ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

ಅಸಲಿಗೆ ಅಶೋಕ್ ರಾವ್ ಗೆ ಏನಾಗಿತ್ತು ಗೊತ್ತಾ? Ashok Rao

ಸ್ಯಾಂಡಲ್​ವುಡ್​ನ ಹಿರಿಯ ಕಲಾವಿದ ಅಶೋಕ್​ ರಾವ್​ ಇನ್ನಿಲ್ಲ

ನೂರಾರು ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದ ಹಿರಿಯ ನಟ ಕ್ಯಾನ್ಸರ್ ಕಾಯಿಲೆಯಿಂದ ಅಶೋಕ್​ ರಾವ್​ ಅವರು ನಿಧನರಾಗಿದ್ದಾರೆ.

 

 

ಅಶೋಕ್ ರಾವ್ ಅವರು ಜನಿಸಿದ್ದು ಕಾಸರಗೋಡಿನಲ್ಲಿ. ತಮಿಳುನಾಡಿನಲ್ಲಿ ಅವರು ವಿದ್ಯಾಭಾಸ ಪಡೆದರು. ಸೇಲಂನ ಬಳಿಯ ಒಂದು ವಸತಿ ಶಾಲೆಯಲ್ಲಿ ಅಶೋಕ ರಾವ್​ ಶಿಕ್ಷಣ ಪಡೆದರು. ಆಗ ಅವರಿಗೆ ನಾಟಕಗಳ ಬಗ್ಗೆ ಆಸಕ್ತಿ ಮೂಡಿತ್ತು. ಕಂಚಿನ ಕಂಠದ ಕಾರಣಕ್ಕೆ ಅವರಿಗೆ ಕೆಲವು ಪಾತ್ರಗಳು ಸಿಕ್ಕವು. ಶಾಲಾ ದಿನಗಳಿಂದಲೂ ಅಭಿನಯದ ಬಗ್ಗೆ ಆಸಕ್ತಿ ಮೂಡಿಸಿಕೊಂಡಿದ್ದ ಅವರು ವಿದ್ಯಾಭ್ಯಾಸ ಮುಗಿಸಿದ ಬಳಿಕ ಹಲವು ಇಂಗ್ಲಿಷ್​ ನಾಟಕಗಳಲ್ಲಿ ನಟಿಸಿದ್ದರು. ತದ ನಂತರ ಬಳಿಕ ಸಿನಿಮಾ ರಂಗಗಳಲ್ಲಿ ನಟಿಸುವ ಅವಕಾಶ ಪಡೆದುಕೊಂಡರು.

2021ರ ವರ್ಷದ ಅಂತ್ಯದಿಂದ ಇಲ್ಲಿಯವರೆಗೂ ಸ್ಯಾಂಡಲ್​ವುಡನ ಕೊಂಡಿಗಳು ಒಂದೊಂದಾಗಿ ಕಳಚಿ ಹೋಗುತ್ತಿವೆ. ಪುನೀತ ರಾಜ್ ಕುಮಾರ ಹೋದ ನೋವನ್ನೇ ಮರೆಯಲು ಆಗುತ್ತಿಲ್ಲ. ಅವರ ಹಿಂದೆ ಹಿರಿಯ ನಟ ಶಿವರಾಂ ಕೂಡ ಕೊನೆಯಿಸುರೆಳದಿದ್ದರು. ಇತ್ತೀಚೆಗೆ ಕಿರಾತಕ ನಿರ್ದೇಶಕ ಪ್ರದೀಪ್​ ರಾಜ್ ಕೂಡಾ ವಿಧಿವಶರಾದರು.

ವಿಲನ್​ ಪಾತ್ರ ಮೂಲಕ ಮಿಂಚಿದ್ದ ಅಶೋಕ್​ ರಾವ್​!
ಅಶೋಕ್​ ರಾವ್​ ಅವರು ಹಲವು ವರ್ಷಗಳ ತಮ್ಮ ಸಿನಿಮಾ ಜರ್ನಿಯಲ್ಲಿ ಅನೇಕ ಬಗೆಯ ಪಾತ್ರಗಳನ್ನು ಮಾಡಿದ್ದರು.
ಹೆಚ್ಚಾಗಿ ವಿಲನ್​ ಪಾತ್ರಗಳಲ್ಲಿ ಅವರು ನಟಿಸಿ ಸೈ ಎನಿಸಿಕೊಂಡಿದ್ದರು.ಪರಶುರಾಮ ಸಿನಿಮಾದ ವಿಲನ್ ಪಾತ್ರದಲ್ಲಿ ಅವರನ್ನು ಇಂದಿಗೂ ಜನ ಗುರುತಿಸುತ್ತಾರೆ. ಹಳೆಯ ತಲೆಮಾರಿನ ನಟರಿಂದ ಹಿಡಿದು ಇತ್ತೀಚೆಗಿನ ನಟರವರೆಗೆ ನಟಿಸಿದ ಹಿರಿಮೆ ಅವರದ್ದು. ತಮ್ಮ ವೃತ್ತಿ ಜೀವನದಲ್ಲಿ ಸುಮಾರು 100 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು.

ಅಶೋಕ್ ರಾವ್​ ನಿಧನಕ್ಕೆ ಕನ್ನಡ ಚಿತ್ರರಂಗದ ಅನೇಕರು ಕಂಬನಿ ಮಿಡಿಯುತ್ತಿದ್ದಾರೆ. ಸ್ಯಾಂಡಲ್​ವುಡ್​​ ಸಿನಿಮಾ ಪ್ರೇಕ್ಷಕರು, ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಅಶೋಕ್ ರಾವ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸೋಶಿಯಲ್​ ಮೀಡಿಯಾ ಮೂಲಕ ಪ್ರಾರ್ಥಿಸುತ್ತಿದ್ದಾರೆ.

 

close button