ಕರ್ನಾಟಕ ಲೋಕಸೇವಾ ಆಯೋಗದಿಂದ ನೇಮಕಾತಿ ಅಧಿಸೂಚನೆ 2022
KPSC Group B Post Recruitment 2022: ಕರ್ನಾಟಕ ಪಬ್ಲಿಕ್ ಸರ್ವೀಸ್ ಕಮಿಷನ್, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಗ್ರೂಪ್ ಬಿ ಹುದ್ದೆಗಳ ನೇಮಕಾತಿಗೆ ಇಲಾಖೆಯಿಂದ ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ,
ಇಲಾಖೆ ಹೆಸರು: | ಕರ್ನಾಟಕ ಲೋಕಸೇವಾ ಆಯೋಗ |
ಹುದ್ದೆಗಳ ಹೆಸರು: | ವಿವಿಧ ಗ್ರೂಪ್ ಬಿ ಹುದ್ದೆಗಳು |
ಒಟ್ಟು ಹುದ್ದೆಗಳು | 33 |
ಅರ್ಜಿ ಸಲ್ಲಿಸುವ ಬಗೆ | ಆನ್ಲೈನ್ |
ವಿದ್ಯಾರ್ಹತೆ:
ಹುದ್ದೆ: ಮುದ್ರಣ, ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆ- ಸಹಾಯಕ ನಿರ್ದೇಶಕರು
ನಿಗಧಿತ ವಿದ್ಯಾರ್ಹತೆ : ಮೆಕ್ಯಾನಿಕಲ್ / ಇಲೆಕ್ಟ್ರಾನಿಕ್ಸ್ / ಪ್ರಿಂಟಿಂಗ್ ಟೆಕ್ನಾಲಜಿ / ಕಂಪ್ಯೂಟರ್ ಸೈನ್ಸ್ ಬಿಇ ಅಥವಾ ಭೌತಶಾಸ್ತ್ರ / ರಸಾಯನ ಶಾಸ್ತ್ರ ಎಂಎಸ್ಸಿ ಪಾಸ್
ಹುದ್ದೆ : ಭಾಷಾಂತರ ನಿರ್ದೇಶನಾಲಯದಲ್ಲಿನ ಭಾಷಾಂತರಕಾರರು
ನಿಗಧಿತ ವಿದ್ಯಾರ್ಹತೆ: ಎಂಎ ಕನ್ನಡ ಪಾಸ್ ಹಾಗೂ ಡಿಗ್ರಿಯಲ್ಲಿ ಇಂಗ್ಲಿಷ್ ಭಾಷೆಯನ್ನು ಒಂದು ಭಾಷಾ ಸಬ್ಜೆಕ್ಟ್ ಆಗಿ ಓದಿರಬೇಕು. ಅಥವಾ ಇಂಗ್ಲಿಷ್ ಎಂಎ ಹಾಗೂ ಡಿಗ್ರಿಯಲ್ಲಿ ಕನ್ನಡ ಭಾಷಾ ವಿಷಯ ಓದಿರಬೇಕು.
ಹುದ್ದೆ: ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಲ್ಲಿ ನಗರ ಯೋಜಕರು
ನಿಗಧಿತ ವಿದ್ಯಾರ್ಹತೆ: ಸಿವಿಲ್ ಇಂಜಿನಿಯರಿಂಗ್ ಅಥವಾ ಆರ್ಕಿಟೆಕ್ಚರ್ ಅನ್ನು ಅಂಗೀಕೃತ ವಿವಿಯಿಂದ ಪಾಸ್ ಮಾಡಿರಬೇಕು.
ವಯೋಮಿತಿ:
ಕನಿಷ್ಠ 18 ವರ್ಷ ಆಗಿರಬೇಕು.
ಗರಿಷ್ಠ 35 ವರ್ಷ ವಯೋಮಿತಿ ಮೀರಿರಬಾರದು.
ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ.
ಎಸ್‌ಸಿ / ಎಸ್‌ಟಿ / ಪ್ರ-1 ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ.
ವೇತನಶ್ರೇಣಿ:
ಮುದ್ರಣ, ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆ- ಸಹಾಯಕ ನಿರ್ದೇಶಕರು: Rs.40900-78200.
ಭಾಷಾಂತರ ನಿರ್ದೇಶನಾಲಯದಲ್ಲಿನ ಭಾಷಾಂತರಕಾರರು: Rs.40900-78200.
ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಲ್ಲಿ ನಗರ ಯೋಜಕರು: Rs.43100-83900.
ಅರ್ಜಿ ಶುಲ್ಕ:
ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ ರೂ.600.
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.300.
ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.50.
ಎಸ್‌ಸಿ / ಎಸ್‌ಟಿ / ಪ್ರವರ್ಗ-1, ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಪ್ರಮುಖ ದಿನಾಂಕಗಳು |
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | 29-03-2022 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 28-04-2022 |
ಅಪ್ಲಿಕೇಶನ್ ಶುಲ್ಕವನ್ನು ಪಾವತಿಸಲು ಕೊನೆ ದಿನಾಂಕ | 29-04-2022 |
ಪ್ರಮುಖ ಲಿಂಕುಗಳು |
ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
ನೋಟಿಫಿಕೇಶನ್ | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |