಿ ಮಿಶ್ರಣ ಮಾಡಿ ಬಳಸಿ :
ಹೀಗೆ ಮಾಡಿದರೂ ಕೂದಲು ಉದುರುವಿಕೆ ಕಡಿಮೆಯಾಗುತ್ತದೆ, ತುಳಸಿ ಎಲೆಗಳನ್ನು ಎಣ್ಣೆಯಲ್ಲಿ ಮಿಶ್ರಣ ಮಾಡಿ ನಂತರ ಬಳಸಿ. ತುಳಸಿ ಎಲೆಗಳನ್ನು ಪುಡಿಮಾಡಿ ಎಣ್ಣೆಯಲ್ಲಿ ಮಿಶ್ರಣ ಮಾಡಿಕೊಳ್ಳಿ. ಎಣ್ಣೆಯನ್ನು ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಇರಲು ಬಿಡಿ. ತದನಂತರ ಆ ಎಣ್ಣೆಯನ್ನು ಕೂದಲಿಗೆ ಹಚ್ಚಿ. ಕೆಲಹೊತ್ತು ಕೂದಲಿನ ಮೇಲೆ ಹಾಗೇ ಇರಲು ಬಿಡಬೇಕು. ಸರಿಸುಮಾರು ಒಂದು ಗಂಟೆಯ ನಂತರ ಶಾಂಪೂ ಬಳಸಿ ಕೂದಲನ್ನು ತೊಳೆದುಕೊಳ್ಳಬಹುದು.
ಕರಿಬೇವಿನ ಎಲೆಗಳೊಂದಿಗೆ ಮಿಶ್ರಣ ಮಾಡಿ :
ಕರಿಬೇವಿನ ಎಲೆಗಳು ಮತ್ತು ತುಳಸಿ ಎಲೆಗಳ ಹೇರ್ ಪ್ಯಾಕ್ ಬಳಸಿ ತಲೆ ಹೊತ್ತಿನ ಸಮಸ್ಯೆ ಹೋಗಲಾಡಿಸಬಹುದು. ಈ ಹೇರ್ ಪ್ಯಾಕ್ ಕನಿಷ್ಠ 45 ನಿಮಿಷಗಳ ಕಾಲ ಕೂದಲಿಗೆ ಹಚ್ಚಿ ಹಾಗೇ ಇರಲು ಬಿಡಿ. ನಂತರ ಶಾಂಪೂ ಬಳಸಿ ನಿಮ್ಮ ಕೂದಲನ್ನು ತೊಳೆದುಕೊಳ್ಳಬಹುದು.
ರಕ್ತ ಸಂಚಾರ ಉತ್ತಮವಾಗಿರುತ್ತದೆ:
ತುಳಸಿ ಎಲೆಗಳಲ್ಲಿಇರುವ ಸಾಕಷ್ಟು ಔಷಧೀಯ ಗುಣಲಕ್ಷಣಗಳು ನಿಮ್ಮ ಕೂದಲಿಗೆ ಹಲವಾರು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಇದರ ಎಲೆಗಳು ಹೇರ್ ಫಾಲಿಕಲ್ಸ್ ಗಳನ್ನು ಪುನಃ ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ. ಇದು ಕೂದಲು ಉದುರುವಿಕೆಯ ಸಮಸ್ಯೆಯನ್ನು ತೆಗೆದುಹಾಕುತ್ತದೆ. ಅಷ್ಟೇ ಅಲ್ಲದೆ, ಇದರ ಬಳಕೆ ಮಾಡುತ್ತಿದ್ದರೆ ನೆತ್ತಿಯನ್ನು ತಂಪಾಗಿರಿಸುತ್ತದೆ ಮತ್ತು ರಕ್ತ ಸಂಚಾರ ಸುಧಾರಿಸುತ್ತದೆ.
ಬಿಳಿ ಕೂದಲಿನ ಸಮಸ್ಯೆ ದೂರವಾಗುತ್ತದೆ :
ದೇಹದಲ್ಲಿ ವಿಟಮಿನ್ ಬಿ 12 ಕೊರತೆಯಿಂದಾಗಿ, ಕೂದಲು ಬಿಳಿಯಾಗುವ ಸಮಸ್ಯೆ ಹೆಚ್ಚಾಗಿ ಇರುತ್ತದೆ. ಒಂದು ಬೌಲ್ ಉಗುರುಬೆಚ್ಚಗಿನ ನೀರಿನಲ್ಲಿ 2 ಚಮಚ ಆಮ್ಲಾ ಮತ್ತು ತುಳಸಿ ಪುಡಿಯನ್ನು ಮಿಶ್ರಣ ಮಾಡಿ ರಾತ್ರಿಯಿಡೀ ಅದನ್ನು ಇರಿಸಿ. ಈ ಮಿಶ್ರಣವನ್ನು ಬೆಳಿಗ್ಗೆ ಕೂದಲಿಗೆ ಹಚ್ಚಿ. 40 ನಿಮಿಷಗಳ ನಂತರ ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ.